ಬಂಟ್ವಾಳ: ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ತುಳು ನಾಟಕೋತ್ಸವ ಸಮಿತಿ ಆಶ್ರಯದಲ್ಲಿ 8 ದಿನಗಳ ತುಳು ನಾಟಕೋತ್ಸವ ಅ. 7 ಭಾನುವಾರದಿಂದ ಅ 14 ಭಾನುವಾರದವರೆಗೆ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬಿ.ಸಿ.ರೋಡ್ ಅನ್ನಪೂರ್ಣೇಶ್ವರೀ ದೇವಸ್ಥಾನ ಸಾನಿಧ್ಯದಲ್ಲಿ ಪ್ರಧಾನ ಅರ್ಚಕ ರಾದ ಮಾದಕಟ್ಟೆ ಈಶ್ವರ ಭಟ್ ರವರು ದೇವರಿಗೆ ಪೂಜೆ ಸಲ್ಲಿಸುವುದರೊಂದಿಗೆ ನೆರವೇರಿತು.

ಈ ಕಾರ್ಯಕ್ರಮವು 2ನೇ ವರ್ಷದ ಬಂಟ್ವಾಳ ತಾಲೂಕು ಮಟ್ಟದ ಹವ್ಯಾಸಿ ಕಲಾ ತಂಡಗಳ ತುಳು ನಾಡ ಅಭಿನಯ ಸ್ಪರ್ಧೆಯು 7ದಿನಗಳ ಕಾಲ ಹಾಗೂ 8ನೇ ದಿನ ಸಮಾರೋಪ ಸಮಾರಂಭ ದಂದು ಮಂಗಳೂರಿನ ಲಕುಮಿ ತಂಡದಿಂದ “ಬದ್ಕೆರೆಗಾದ್ ಸೈಪಿನಕುಲು” ತು ಳು ಹಾಸ್ಯ ನಾಟಕ ