ಸುರತ್ಕಲ್: ಕೂಳೂರು ಸೇತುವೆ ಬಳಿಯ ಫಲ್ಗುಣಿ ನದಿಯಲ್ಲಿ ಅಪ್ರಾಪ್ತ ಬಾಲಕಿ ಜೊತೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಪರಸ್ಪರ ಲವ್ ಮಾಡುತ್ತಿದ್ದು ಮನೆಯಲ್ಲಿ ಒಪ್ಪಿಗೆ ಇರಲಿಲ್ಲ ಎಂದು ತಿಳಿದುಬಂದಿದೆ. ಇವರ ಶವ ನಿನ್ನೆ ಸಂಜೆ ತಟದಲ್ಲಿ ದೊರೆತಿದೆ.
ಆತ್ಮಹತ್ಯೆ ಮಾಡಿಕೊಂಡವರು ವಾಮಂಜೂರು ಸಮೀಪದ ಮೂಡುಶೆಡ್ಡೆ ನಿವಾಸಿಗಳಾದ ಪ್ರತಾಪ್(22) ಹಾಗೂ ಮಂಜುಳಾ(15) ಎಂದು ಗುರುತಿಸಲಾಗಿದೆ
ಯುವತಿಯ ವೇಲ್‌ನಿಂದ ಯುವತಿ ಸೊಂಟಕ್ಕೆ ಕಟ್ಟಿ ಅದೇ ವೇಲ್‌ನಿಂದ ಯುವಕನ ಬೆಲ್ಟ್‌ಗೆ ಕಟ್ಟಿ ನದಿಗೆ ಹಾರಿದ್ದಾರೆ. ಚೂಡಿದಾರದ
ಕೂಳೂರು ಸೇತುವೆಯಿಂದ ಸಾಕಷ್ಟು ದೂರದಲ್ಲಿರುವ ಮರಳು ದಕ್ಕೆಯಲ್ಲಿ ಈ ಶವ ತೇಲುತ್ತಿರುವುದನ್ನು ಗುರುವಾರ ಸಂಜೆ ಸ್ಥಳೀಯರು ಕಂಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ಶವ ಮೇಲಕ್ಕೆತ್ತಿ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಯುವಕ ಕಪ್ಪು ಬಣ್ಣದ ಪ್ಯಾಂಟ್, ಬಿಳಿಗೆರೆಯ ಉದ್ದ ತೋಳಿನ ಶರ್ಟ್ ಧರಿಸಿದ್ದ. ಬಲಗೈಯ್ಯಲ್ಲಿ ಕೆಂಪು ದಾರ ಇದೆ. ಯುವತಿ ಅಪ್ರಾಪ್ತಳಾಗಿದ್ದುದ್ದು ಆಕೆ ಕೇಸರಿ ಬಣ್ಣದ ಚೂಡಿದಾರದ ಟಾಪ್ ಮತ್ತು ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದಳು. ಶವ ಕೊಳೆಯುವ ಹಂತಕ್ಕೆ ತಲುಪಿದ್ದು, ಇವರು ಬುಧವಾರ ಮಧ್ಯಾಹ್ನ ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಳೆಂದು ತಿಳಿದು ಬಂದಿದೆ. ಮದುವೆಯಲ್ಲಿ ಒಂದಾಗಲು ಆಗದ ಿವರು ಸಾವಿನಲ್ಲಿ ಒಂದಾಗಿದ್ದಾರೆ.


