ಮುಂಬಯಿ, ಆ.04: ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿಜಾಗತಿಕ ಮನ್ನಣೆ ಪಡೆದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಸಜ್ಜಿತ, ಅತ್ಯಾಧುನಿಕ ಪ್ರಸಿದ್ಧ ಕೇಶ ವಿನ್ಯಾಸ ಮಳಿಗೆಯನ್ನು ಇಂದಿಲ್ಲಿ ಡೊಂಬಿವಲಿ ಶಾಖೆಯನ್ನು ಇಂದಿಲ್ಲಿ ಗುರುವಾರ ಮುಂಬಯಿ ಉಪನಗರ ಥಾಣೆ ಅಲ್ಲಿನ ಡೊಂಬಿವಿಲಿ ಪೂರ್ವದತಿಲಕ್ ರಸ್ತೆಯಲ್ಲಿನ ಶ್ರೀಜಿ ಆರ್ಕೆಡ್ ಆನೇಕ್ಸ್ ಕಟ್ಟಡದಲ್ಲಿ ಸೇವಾರ್ಪಣೆ ಗೊಳಿಸಿದ್ದು, ಭಂಡಾರಿ ಮಹಾಮಂಡಲ ಮಾಜಿಅಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ ಅವರು ನಾರಿಕೇಲ ಹೊಡೆದು, ರಿಬ್ಬನ್ ಬಿಡಿಸಿ ಶಿವಾ’ಸ್ 12ನೇ ಮಳಿಗೆಯನ್ನು ಉದ್ಘಾಟಿಸಿದರು.

