ಬಂಟ್ವಾಳ: ದ.ಕ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿ ತುಂಬೆ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು. ಕ್ರೀಡಾಕೂಟವನ್ನು ಗ್ರಾ.ಪಂ.ಸದಸ್ಯ ಮಧುಸೂಧನ ಶೆಣೈ ಉದ್ಘಾಟಿಸಿದರು. ಈ ಸಂದರ್ಭ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಾಧವ ವಳವೂರು, ಚಂದ್ರಹಾಸ ಕರ್ಕೇರ, ಕೊಡಂಗೆ ಪ್ರೌಢ ಶಾಲಾ ಮು. ಶಿಕ್ಷಕ ಭಾಸ್ಕರ, ಎಸ್ಡಿಎಂಸಿ ಸದಸ್ಯರು, ಬ್ರಹ್ಮರಕೂಟ್ಲು ಮು.ಶಿಕ್ಷಕಿ ಫ್ಲೋರಿನ್ ರೆಬೆಲ್ಲೊ, ಸ.ಶಿಕ್ಷಕಿ ಭಾರತಿ, ನಿವೃತ್ತ ಮುಖ್ಯ ಶಿಕ್ಷಕ ಸೇಸಪ್ಪ ಮಾಸ್ತರ್, ದೈಹಿಕ ಶಿಕ್ಷಕಿಯರಾದ ದೇವಿ, ವೇದಾವತಿ, ಮಂಜುಳ, ಪ್ಲೇವಿ ಫೆರ್ನಾಂಡಿಸ್, ಡಯಾನ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಒಟ್ಟು 12 ತಂಡ ಹುಡುಗರು 12 ತಂಡ ಹುಡುಗಿಯರು ಭಾಗವಹಿಸಿದ್ದಾರೆ.


