ಪುತ್ತೂರು ; ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ) ಮಂಗಳೂರು ಸಹಯೋಗದಲ್ಲಿ ವಿವೇಕ ವಿದ್ಯಾ ಸಂಸ್ಥೆಗಳು ,ಕೋಟ ಮತ್ತು ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ(ರಿ) ಸಾಲಿಗ್ರಾಮದಲ್ಲಿ ನಡೆದ 23ನೇ ವರ್ಷದ ಮಕ್ಕಳ ದ್ವನಿ-2016 ರಲ್ಲಿ ಸುದಾನ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಭಿಷೇಕ್ ಪಿ ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಥಾಗೋಷ್ಟಿಯಲ್ಲಿ ಅಭಿಜ್ಞಾ ಕೆ ಸಿ(8- ಶ್ರೀಮತಿ ಕವಿತಾ ಅಡೂರು, ಚಂದ್ರಶೇಖರ ಭಟ್ ದಂಪತಿಗಳ ಮಗಳು) ಭಾಗವಹಿಸಿ “ಹೀಗೊಂದು ಮೋಸ” ಎಂಬ ಕಥೆಯನ್ನು ಪ್ರಸ್ತುತ ಪಡಿಸಿ ಜನಮೆಚ್ಚುಗೆ ಪಡೆದಳು. ಅಭಿನಯ ಗೀತೆಗೋಷ್ಠಿ ವಿಭಾಗದಲ್ಲಿ ಶ್ಯಾಂ ಎಂ ಎಸ್(1- ಶ್ರೀಮತಿ ಸೌಮ್ಯ, ಡಾ.ಶ್ರೀಕೃಷ್ಣ ಗಣರಾಜ ಭಟ್ ದಂಪತಿಗಳ ಪುತ್ರ) ಭಾಗವಹಿಸಿ ಅಭಿನಯಗೀತೆಯನ್ನು ಹಾಡಿ ಪ್ರೇಕ್ಷಕರ ಮನಸೆಳೆದನು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಿರಿಯ ಸರ್ಫರ್ ಆಗಿರುವ ಸಿಂಚನಾ ಡಿ ಗೌಡ( 10- ಶ್ರೀಮತಿ ಮೀನಾಕ್ಷಿ, ಟಿ ಡಿ ಗೌಡ ದಂಪತಿಗಳ ಮಗಳು) ರನ್ನು ಕ್ರೀಡಾವಲಯದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು. ಉದಯೋನ್ಮುಖ ಪ್ರತಿಭಾವಂತ ಮಕ್ಕಳಿಗಾಗಿ ನಡೆಯುವ ಮಕ್ಕಳದ್ವನಿ ಕಾರ್ಯಕ್ರಮ ಮಕ್ಕಳಿಂದಲೇ ಆಯೋಜಿತವಾಗಿರುವುದು ವಿಶೇಷ. ಜಿಲ್ಲೆಯ ಹಲವು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
