ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯಲ್ಲಿ ಬಾವಿಗೆ ಬಿದ್ದ ಎರಡು ನರಿಗಳನ್ನು ಮೂಡುಬಿದಿರೆ ಅರಣ್ಯ ಇಲಾಖೆಯವರು ಶುಕ್ರವಾರ ರಕ್ಷಣೆ ಮಾಡಿದ್ದಾರೆ.
ಕಡಂದಲೆಯ ಬೋಜ ಅಂಚನ್ ಎಂಬವರ ಬಾವಿಗೆ ಎರಡು ನರಿಗಳು ಗುರುವಾರ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಅರಣ್ಯ ಅಧಿಕಾರಿ ಜಿ.ಡಿ ದಿನೇಶ್ ನೇತೃತ್ವದ ಅರಣ್ಯ ಇಲಾಖೆಯ ತಂಡ ನರಿಗಳನ್ನು ಬಲೆಯ ಮುಖಾಂತರ ಬಾವಿಯಿಂದ ಹೊರತೆಗೆದು ಕಾಡಿಗೆ ಬಿಟ್ಟಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಅನಿಲ್ ಕೆ., ಸಿಬ್ಬಂದಿಗಳಾದ ಎ.ಕೆ ಅಣ್ಣಯ್ಯ, ರಮೇಶ್ ನಾಯ್ಕ್, ಮಿಥುನ್ ಕುಮಾರ್, ಬಸಪ್ಪ, ಸದಾನಂದ, ಗ್ರಾಮಸ್ಥರಾದ ಕೊರಗಪ್ಪ, ಕೃಷ್ಣಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.


