ಮನುಜನ ಪ್ರತಿಯೊಂದು ಕ್ರಿಯೆಗೂ ಒಂದು ನಿರ್ದಿಷ್ಟವಾದ ಗುರಿ ಇದ್ದೇ ಇರುತ್ತದೆ.ಒಂದುವೇಳೆ ಗುರಿಯೇ ಇಲ್ಲದಿದ್ದರೆ ಆ ಕ್ರಿಯೆ ಪರಿಪೂರ್ಣ ಕ್ರಿಯೆ ಆಗುವುದಿಲ್ಲ. ಇದು ದಿನ ನಿತ್ಯದ ಜೀವನ ಆಗಿರಲಿ ಅಥವಾ ಒಟ್ಟಾರೆ ಬದುಕಿನ ಎಲ್ಲಾ ದಿನಗಳಾಗಿರಲಿ ಅವುಗಳಲ್ಲಿ ಗುರಿ ಎನ್ನುವುದು ಪ್ರತಿಯೊಂದು ಕ್ರಿಯೆಗೂ ಇದ್ದೇ ಇರುತ್ತದೆ.
*ಹಾಗಾದರೆ ಗುರಿ ನಿರ್ಣಯ ಎಂದರೇನು?

ನಮ್ಮ ಗುರಿಗಳಾವು ಎಂದು ನಾವು ತಿಳಿದುಕೊಂಡರೆ ಅವುಗಳನ್ನು ನಿರ್ಣಯಿಸಿಕೊಳ್ಳುವುದು ಸುಲಭ. ನಮ್ಮ ಭವಿಷ್ಯದ ಯೋಜನೆ ಮತ್ತು ಯೋಚನೆಗಳನ್ನು ಕಾರ್ಯರೂಪಕ್ಕೆ ತರುವುದೇ ಗುರಿನಿರ್ಣಯ. ಅಂದರೆ ಮುಂದೆ ನಾನೇನು ಸಾಧಿಸಬೇಕು? ನಾನೇನು ಆಗಬೆಕು?ಯಾವ ದಿಕ್ಕಿನಲ್ಲಿ ಸಾಗಬೇಕು? ಇತ್ಯಾದಿ ಯೋಚನೆ ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದೇ ಗುರಿ ನಿರ್ಣಯ. ಈ ಗುರಿ ನಿರ್ಣಯ ಕ್ರಿಯೆಯಿಂದ ನಾವು ಜೀವನದಲ್ಲಿ ಎತ್ತ ಸಾಗಬೇಕು ಅಥವಾ ಏನನ್ನು ಸಾಧಿಸಬೇಕು ಎನ್ನುವುದು ತಿಳಿಯುತ್ತದೆ. ಏಕೆಂದರೆ ಜೀವನ ಎನ್ನುವುದು ಒಂದು ಕ್ರಿಯೆಯಲ್ಲ, ಇಲ್ಲಿ ಹಲವಾರು ಕ್ರಮ-ಕಾರ್ಯಗಳು ಇವೆ. ಹಾಗಾಗಿ ಜೀವನದಲ್ಲಿ ಎತ್ತ ಸಾಗಬೇಕು ಅಥವಾ ಏನನ್ನು ಸಾಧಿಸಬೇಕು ಎಂದು ಮುಂಚಿತವಾಗಿ ನಿರ್ಣಯಿಸಿ ಕೊಳ್ಳುವುದು ಅತ್ಯಂತ ಅವಶ್ಯಕ. ನಮಗೆ ಏನನ್ನು ಸಾಧಿಸಬೆಕು ಎನ್ನುವ ಬಗ್ಗೆ ಸ್ಪಷ್ಟತೆ ಇದ್ದರೆ ನಾವು ಅದಕ್ಕಾಗಿ ಏನನ್ನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತೇವೆ. ಅಂತಹ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮ ಪಡುತ್ತೇವೆ. ಆ ಕಾರ್ಯದಲ್ಲಿ ತಲ್ಲೀನರಾಗುತ್ತೇವೆ. ಅದು ಎಷ್ಟೇ ಸಣ್ಣ ಕಾರ್ಯ ಅಥವಾ ದೊಡ್ಡ ಕಾರ್ಯಬೇಕಾದರೂ ಆಗಿರಲಿ.
ಆತ್ಮ ವಿಶ್ವಾಸ ಹೆಚ್ಚಿಸುತ್ತದೆ

ಒಮ್ಮೆ ನಮ್ಮ ಗುರಿಗಳನ್ನು ನಿರ್ಣಯಿಸಿಕೊಂಡರೆ ಅವುಗಳ ಈಡೇರುವಿಕೆಗಾಗಿ ಅವಶ್ಯಕ ಶ್ರಮ ವಹಿಸಿ ಕೆಲಸ ಪ್ರಾರಂಭಿಸುತ್ತೇವೆ. ಇದರಿಂದ ನಮ್ಮ ಆತ್ಮ ವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ಒಂದು ಗುರಿ ತಲುಪಿದಕ್ಕಾಗಿ ನಮಗೆ ಸಾಧಿಸಿದ ಸಂತೃಪ್ತಿ ಇದ್ದು, ನಮ್ಮ ಮೇಲೆ ನಮಗೆ ಗೌರವ ಹೆಚ್ಚಾಗುತ್ತದೆ. ಆತ್ಮ ವಿಶ್ವಾಸ ಇದ್ದರೆ ಏನನ್ನು ಕೂಡ ಸಾಧಿಸಬಹುದು ಎಂದು ಹಿರಿಯರು ಹೇಳಿರುವಂತೆ ಆತ್ಮ ವಿಶ್ವಾಸ ನಮ್ಮ ಮುಂದಿನ ಗುರಿ ಮುಟ್ಟುವಿಕೆಗೂ ಸಹಕಾರಿಯಾಗುತ್ತದೆ. ಇದರಿಂದ ನಾವು ಹೆಚ್ಚು ಹೆಚ್ಚು ಗುರಿಗಳನ್ನು ಇಟ್ಟುಕೊಳ್ಳಲು ಪ್ರಾರಂಭಿಸುತ್ತೇವೆ. ನಮ್ಮ ಮಾಜಿ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರು ಒಂದು ಮಾತನ್ನು ಹೇಳಿದ್ದಾರೆ, ಕೇವಲ ಕನಸು ಕಂಡರೆ ಸಾಲದು, ಕಂಡ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು, ಇದೇ ಗುರಿ ನಿರ್ಣಯ. ನಾವು ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡುತ್ತಾ ಹೋದಂತೆಲ್ಲ ಸಮಾಜದ ಮುಖ್ಯ ವಾಹಿನಿಗೆ ಬರುತ್ತಾ ಹೋಗುತ್ತೇವೆ, ಅಲ್ಲದೆ ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ. ಇದು ಇನ್ನಷ್ಟು ಆತ್ಮ ವಿಶ್ವಾಸ ನಮ್ಮಲ್ಲಿ ಹೆಚ್ಚಿಸುವುದು ಮಾತ್ರವಲ್ಲ ನಮ್ಮ ಕ್ರಿಯೆಗಳಿಗೆ ಅರ್ಥವನ್ನು ಉದ್ದೇಶವನ್ನು ನೀಡುತ್ತದೆ.

Dreams and aims are sensational words
Make your dream as your aim
But never make your aim as your dream.

ಈ ಮಾತಿನಲ್ಲಿ ಎಷ್ಟೊಂದು ಅರ್ಥ ಅಡಗಿದೆ. ನಮ್ಮ ಗುರಿ ಎಂದಿಗೂ ಕನಸಾಗಿ ಉಳಿಯಬಾರದು.
ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರ ಕೈಗೊಳ್ಳುವುದು ಎನ್ನುವುದು ಒಂದಕ್ಕೊಂದು ಪೂರಕವಾಗಿರುತ್ತದೆ. ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯ, ಮನೋಭಾವ ಇರುತ್ತದೆ. ಅಂತವರು ತಮ್ಮ ಗುರಿಗಳನ್ನು ಬೇಗ ಮುಟ್ಟುತ್ತಾರೆ. ಅದೇ ಆತ್ಮ ವಿಶ್ವಾಸದ ಕೊರತೆ ಇದ್ದವರು ಸೋಲಿಗೆ ಶರಣಾಗುತ್ತಾರೆ. ಇಂತಹ ಸೋಲುಗಳನ್ನು ಎದುರಿಸಲು ಸಾಧ್ಯವಾಗದೆ ಸಾವಿಗೂ ಶರಣಾಗುವವರ ಸಂಖ್ಯೆಗಳೂ ಹೆಚ್ಚಿದೆ.

