ಬಂಟ್ವಾಳ: ಸಜೀಪ ಮೂಡದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತ ಮಜಲು ಸಮೀಪದ ಕುಕ್ಕುದಕಟ್ಟೆ ನಿವಾಸಿ ಮಾಲತಿ ಅವರ ಮಗ ಸಚಿನ್ (38) ಎಂದು ಗುರುತಿಸಲಾಗಿದೆ.

DSC_2647ಸಚಿನ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಪ್ರತಿ ದಿನ ಬೆಳಿಗ್ಗೆ ಮನೆಯಿಂದ ಮೆಲ್ಕಾರ್ ವರೆಗೆ ಬೀಡಿ ಸೇದುಕೊಂಡು ನಡೆದುಕೊಂಡೇ ಹೋಗಿ ಮತ್ತೆ ವಾಪಾಸು ಅದೇ ರೀತಿ ವಾಪಾಸು ಮನೆಗೆ ಬರುತ್ತಿದ್ದರು. ಮಂಗಳವಾರ ಎಂದಿನಂತೆ ಸಚಿನ್ ಮನೆಯಿಂದ ಬೆಳಿಗ್ಗೆ ಹೊರಟು ಹೋದವನು ಮತ್ತೆ ಈವರಗೆ ಮನೆಗೆ ವಾಪಾಸು ಬರದೆ ಕಾಣೆಯಾಗಿರುತ್ತಾನೆ ಎಂದು ಠಾಣೆಗೆ ನಿಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.7 ಇಂಚು ಎತ್ತರ , ಸಾದಾರಣ ಶರೀರ, ಗೋಧಿ ಮೈಣ್ಣ, ಗುಂಗುರು ಕೂದಲು, ಬೀದಿ ಸೇದುವ ಅಬ್ಯಾಸ ಇದ್ದು, ತುಳು,ಕನ್ನಡ, ಇಂಗ್ಲೀಷ್ ಭಾಷೆ ತಿಳಿದಿದೆ. ಕೆಂಪು ಬಣ್ಣದ ಚೆಕ್ಸ್ ಶರ್ಟು ತಿಳಿ ಕಂದು ಬಣ್ಣದ ತ್ರೀ ಫೋರ್ತ್ ಶಾಟ್ಸ್ ಬಟ್ಟೆ ಧರಿಸಿದ್ದಾರೆ. ಈತನ ಸುಳಿವು ಗೊತ್ತಾದಲ್ಲಿ ಬಂಟ್ವಾಳ ನಗರ ಠಾಣೆಗೆ ತಿಳಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *