ಮಂಗಳೂರು ನಗರದ ಹೊರವಲಯದ ಕಾರ್ಮಿಕ ನಗರದ ಆರು ಕುಟುಂಬಗಳು ಅಪಾಯದ ಭೀತಿಯಲ್ಲಿವೆ. ಬುಧವಾರ ಸುರಿದ ಭಾರಿ ಮಳೆಗೆ ಇಲ್ಲಿನ ಜಾಗವೊಂದರ ಆವರಣ ಗೋಡೆ ಕುಸಿದು ಬಿದ್ದು ರಸ್ತೆ ಪೂರ್ತಿ ಬಂದ್ ಆಗಿದೆ. ಇದೀಗ ಈ ಕಂಪೌಂಡ್‌ನ ಮತ್ತೊಂದು ಭಾಗದಲ್ಲಿರುವ ಆರು ಮನೆಗಳು ಕಂಪೌಂಡ್ ಯಾವಾಗ ಬೀಳುತ್ತದೋ ಎಂಬ ಆತಂಕದಲ್ಲಿವೆ.
ಮೈಕಲ್ ರೇಗೊ ಎಂಬವರಿಗೆ ಸೇರಿದ ಜಾಗದ ಸುಮಾರು 20 ಅಡಿ ಎತ್ತರದ ಆವರಣ ಗೋಡೆ ಕುಸಿದು ಬಿದ್ದಿದ್ದು, ಅಡಿಪಾಯ ಗಟ್ಟಿಗೊಳಿಸದೆ ಇಷ್ಟು ಎತ್ತರಕ್ಕೆ ಗೋಡೆ ಕಟ್ಟಿದ್ದೇ ಉರುಳಿ ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಈ ಗೋಡೆಗೆ ತಾಗಿಕೊಂಡು ಇನ್ನೊಂದು ಭಾಗದಲ್ಲಿ ಆರು ಮನೆಗಳಿದ್ದು, ಈಗ ಆ ಮನೆಗಳಲ್ಲಿ ಚಿಂತೆ ಆವರಿಸಿದೆ. ಇಲ್ಲಿ ಮಳೆಗಾಲದಲ್ಲಿ ನೀರು ವೇಗವಾಗಿ ಮನೆಗಳ ಪಕ್ಕದಲ್ಲಿ ಸಾಗುತ್ತಿರುವುದು ಆತಂಕಕ್ಕೆ ಇನ್ನೊಂದು ಕಾರಣ. ಅಡಿಪಾಯ ಗಟ್ಟಿ ಇಲ್ಲದೆ 20 ಅಡಿ ಎತ್ತರಕ್ಕೆ ಗೋಡೆ ನಿರ್ಮಿಸಲಾಗಿದೆ. ಅಧಿಕ ಎತ್ತರ ನಿರ್ಮಿಸಿದ್ದರಿಂದ ಅಪಾಯ ಒದಗಿದೆ ಎನ್ನುತ್ತಾರೆ ಕಾರ್ಮಿಕ