ಜಗದ್ವಿಖ್ಯಾತ ನಾಟಕಕಾರ ಶೇಕ್ಸ್‍ಪಿಯರ್ ಬಗ್ಗೆ ಯಾರಿಗೇ ತಾನೇ ಗೊತ್ತಿಲ್ಲ? ಆದರೆ ಅವನು ತನ್ನ 5ನೇ ತರಗತಿಯಲ್ಲಿ 2 ಬಾರಿ ಫೇಲಾಗಿ ಮುಂದೆ ಮಹಾಕವಿಯಾದ.
ಪ್ರಪಂಚದಲ್ಲಿಯೇ ಹೆಸರಾಂತ ವಿಜ್ಞಾನಿಗಳ ಸಾಲಿನಲ್ಲಿ ಅಗ್ರಸ್ಥಾನಗಳಿಸುವವರು ಬೆಂಜಮಿನ್ ಫಾಂಕ್ಲಿನ್. ಈತ ತನ್ನ ಪ್ರತೀ ಪರೀಕ್ಷೆಗಳಲ್ಲೂ ಗಣಿತದಲ್ಲಿ ಅನುತ್ತೀರ್ಣನಾಗುತ್ತಿದ್ದ. ಆದರೆ ಹಠ ಹಿಡಿದು ಸಾಧಿಸಿ ದೊಡ್ಡ ವಿಜ್ಞಾನಿ ಆದ.

ಪ್ರಪಂಚದ ಮಹಾನ್ ಭಾಷಣಗಾರರ ಸಾಲಿನಲ್ಲಿ ಆಲ್ಬರ್ಟ್ ಐನ್ ಸ್ಟೈನ್ ಗೆ ಗೌರವದ ಸ್ಥಾನಮಾನವಿದೆ. ಆದರೆ ಆತನಿಗೆ ಹತ್ತನೇ ವಯಸ್ಸಿನ ತನಕ ಸರಿಯಾಗಿ ಮಾತೇ ಬರುತ್ತಿಲ್ಲ.
ವಿಶ್ವೇಶ್ವರಯ್ಯ ಆತ್ಮವಿಶ್ವಾಸದ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಅವರು ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡರೂ ಧೃತಿಗೆಡದೆ ಕೇವಲ ಒಂದು ಹೊತ್ತು ಊಟಮಾಡಿ ಬೀದಿ ದೀಪದ ಅಡಿಯಲ್ಲಿ ಓದಿ ಸಾಧನೆ ಮಾಡಿದವರು.

ಇಂತಹ ನೂರಾರು ಜೀವಂತ ಉದಾಹರಣೆಗಳ ಪಟ್ಟಿಯನ್ನೇ ಮಾಡಬಹುದು. ಇವರಲ್ಲಿ ಇದ್ದದ್ದು ಆತ್ಮವಿಶ್ವಾಸ ಅಲ್ಲವೇ? ಇವರು ಅಂದು ಸೋಲಿಗೆ ಶರಣಾಗಿ ಸಾಧಿಸುವುದು ನಿಲ್ಲಿಸುತ್ತಿದ್ದರೆ ಪ್ರಪಂಚದ ಅದೆಷ್ಟೋಂದು ಸಾಧನೆಗಳು ಇನ್ನೂ ಕೈಗೆಟುಕದ ವಿಷಯಗಳಾಗುತ್ತಿತ್ತು.
ರೈಟ್ಸ್ ಸಹೋದರರ ಹಾರುವ ಹಕ್ಕಿಯ ಕಥೆಯೂ ತಮಗೆ ತಿಳಿದಿದೆ. ಅದೆಷ್ಟೊಂದು ಅವಮಾನ, ಸೋಲು ಎದುರಿಸಿ ಕೊನೆಗೊಂದು ದಿನ ಇಡೀ ಜಗತ್ತಿಗೇ ಹಾರುವ ಉಕ್ಕಿನ ಹಕ್ಕಿಗಳ ಪರಿಚಯ ಮಾಡಿ ಸಾಧನೆ ಮೆರೆದರು.

ಒಂದು ಪುಸ್ತಕದಲ್ಲಿ ಓದಿದ ಸಣ್ಣ ಘಟನೆಯೊಂದು ನೆನಪಿಗೆ ಬರುತ್ತಿದೆ. ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರದ ಕೊರತೆಯಿಂದ ಏನಾಗಬಹುದು ಎಂದು ಕಥೆಯೊಂದಿಗೆ ಹೇಳಿದ್ದಾರೆ; ಅದೇನೆಂದರೆ:
ಒಮ್ಮೆ ಒಂದು ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ಪಕ್ಷಿಯೊಂದು ದಣಿವು ನೀಗಿಸಲು ಕುಳಿತು ಕೊಂಡಿತು. ಆದರೆ ಆ ಪಕ್ಷಿಗೆ ನಿದ್ದೆ ಬಂದದ್ದೇ ಗೊತ್ತಾಲಿಲ್ಲ. ಹಡಗು ಬಂದರು ಬಿಟ್ಟು ಮುಂದೆ ಸಾಗಿತು. ಸುಮಾರು 5 ಕಿ.ಮೀ ಕ್ರಮಿಸಿದ ನಂತರ ಹಕ್ಕಿಗೆ ಎಚ್ಚರ ಆಯಿತು. ತಕ್ಷಣ ಅದು ಹಡಗು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ಹಾರಲು ಪ್ರಾರಂಭಿಸಿತು. ಸುಮಾರು 3 ಕಿಮೀ ದೂರ ಕ್ರಮಿಸಿದ ನಂತರ ಇದು ತನ್ನಿಂದ ಸಾಧ್ಯವಿಲ್ಲ ಎಂದು ವಾಪಾಸು ಹಡಗಿನತ್ತ ಹಾರಿತು. ಅದಾಗಲೇ ಹಡಗು ಇನ್ನಷ್ಟು ದೂರ ಹೋಇ ಆಗಿತ್ತು. ಹಡಗಿನಲ್ಲಿ ಕುಳಿತು ಸ್ವಲ್ಪ ವಿರಮಿಸಿದ ಪಕ್ಷಿ ನಾನು ಹಿಂದಿನ ಬಾರಿ ತಪ್ಪು ದಿಕ್ಕಿಗೆ ಹಾರಿರಬೇಕು. ಈ ಬಾರಿ ಹಡಗು ಸಾಗುತ್ತಿರುವ ದಿಕ್ಕಿನಲಲೇ ಸಾಗುತ್ತೇನೆ ಎಂದು ಅತ್ತ ಹಾರಿತು. ಆದರೆ ಪುನ: 4-5 ಕಿಮೀ ಹಾರಿ ವಾಪಾಸು ಮರಳಿತು. ಒಟ್ಟಾರೆಯಾಗಿ ಪಕ್ಷಿಗೆ ದೃಢವಾದ ನಿರ್ಧಾರ ತಾನೆತ್ತ ಹಾರಬೇಕೆಂದು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಪುನ: ವಿರುದ್ದ ದಿಕ್ಕಿಗೆ ಹಾರಿತು. ಆದರೆ ದಾರಿ ಮಧ್ಯದಲ್ಲಿ ಸುಸ್ತಾಗಿ ಸಮುದ್ರಕ್ಕೆ ಬಿದ್ದು ಮೀನಿಗೆ ಆಹಾರವಾಯಿತು.

