ಮುಂಬಯಿ : ಆರತಿ ಆರ್ಟ್ ಪ್ರಿಂಟರ್ಸ್ ನ ಮಾಲಕಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷಮುಂಬಯಿ ಮಹಾನಗರದ ತುಳು ಕನ್ನಡಿಗರ ಆತ್ಮೀಯ ವ್ಯಕ್ತಿ ಪಿ. ಕೆಸಾಲ್ಯಾನ್ ಅವರು ಜು. 20 ರಂದು ಸ್ವರ್ಗಸ್ಥರಾಗಿದ್ದು ಜು. 29 ರಂದು ಮಾಟುಂಗಾದ ಸಮರಸ ಭವನದಲ್ಲಿ ನೂರಾರು ತುಳುಕನ್ನಡಿಗರ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಶ್ರಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯ ಕೃಷ್ಣ ಶೆಟ್ಟಿಯವರು ದಿವಂಗರರಿಗೆ ಶ್ರಧಾಂಜಲಿ ಅರ್ಪಿಸುತ್ತಾ “ಪಿ.ಕೆ. ಸಾಲ್ಯಾನರು ಕನ್ನಡ ಬಾಷೆಯ ಉಳಿವುಗಾಗಿ ದುಡಿಯುದರೊಂದಿಗೆ,  ಕುಲಾಲ ಸಮುದಾಯದ ಏಳಿಗೆಗಾಗಿ ದುಡಿದವರು. ಅವರು ಕುಲಾಲ ಸಮಾಜದ ಬಂಗಾರದ ಮನುಷ್ಯನಂತೆ” ಎಂದರು.BMM_3476

BMM_3483

BMM_3503

BMM_3516

BMM_3523

 ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿಯವರು ನುಡಿ ನಮನ ಸಲ್ಲಿಸುತ್ತಾ ಸಾಲ್ಯಾನರ ಹಾಗೂ ತನ್ನ ಸೋದರ ಬಾಂದವ್ಯದ ಬಗ್ಗೆ ಮಾತನಾಡಿ ಹತ್ತಿರದ ಬಂಧುವೊಬ್ಬನನ್ನು ಕಳಕೊಂಡಿರುವೆನು ಎಂದರು.
 ಕುಲಾಲ ಸಮಾಜದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರು ಕುಲಾಲ ಸಮಾಜದ ಅಭಿವೃದ್ದಿಗೆ ಸಾಲ್ಯಾನರ ಕೊಡುಗೆಯನ್ನು ಸ್ಮರಿಸಿದರು ಹಾಗೂ ಅವರ ಬಹುಕಾಲದ ಕನಸನ್ನು ಪೂರೈಸುವಲ್ಲಿ ನಮ್ಮ ಪ್ರಯತ್ನ ಸದಾ ಇದೆ ಎಂದರು.
 ಮೈಸೂರು ಅಸೋಷಿಯೇಶನಿನ ಟ್ರಸ್ಟಿ ಮಂಜುನಾಥಯ್ಯಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್ಕರ್ನಾಟಕ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಪೊಲಿಪುಬಾಂಬೇ ಬಂಟ್ಸ ಅಸೋಷಿಯೇಶನಿನ ಉಪಾಧ್ಯಕ್ಷ ಸುಭಾಶ್ ಶೆಟ್ಟಿಪತ್ರಕರ್ತ ಅಶೋಕ್ ಸುವರ್ಣತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡಬಿಲ್ಲವ ಜಾಗೃತಿ ಬಳಗದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿಮಾಜಿ ಕಾರ್ಯದರ್ಶಿ ಕೇಶವ ಕೋಟ್ಯಾನ್ಬಿಲ್ಲವರ ಅಶೋಷಿಯೇಶನಿನ ಸ್ಥಳೀಯ ಸಮಿತಿ ಗೌರವಾಧ್ಯಕ್ಷ ಗೋಪಾಲ ಪಾಲನ್ಡಾ. ಮಂಜುನಾಥಯ್ಯವಿದ್ಯಾದಾಯಿನಿ ಸಭಾದ ಗೌ. ಅಧ್ಯಕ್ಷ ಧಮೇಶ್ ಸಾಲ್ಯಾನ್ಜಯಕರ ಪೂಜಾರಿಜಿ. ಟಿ. ಆಚಾರ್ಯಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್ರಘುನಾಥ ಕುಂದರ್ದೇವಾಡಿಗ ಸಂಘದ ಅಧ್ಯಕ್ಷ ವಾಸು ದೇವಾಡಿಗಕೆ. ಕೆ. ಶೆಟ್ಟಿಭಂಡಾರಿ ಸೇವಾ ಸಂಘದ ಅಧ್ಯಕ್ಷ ಶೇಖರ್ ಭಂಡಾರಿಗುರುತು ಮಾಸಿಕದ ಸಂಪಾದಕ ಬಾಬು ಶಿವ ಪೂಜಾರಿಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ತಿನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆಶೇಖರ ಅಮೀನ್ದಯಾಸಾಗರ ಚೌಟವೀರ ಕೇಶರಿ ಕಲಾವೃಂದದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರ್ಕೆ. ಎಂ. ಕೋಟ್ಯಾನ್ ಮೊದಲಾದವರು ಮಾತನಾಡಿ ನುಡಿ ನಮನ ಸಲ್ಲಿಸಿದರು.
 ವಿವಿಧ ಸಂಘಟನೆಗಳ ಸದಸ್ಯರುಗಳು ಪದಾಧಿಕಾರಿಗಲು ಈ ಸಭೆಯಲ್ಲಿ ಉಪಸ್ಥಿತರಿದ್ದು ದಿ. ಪಿ. ಕೆ. ಸಾಲ್ಯಾನ್ ರ ಭಾವಚಿತ್ರಕ್ಕೆ ಪುಪ್ಷಾಂಜಲಿ ಸಮರ್ಪಿಸಿದರು.  ದೇವದಾಸ್ ಸಾಲ್ಯಾನ್ ಅವರು ದಿವಂಗತರ ಬದುಕಿನ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತ ದಿನೇಶ್ ಕುಲಾಲ್  ನಿರ್ವಹಿಸಿದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

By suddi9

Leave a Reply

Your email address will not be published. Required fields are marked *