ಕೈಕಂಬ:ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಅ.25 ಗುರುವಾರದಂದು ತೆಂಕಬೆಳ್ಳೂರಿನ ಧನುಪೂಜೆಯ ನೀರಿನ ಟಾಂಕಿಯ ಬಳಿಯ “ಮಾಜಿ ಸೈನಿಕ ದಿ.ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸಂಜೆ 6ರಿಂದ ಧನುಪೂಜೆಯಿಂದ ಗರ್ಗಲ್ವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ.ಉದ್ಘಾಟನಾ ಸಭಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರು ಹಿ.ಪ್ರಾ.ಶಾಲೆ ತೆಂಕಬೆಳ್ಳೂರು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಗೌರವಾಧ್ಯಕ್ಷರು ಅನಂತರಾಮ ಹೇರಳ ವಹಿಸಲಿದ್ದಾರೆ. ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಚಾಲಕರು ಕಾಂತಪ್ಪ ಶೆಟ್ಟಿ ಕೊಡ್ಮಾನ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷರು ಜಯಂತಿ .ಎಸ್ ಬಟ್ಟಾಜೆ,ನಿವೃತ್ತ ಶಿಕ್ಷಕರು ಹಿ.ಪ್ರಾ. ಬಡಗಬೆಳ್ಳೂರು ಗಂಗಾಧರ ರೈ ಕಮ್ಮಾಜೆ, ಮಹಿಮಾ ಸಾಫ್ಟ್ ಡ್ರಿಂಕ್ಸ್ ಮಾಲಕರು ಕಮ್ಮಾಜೆ ರಿಚರ್ಡ್ ಜಾನ್ ಫೆರ್ನಾಂಡಿಸ್, ಬಡಗಬೆಳ್ಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೀಟಾ, ಅಮ್ಮುಂಜೆ ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಭಂಡಾರಿ, ಇಂಜಿನಿಯರ್ ರೊಬರ್ಟ್ ಡಿ’ಸೋಜಾ, ತಾಂತ್ರಿಕ ಸಂಯೋಜಕರು ಮಹೇಶ್,ಉಪಸ್ಥಿತರಿರುವರು.

ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಮಂದಿರದ ಧರ್ಮದರ್ಶಿ ದೇಜಪ್ಪ, ಬಹುಮಾನ ವಿತರಣೆ ಉದ್ಯಮಿ ಹರೀಶ್ ಪೂಂಜ, ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರು,ಪ್ರಸಾದ್ ವುಡ್ ಇಂಡಸ್ಟ್ರೀಸ್ ಮಾಲಕರುರೀತೇಶ್ ಬಾಳಿಗಾ, ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷರು ಲಯನ್ ನವೀನ್ ಕುಮಾರ್,ಕನಪಾಡಿತ್ತಾಯ ದೇವಸ್ಥಾನ ಕಳ್ಳಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯ ನಾಗೇಶ್ ಪೆರೋಡಿಬೀಡು, ವೀರಯೋಧ ಯಾಧವ ಫ್ರೇಂಡ್ಸ್ ಅಮ್ಮುಂಜೆ ಸ್ಥಾಪಕಾಧ್ಯಕ್ಷರು ಜನಾರ್ಧನಾ ಪೂಜಾರಿ ಬಾರಿಂಜೆ, ಬಾಲಕೃಷ್ಣ ಉದ್ಯಮಿ ಪೊಳಲಿ, ಉಮೇಶ್ ಸಾಲ್ಯಾನ್ ಉದ್ಯಮಿ ಬೆಂಜನಪದವು ಉಪಸ್ಥಿತರಿರುವರು.