ಇದರಿಂದ ತಿಳಿಯುವುದೇನೆಂದರೆ ನಮ್ಮಲ್ಲಿ ಆತ್ಮವಿಶ್ವಾಸ ಇದ್ದರೆ ಮಾತ್ರ ದೃಢವಾದ ನಿರ್ಧಾರಗಳನ್ನು ಕೈಗೊಳ್ಳಲು ಆಗುವುದು. ಪ್ರಥಮ ಪ್ರಯತ್ನದಲ್ಲಿಯೇ ಆ ಪಕ್ಷಿ ದೃಢವಾದ ನಿರ್ಧಾರ ಕೈಗೊಂಡು ಅದೇ ದಿಕ್ಕಿನಲ್ಲಿ ಸಾಗುತ್ತಿದ್ದರೆ ವಾಪಾಸು ಹಡಗಿಗೆ ಬರುವ ಮೊದಲೇ ಗುರಿ ತಲುಪಿ ಬಿಡಬಹುದಿತ್ತು.
ಇಂದು ನಮ್ಮಲ್ಲಿ ಆಗುತ್ತಿರುವುದೂ ಇದೇ. ದೃಢವಾದ ಆತ್ಮವಿಶ್ವಾಸದ ಕೊರತೆಯಿಂದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸೋಲಿಗೆ ಶರಣಾಗಬೇಕಾಗುತ್ತಿದೆ. ನಾವು ಗುರಿ ತಲುಪಬೇಕಾದರೆ ಎಂದಿಗೂ ನಮ್ಮ ಆತ್ಮ ವಿಶ್ವಾಸದಲ್ಲಿ ಇಳಿಮುಖ ಆಗದಂತೆ ನೋಡಿಕೊಳ್ಳಬೇಕು. ಅಂತಹ ಸೋಲುಗಳನ್ನು ಸವಾಲಾಗಿ ಸ್ವೀಕರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ಗುರಿ ನಿರ್ಣಯದಲ್ಲಿ ಮತ್ತು ನಿರ್ಣಯಿಸಿದ ಗುರಿ ತಲುಪುವುದರಲ್ಲಿ ಇನ್ನೊಂದು ಪ್ರಮುಖ ಅಸ್ತ್ರವೇ ಸ್ವಪ್ರೇರಣೆ. ಇದು ಅತ್ಯಂತ ಅವಶ್ಯಕ. ನಮ್ಮ ಗುರಿ ನಮಗೆ ಸದಾ ಪ್ರೇರಣೆ ನೀಡುತ್ತಿರಬೇಕು. ಬಾಹ್ಯ ಪ್ರೇರಣೆಯ ಸಹಾಯವೇ ಇಲ್ಲದೇ ಬೇಕಾದರೆ ಗುರಿ ತಲುಪಬಹುದು. ಆದರೆ ಸ್ವಪ್ರೇರಣೆ ಇಲ್ಲದಿದ್ದರೆ ಒಂದೇ ಒಂದು ಹೆಜ್ಜೆ ಕೂಡ ಆ ನಿಟ್ಟಿನಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಸ್ವಪ್ರೇರಣೆಯ ಮಹತ್ವವನ್ನು ನಾವು ಅರ್ಥೈಯಿಸಿಕೊಳ್ಳಬೇಕಾದರೆ ಸಾಧಕರ ಜೀವನ ಚರಿತ್ರೆಗಳನ್ನು ಒಮ್ಮೆ ಓದಿ ನೋಡಬೇಕು. ಎಷ್ಟೋ ಬಾರಿ ಬಾಹ್ಯ ಬೆಂಬಲವಾಗಲಿ ಪ್ರೋತ್ಸಾಹವಾಗಲಿ ಇರುವುದೇ ಇಲ್ಲ. ಅಲ್ಲದೆ ಅವರ ಮನೆಯಿಂದಲೂ ಯಾವುದೇ ಪ್ರೇರಣೆ ಇರುವುದಿಲ್ಲ. ಅಂತಹ ಸಮಯದಲ್ಲಿ ಅವರಲ್ಲಿ ಇದ್ದದ್ದು ಸ್ವಪ್ರೇರಣೆ ಮಾತ್ರ. ಅವರು ಗುರಿ ತಲುಪಲು ಸಾಧ್ಯವಾದದ್ದು ಅದರಿಂದ ಮಾತ್ರ, ಹಾಗಾಗಿ ನಾವು ಕೂಡ ನಮ್ಮ ಗುರಿ ತಲುಪುವುದರಲ್ಲಿ ಸ್ವ-ಪ್ರೇರಣೆ ಹೊಂದಿರಲೇ ಬೇಕು.
*ಗುರಿ ನಿರ್ಣಯದ ಬಗೆಗೆಳು:
ಗುರಿಗಳನ್ನಿ ವಭಜಿಸುವುದು ಕಷ್ಟವಲ್ಲ ಸಾಕಷ್ಟು ಕಡೆಗಳಲ್ಲಿ ನಾವು ಕೇಳಿದ್ದುಂಟು ನಮಗೆ ನಮ್ಮ ಗುರಿಗಳನ್ನು ವಿಭಾಗಿಸಿಕೊಳ್ಳುವಲ್ಲಿ ಕಷ್ಟವಾಗುತ್ತದೆ ಎಂದು ಪ್ರಮುಖವಾಗಿ ನಮ್ಮ ಗುರಿಗಳನ್ನು 3 ವಿಭಾಗಗಳಾಗಿ ವಿಂಗಡಿಸಬಹುದು.ಅವುಗಳನ್ನು ಅದ್ಯಯನ ಮಾಡುವ ಬಗ್ಗೆ ಮೊದಲಿಗೆ ನಾವು ಮಾಡುವ ಕೆಲಸೊಮ್ಮೆ ನಮ್ಮ ಗುರಿಗಳನ್ನು ಬರೆದುಕೊಳ್ಳಬೇಕು.ಅದಯಾವುದೇ ಗುರಿಗಳಾಗಲಿ ಬೇಕಾದರೆ ನಾನು ಮುಖ್ಯಮಂತ್ರಿಯಾಗಬೇಕು ಎಂದಿರಲಿ.
1 ದೀರ್ಘಾವಧಿಯ ಗುರಿಗಳು
2 ಮದ್ಯಮ ಅವಧಿಯ ಗುರಿ
3 ಕನಿಷ್ಟ ಅವಧಿಯ ಗುರಿಗಳು

