ವಾಮಂಜೂರು:ಯುವಕರು ದೇಶದ ಆಸ್ತಿ,ಅವರು ಉತ್ತಮ ರೀತಿಯಲ್ಲಿ ಕಲಿತು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವ ಹೇಳಿದರು. ವಾಮಂಜೂರು ಸೈಂಟ್ ರೇಮಂಡ್ ಕಾಲೇಜಿನ ವಿದ್ಯಾರ್ಥಿಸಂಘವನ್ನು ಶನಿವಾರ ತೆಂಗಿನ ಗರಿಯನ್ನು ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ದೇಶದ ಏಳಿಗೆಗೆ ಪ್ರತಿಯೊಬ್ಬರು ಜಾತಿ ,ಬೇಧ ಮರೆತು ಒಟ್ಟಾಗಿ ಏಕತೆಯಿಂದ ಶ್ರಮಿಸಿದರೆ ಮಾತ್ರ ಸಾಧ್ಯ ಎಂದವರು ಹೇಳಿದರು. 
ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಪ್ರಿನ್ಸಿಪಾಲ್‍ರಿಂದ ಪ್ರಮಾಣವಚನ ಸ್ವೀಕರಿಸಿದರು. ನಂತರ ವರ್ಷದ ತಮ್ಮ ಕಾರ್ಯಚಟುವಟಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಅನಿಸಿಕೆ ಹಂಚಿಕೊಂಡರು.ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಂದ ಮೊಯಿದಿನ್ ಭಾವ ಅವರ ಕ್ಷೇತ್ರದಲ್ಲಿ ಮಾಡಿರುವ ಜನಪರ ಕೆಲಸಗಳಿಗಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ಸಗಯಾ ಸೆಲ್ವಿ ವಹಿಸಿದ್ದರು. ಸೈಂಟ್ ರೇಮಂಡ್ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಸಾಧನ, ಕಾಲೇಜಿನ ಉದ್ಯಮಿ ರಾಜೇಶ್ ರೇಗೊ, ಮೂಲರ ಪಟ್ನ ಜುಮಾ ಮಸೀದಿಯ ರಶೀದ್ ಮತ್ತಿತರರು ಉಪಸ್ಥಿತರಿದ್ದರು.

