ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದ ವತಿಯಿಂದ ನಿರ್ಮಿಸಲಾದ ಧ್ವಜಸ್ಥಂಭವನ್ನು ಕಾವಳಪಡೂರು ಮಧ್ವ ಅಂಗನವಾಡಿ ಕೇಂದ್ರ ಕ್ಕೆ ಹಸ್ತಾಂತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಧ್ಯಜಾರೋಹಣ ನೆರವೇರಿಸಿದರು. ಸತತ 25ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿ ಮೀನಾಕ್ಷಿಯವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ ಶ್ರೀಧರ್, ತಾ.ಪಂ.ಸದಸ್ಯೆ ಧನಲಕ್ಷ್ಮೀ ಬಂಗೇರಾ, ಅಂಗನವಾಡಿ ಕೇಂದ್ರದ ಅಧ್ಯಕ್ಷ ಆನಂದ ಪೂಜಾರಿ, ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್, ಅಂಗನವಾಡಿ ಶಿಕ್ಷಕಿ ನಳಿನಿ , ಎಸ್.ಕೆ.ಪಿ.ಎ.ಗೌರವ ಸಲಹೆಗಾರ ಹರೀಶ್ ರಾವ್, ಸದಸ್ಯರಾದ ಅರುಣ್ ಕುಮಾರ್, ಶಿವಪ್ರಸಾದ್, ಶ್ರೀಪ್ರಸಾದ್, ಪ್ರವೀಣ್ ಚಂದ್ರ ಉಪಸ್ಥಿತರಿದ್ದರು.

SKP6

By Suddi9

Leave a Reply

Your email address will not be published. Required fields are marked *