ಸಾಮಾನ್ಯವಾಗಿ ದೀರ್ಘ ಅವಧಿಯ ಉರಿಯೆನ್ನುವುದು ಯಾವುದಾದರೋಂದು ನಿರ್ದಿಷ್ಟ ಕ್ಷೇತ್ರದಲ್ಲಿ 5-10 ವರ್ಷದಲ್ಲಿ ಸಾಧಿಸುವಂತಾದುದು.
ಮಾದ್ಯಮಿಕ ಗುರಿ-ಈ ಗುರಿಗಳು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಇರುತ್ತದೆ.ಕೆಲವರಿಗೆ ಮಾದ್ಯಮಿಕ ಗುರಿ ಎನ್ನುವುದು ದೀರ್ಘ ಅವಧಿಯ ಗುರಿಯಾಗಿರಬಹುದು ಹಾಗಾಗಿ ನಮ್ಮ ದೀರ್ಘ ಅವಧಿಯದ್ದೇ ಎಂದು ಮಂಚಿತವಾಗಿ ನಿರ್ಧಾರಕೈಗೋಳ್ಳಬೇಕು.ಸಾಧಿಸಲು ಅಸಾದ್ಯವಾದುದು ಯಾವುದು ಅಲ್ಲ ಅವರಿಂದ ಸಾದ್ಯವಾದದ್ದು ನನ್ನಿಂದಲೂ ಸಾದ್ಯ ಎಂಬ ಆಶಾವಾದ ದೃಢ ನಂಬಿಕೆ ಇರಬೇಕು.