Shivas Hair Design Dombivli-B1

Shivas Hair Design Dombivli-B3

Shivas Beauty Dombivali-9

Shivas Beauty Dombivali-10

Shivas Hair Design Dombivli-A1

Shivas Hair Design Dombivli-A3

ಕಾರ್ಕಳ ಅತ್ತೂರು ಗ್ರಾಮೀಣ ಪ್ರದೇಶದ ಹಳ್ಳಿಹುಡುಗ ಶಿವರಾಮ ಭಂಡಾರಿ ಕುಲಕಸಬು ಮೂಲ ವೃತ್ತಿಯಾಗಿಸಿ ಗೌರವ ಡಾಕ್ಟರೇಟ್ ಪಡೆದು ವಿಶ್ವಕ್ಕೆ ಪರಿಚಯಿಸಿ ಕೊಂಡಿರುವುದ ಬರೇಭಂಡಾರಿಸಮುದಾಯಕ್ಕಲ್ಲಇಡೀ ಭಾರತಕ್ಕೆನೇಹಿರಿಮೆದಾಯಕ. ಕರ್ನಾಟಕದ ಕರಾವಳಿಯ ಭಂಡಾರಿ ಜನತೆ ಉದ್ಯಮವಾಗಿಸಿ ಅರಸಿದ ಕ್ಷೌರಿಕವೃತ್ತಿ ಇಂದು ಕೇಶ ವಿನ್ಯಾಸವಾಗಿ ಬೆಳೆತ್ತಾ ಸಮುದಾಯವನ್ನೂ ಬೆಳೆಸುತ್ತಿರುವುದು ಅಭಿಮಾನದ ವಿಷಯ. ಕೇಶಕರ್ತನವನ್ನು ಶಿವಾ’ಸ್ ಹೆಸರಲ್ಲಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನಾಗಿಸಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ ಶಿವರಾಮ ಅವರ ಸಾಧನೆ ಅನನ್ಯವಾದದ್ದು. ನಮ್ಮಲ್ಲಿನ ಯುವಜನತೆಯ ಭವಿಷ್ಯ ರೂಪಿಸಲು ಇಂತಹ ಕುಲಕಸಬು ವರವಾಗಲಿ ಎಂದು ಸುರೇಶ್ ಭಂಡಾರಿ ಆಶಯ ವ್ಯಕ್ತಪಡಿಸಿದರು. ಈ ಶುಭಾವಸರದಲ್ಲಿ ಅತಿಥಿsಗಳಾಗಿ ಶಿವಸೇನಾ ಮುಂದಾಳು ಶ್ರೀಧರ್ ಪಾಟ್ಕರ್, ಸಿಎ| ಸಾವ್‍ಮಿಲ್ ಶಪರಿಯಾ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಾಜಿ ಗೌ| ಪ್ರ| ಕಾರ್ಯದರ್ಶಿ ನ್ಯಾಯವಾದಿ ಆರ್.ಎಂ ಭಂಡಾರಿ, ಪ್ರಭಾಕರ್ ಭಂಡಾರಿ ಥಾಣೆ ಅವರನ್ನೊಳಗೊಂಡು ನೂರಾರು ಗಣ್ಯರು ಆಗಮಿಸಿ ಶಿವಾ’ಸ್‍ಗೆ ಅಭಿನಂದಿಸಿದರು. ಉದಯ ಭಂಡಾರಿ, ಶಿವರಾಮ್ ಭಂಡಾರಿ, ರಘು ಎಸ್.ಭಂಡಾರಿ, ಶ್ವೇತಾ ಆರ್.ಭಂಡಾರಿ, ರವಿ ಭಂಡಾರಿ, ಸೌರಭ್ ಸುರೇಶ್ ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ, ಮಾ| ರೋಹಿಲ್ ಶಿವರಾಮ್, ಬೇಬಿ ಆರಾಧ್ಯ ಶಿವರಾಮ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶಿವಾ’ಸ್‍ಗೆ ಶುಭಾರೈಸಿದರು. ಶಿವಾ’ಸ್ ಸಂಸ್ಥೆಯ ಕಾರ್ಯನಿರ್ವಹಣಾ ಮುಖ್ಯಸ್ಥೆ ಕು| ಪೂರ್ವಿ ಖಂಡೇಳ್ಕರ್ ಅತಿಥಿsಗಳನ್ನು ಪರಿಚಯಿಸಿದರು. ಸರಿತಾ ಬಂಗೇರಾ ವಂದಿಸಿದರು. ಬಾಲಿವುಡ್‍ನ ಹೆಸರಾಂತ ಕೇಶ ರೂಪಕ ಎಂದೇ ಪ್ರಸಿದ್ಧಿಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮ ಅವರು 1998ರ ಸಾಲಿನ ಸೆಲೂನ್ ಇಂಟರ್‍ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ48 ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಶಿವಾ’ಸ್ ಭಾರತೀಯನಾಗಿ ಪುರಸ್ಕೃತರೆಣಿಸಿ ಹೇರ್ ಕಟ್ಟಿಂಗ್ ಸಲೂನ್‍ಗೆ ಹೊಸ ರೂಪ ನೀಡಿ ತನ್ನ ಉದ್ಯಮವನ್ನು ಮೇಲ್ದರ್ಜೆಗೆರಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ನಗರದದ್ಯಾಂತ ವೃತ್ತಿನಿರತವಾಗಿದ್ದಾರೆ. ಕೇಶವಿನ್ಯಾಸದ ಅಪ್ರತಿಮಾ ಸಾಧನೆಗಾಗಿ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವದಲ್ಲಿ ಯುರೋಪಿಯ ನ್ ಕಾಂಟಿನೆಂಟಲ್ ಯುನಿವರ್ಸಿಟಿಯ ಕಾರ್ಯನಿರ್ವಹಕಾ ಪ್ರಧಾನ ರಾಜ್ಯಪಾಲ ಪೆÇ್ರ| ಡಾ| ರಾಲ್ಫ್ಥೋಮಸ್, ಯುಸಿಯು ಬದಲಿ ಉಪಕುಲಪತಿ ಡಾ| ಜೋಪ್ಪ್ರೆಯ್ ಕ್ಲರ್ಕ್ ಅವರು ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್‍ನಲ್ಲಿ ಶಿವರಾಮ ಭಂಡಾರಿ ಅವರಿಗೆ ಡಾಕ್ಟರೇಟ್ ಸನದು ಪ್ರದಾನಿಸಿ ಗೌರವಿಸಿರುವುದನ್ನು ನೆನಪಿಸ ಬಹುದು. ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಪದಾಧಿಕಾರಿಯಾಗಿ ಸೇವಾ ನಿರತ ಶಿವರಾಮ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿರುವ ಸರಳ ಸಜ್ಜನಿಕಾ ಮಿತಭಾಷಿ ವ್ಯಕ್ತಿಯಾಗಿದ್ದಾರೆ.

ಚಿತ್ರ  ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *