ಮುಂಬಯಿ , ಬದಿಯಡ್ಕ: ಬಹುಭಾಷಾ ಸಂಸ್ಕøತಿಗಳ ಸಂಗಮ ಭೂಮಿಯಾದ ಕಾಸರಗೋಡಿನಭಾಷೆ,ಸಂಸ್ಕøತಿ,ಕಲಾ ಪ್ರಕಾರಗಳ ಸಂವರ್ಧನೆಗಾಗಿ ಕಮ್ಮಟ,ತರಬೇತಿ ಸಹಿತ ವಿವಿಧ ಆಯಾಮಗಳ
ಕಲ್ಪನೆಯೊಂದಿಗೆ ಬದಿಯಡ್ಕದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಡಿನಾಡ ಕಲಾ ಸಾಹಿತ್ಯ ಸಾಂಸ್ಕೃತಿಕಅಕಾಡೆಮಿಯ ಉದ್ಘಾಟನೆ ಆ.08 ರಂದು ಬದಿಯಡ್ಕದ ಚಿನ್ಮಯ ವಿದ್ಯಾಲಯದ ಸಭಾಂಗಣದಲ್ಲಿ
ಅಪರಾಹ್ನ  ಗಂಟೆಗೆ ನಡೆಯಲಿದೆ. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯುವಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರದಿನೇಶ್ ಅಮೀನ್ ಮಟ್ಟುಪ್ರತಿಷ್ಠಾನವನ್ನು ವಿದ್ಯುಕ್ತವಾಗಿ ಉದ್ಘಾಟಿಸುವರು.Dinesh Amin Mattu (1)

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷಕೇಶವ ಪ್ರಸಾದ ನಾಣಿತ್ತಿಲು,ಹಿರಿಯ ರಂಗಕರ್ಮಿ ರಾಘವೇಂದ್ರ ಎಚ್.ಎಂ ಪುತ್ತೂರು,ಚಿನ್ಮಯವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಬದಿಯಡ್ಕ ಘಟಕಾಧ್ಯಕ್ಷ ಎಸ್ ಎನ್ ಮಯ್ಯ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾಯೋಜನಾಧಿಕಾರಿ ಚೇತನಾ ,ಹಿರಿಯ ಸಂಶೋಧಕ,ಭಾಷಾ ತಜ್ಞಡಾ.ಬೇ.ಸಿ.ಗೋಪಾಲಕೃಷ್ಣ ಭಟ್,ನಿವೃತ್ತನೋಂದಣಾಧಿಕಾರಿ ಮೊಹಮ್ಮದಾಲಿ ಪೆರ್ಲ,ಶಾಲಾ ಪ್ರಾಂಶುಪಾಲ ಪ್ರಶಾಂತ್ ರೈ ಬೆಳಿಂಜ,ಯಕ್ಷಗಾನ ಸಂಘಟಕ ನಾರಾಯಣ ಮಾಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಕಾರ್ಯಕ್ರಮದಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಲಾತಂಡದಿಂದ ಸಾಂಸ್ಕೃತಿಕ ವೈಭವ,ಭರತನಾಟ್ಯ ಕಲಾವಿದೆ ಶ್ರೀರಂಜಿನಿ ಕಲಾಕ್ಷೇತ್ರದ ಸುಜಾತಾ ರವರಿಂದ ಮೋಹಿನಿಯಾಟ್ಟಂಹಾಗೂ ಮುಳ್ಳೇರಿಯಾ ಗಜಾನನ ನೃತ್ಯ ವಿದ್ಯಾಲಯದ ಕು.ತನುಜಾ ರಿಂದ ಕೂಚುಪುಡಿ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

By suddi9

Leave a Reply

Your email address will not be published. Required fields are marked *