ಕನಿಷ್ಟ ಅವಧಿಯ ಗುರಿ: ಇಂತಹ ಗುರಿಗಳು ತಕ್ಷಣದ ಆ ದಿನದ ಒಂದು ವಾರದ ಒಂದು ತಿಂಗಳ ಅಥವಾ ಕೆಲವು ತಿಂಗಳ ಗುರಿಗಳಾಗಿರುತ್ತದೆ.
ಜೀವನ ಎನ್ನುವುದು ಕೇವಲ ಒಂದೇ ಕಾರ್ಯಕ್ಕಾಗಿ ಇರುದಿಲ್ಲ ಇಲ್ಲಿ ಗುರಿಗಳೆನ್ನುವುದು ಹಲವಾರು ಸಾವಿರಾರು ಆದ ಕಾರಣ ಕೆಲವೊಂದನ್ನು ನಾವು ಈ ರೀತಿ ವಿಂಗಡಿಸೋಣ ಇದೇ ರೀತಿ ಬೇರೆ ಬೇರೆ ಅಂಶಗಳಲ್ಲಿ ನಿಮ್ಮ ನಿಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಿ. ಒಮ್ಮೆ ಗುರಿ ನಿರ್ಣಯ ಆದ ನಂತರ ಕಾರ್ಯಪ್ರವಬತ್ತರಾಗುವುದೇ ಮುಂದಿನ ಹಂತ ಪ್ರತಿ ದಿನ ಪ್ರತಿ ಗಂಟೆ ಆ ಗುರಿ ತಲುಪುವ ಹಂಬಲದಲ್ಲಿ ಸಾಗಬೇಕು ಎನೇ ಕೆಲಸ ಮಾಡಿದರೂ ಆ ಗುರಿಗಳ ತಲುಪಿವಿಕೆಗಾಗಿಯೇ ಎನ್ನುವುದು ಮರೆಯಬಾರದು.
5 ಗುರಿ ನಿರ್ಣಯದ ಪಂಚ ಸೂತ್ರಗಳು:-
ನಿಮ್ಮನ್ನು ಪ್ರೇರೆಪಿಸುವ ಗುರಿಗಳನ್ನು ನಿರ್ಧರಿಸಿಕೊಳ್ಳಿ-
Sಒಂಖಖಿ (ಉಔಂಐ) -ನಿರ್ದಿಷ್ಟವಾಗಿರಬೇಕು
ಅಳತೆಮಾಡುವಂತಾಗಬೇಕು
ಸಾಧಿಸುವಂತಾಗಬೇಕು
ಸತ್ಯವಾಗಿರಬೇಕು
ಸಮಯದ ಚೌಕಟ್ಟಿನಲ್ಲಿ
ನಿರ್ದಿಷ್ಟವಾದ ಗುರಿ ನಿರ್ಣಯಿಸಿಕೊಳ್ಳಿ:-ನಮ್ಮ ಗುರಿಯಲ್ಲಿ ಸ್ಪಷ್ಟತೆ ಇರಲಿ.ಒಟಾರೆಯಾಗಿ ಅರ್ಥವೂ ಇಲ್ಲದ ಸಾಧಿಸಲೂ ಆಗದ ಗುರಿಗಳನ್ನು ಇಟ್ಟುಕೊಂಡರೆ ಅದರಲ್ಲಿ ಮಹತ್ವವಿಲ್ಲ.ಏಕೆಂದರೆ ಅದನ್ನು ಸಾಧಿಸಲು ನಿರ್ದಿಷ್ಟತೆ ಅಥವಾಸ್ಪಷ್ಟತೆ ಇರುದಿಲ್ಲ.ನಮ್ಮ ಗುರಿಗಳೆ ನಮಗೆ ಸಾಧಿಸಲು ದಾರಿ ತೋರಿಸುವಂತಾಗಬೇಕು.
ಅಳತೆ ಮಾಡುವಂತಹ ಗುರಿಗಳನ್ನು ಇಟ್ಟುಕೊಳ್ಳಿ:- ನಮ್ಮ ಗುರಿಯಲ್ಲಿ ದಿನಾಕಗಳನ್ನು ಸಮಯವನ್ನು ಅಂಕಿ ಅಂಶಗಳನ್ನು ಇಟ್ಟುಕೊಳ್ಳುದರಿಂದ ಅದನ್ನು ಅಳತೆ ಮಾಡಲು ಸಾದ್ಯವಾಗುತ್ತದೆ.ಶೇಕಡ ಎಷ್ಟು ಗುರಿ ತಲುಪಿದ್ದೇವೆಎಂದು ಸ್ಪಷ್ಟಗೊಳಿಸಲು ಸಾದ್ಯವಾಗುತ್ತದೆ.
ಸಾಧಿಸುವಂತಹ ಗುರಿಯನ್ನು ಇಟ್ಟುಕೊಳ್ಳಿ, ನೈಜವಾದ ಗುರಿ,ಸಮಯದ ನಿರ್ಣಯ
ಗುರಿಯನ್ನು ಬರೆದಿಡಿ:ನಮ್ಮ ಗುರಿಗಳನ್ನು ಬರೆದಿಡುವುದು ನಮ್ಮ ಮೇಲೆ ತುಂಬಾ ಪ್ರಭಾವ ಬೀರುಉತ್ತದೆ. ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬುವ ಕಾರ್ಯಾಗಾರದಲ್ಲಿ ನಾನು ಸಾಕಷ್ಟು ವಿಚಾರ ತಿಳಿಸಿದ್ದೇನೆ.

Listen to your elder advise
Not because they are always right
But because they have more expriance of being wrong.

