ಬಂಟ್ವಾಳ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಂಟ್ವಾಳ ಕಚೇರಿಯಿಂದ ತೂಕ ಮತ್ತು ಅಳತೆ ಸಾಧನಗಳ 2016 ಸಾಲಿನ ವಾರ್ಷಿಕ ಸತ್ಯಮಾಪನ ಮುದ್ರೆ ಶಿಬಿರವು ಬೆಳ್ತಂಗಡಿ ತಾಲೂಕು ರಬ್ಬರ್‍ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಗುರುವಾಯನ ಕೆರೆ ಇಲ್ಲಿ ಆಗಸ್ಟ್ ತಿಂಗಳ ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ನಡೆಯಲಿದೆ.
ಬೆಳ್ತಂಗಡಿ ಶಿಬಿರ ವ್ಯಾಪ್ತಿಯಲ್ಲಿನ ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಬೆಳಾಲು, ಕಕ್ಕಿಂಜೆ, ಚಾರ್ಮಾಡಿ, ನೆರಿಯ, ಗಂಡಿಬಾಗಿಲು, ದಿಡುಪೆ, ಕಿಲ್ಲೂರು, ಕಾಜೂರು, ಅಳದಂಗಡಿ, ನಾರಾವಿ, ಪಡಂಗಡಿ, ಗೇರುಕಟ್ಟೆ, ಜಾರಿಗೆಬೈಲು ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ ಮತ್ತು ಅಳತೆ ಸಾಧನಗಳನ್ನು ಶಿಬಿರಕ್ಕೆ ಹಾಜರುಪಡಿಸಿ ಮುದ್ರೆ ಹಾಕಿಸಬೇಕೆಂದು ಕಚೇರಿ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *