ಬಂಟ್ವಾಳ: ಪುರಸಭೆ , ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಇದರ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ಪಾಣೆಮಂಗಳೂರು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜರಗಿತು. ಪುರಸಭಾ ಮುಖ್ಯಾಧಿಕಾರಿ ಬಿ.ಎಚ್.ಸುಧಾಕರ್, ಆರೋಗ್ಯಾಧಿಕಾರಿ ರತ್ನಪ್ರಸಾದ್, ಪುರಸಬಾ ಸದಸ್ಯೆ ಚಂಚಲಾಕ್ಷಿ , ಲಯನ್ಸ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಕಾರ್ಯದರ್ಶಿ ಉಮೇಶ್ ಆಚಾರ್, ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ಲಯನೆಸ್ ಅಧ್ಯಕ್ಷೆ ದೇವಿಕಾ ದಾಮೋದರ್, ಕೋಶಾಧಿಖಾರಿ ವೃಂದಾ ಕುಡ್ವ, ಲಯನ್ಸ್ ಸದಸ್ಯರಾದ ಡಾ.ವಸಂತ್ ಬಾಳಿಗಾ, ಬಿ.ದಾಮೋದರ್, ಸತೀಶ್ ಕುಡ್ವ, ಮಧ್ವರಾಜ್ ಕಲ್ಮಾಡಿ, ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.