ಕಾರ್ಯರೂಪಕ್ಕೆ ಕ್ರಮ ಕೈಗೊಳ್ಲಿ:- ನಮ್ಮ ಗುರಿ ಸಾಧಿಸಬೇಕಾದದ್ದು ನಾವೇ ಹಾಗಾಗಿ ಅವುಗಳ ಸಾಧನೆಗೆ ಕ್ರಮ ಕೈಗೊಳ್ಳಬೇಕಾದದ್ದು ನಾವೇ ಕೇವಲ ಗುರಿಗಳನ್ನು ಮೇಲೆ ತಿಳಿಸಿದಂತೆ ವಿವಿಧ ಕ್ರಮಗಳಲ್ಲಿಅಳವಡಿಸಿಕೊಂಡರೆ ಸಾಲದು.ಅವುಗಳ ಈಡೇರುವಿಕೆಗಾಗಿ ಶ್ರಮ ವಹಿಸಬೇಕಾದ್ದು ನಾವೇ.ನಮ್ಮ ಯೋಜನೆಗಳಿಗೆ ತಕ್ಕ ಫಲ ಸಿಗಬೇಕಾದರೆ ಶೃದ್ದೆಯಿಂದ ಅದೇ ದಾರಿಯಲ್ಲಿ ಸಾಗಬೇಕು.
5 ಗುರಿಗೆ ಅಂಟಿಕೊಂಡಿರಿ:ಎನೇ ಕಷ್ಟಬಂದರೂ ನಾನು ಎದುರಿಸುತೇನೆ.ನನ್ನ ಗುರಿಯನ್ನು ತಲುಪಿಯೇ ತಲುಪುತ್ತೇನೆ.ಎನ್ನು ವಿಶ್ವಾಸ ಬೆಳೆಸಿಕೊಳ್ಲಬೇಕು.ಅದಕ್ಕಾಗಿ ಗುರಿಗೆ ಅಂಟಿಕೊಂಡಿರಬೇಕು.

ಗುರಿ ಸಾಧಿಸಿದಾಗ ಈ ಕೆಳಗಿನ ಅಂಶಗಳನ್ನು ಮರೆಯಬೇಡ್ಳಿ
* ಒಂದು ವೇಳೆ ನಿಮ್ಮ ಗುರಿಯನ್ನು ಅನಾಯಾಸವಾಗಿ ಸಾಧಿಸಿದ್ದರೆ ಮುಂದಿನದ್ದನ್ನು ಸ್ಪಲ್ಪ ಕಷ್ಟಕರವಾದದ್ದನ್ನೇ ಆಯ್ಟುಕೊಳಿ
* ಒಂದು ವೇಳೆ ಗುರಿ ಸಾಧನೆ ಅತ್ಯಂತ ದೀರ್ಘ ಅವಧಿ ಪಡೆದರೆ ಮುಂದಿನzರಲ್ಲಿ ಅಡಿಮೆ ಅವದಿ ತಲುಪುವಂತೆ ಜಾಗೃತೆ ವಹಿಸಿ
* ಒಂದು ಗುರಿ ಸಾಧನೆಯಲ್ಲಿ ನೀವು ಕಲಿತದನ್ನು ಮುಂದಿನದರಲ್ಲಿ ಅಳವಡಿಸಲು ಮರೆಯಬೇಡಿ
* ಪ್ರತಿ ಸಲ ಪೂರಕ ಗುರಿಗಳನ್ನುಇಟ್ಟುಕೊಳ್ಳಿ
* ವಿಫಲವಾದರೂ ಪ್ರಯತ್ನ ಬಿಡಬೇಡಿ
* ಬದಲಾವಣೆ ಅನಿವಾರ್ಯವೇ ಆದರೆ ಬದಲಾಯಿಸುವುದು ತಪ್ಪಲ್ಲ.
* ಪ್ರತಿ ಗುರಿಯಲ್ಲೂ ಮಾನವೀಯತೆ ಇರಲಿ
* ವೈಯತ್ತಿಕ ಸಾಧನೆಗೆ ಸಮಾಜವನ್ನು ಹಾಳೂ ಮಾಡಬೇಡಿ
* ಗುರಿ ಸಾಧನೆ ನಿಮಗೂ ಇನ್ನೋಬ್ಬರಿಗೂ ಪ್ರೇರಣೆ ಆಗಿರಲಿ.
ಗುರಿ ನಿರ್ಣಯವು ಅಷ್ಟೊಂದು ಸುಲಭವಲ್ಲ ಆಧರೆ ದೃತಿಗೆಡುವಷ್ಟು ಕಷ್ಟವೂ ಅಲ್ಲನಮ್ಮ ಗುರಿಗಳನ್ನುನಾವೇ ಸಾಧಿಸಬೇಕು ಎನ್ನುವುದ ತಿಳಿದುಕೊಳ್ಳಬೇಕು.

*ಶ್ರೀ ರಾಘವೇಂದ್ರ ಪ್ರಭು,ಕರ್ವಾಲು

By suddi9

Leave a Reply

Your email address will not be published. Required fields are marked *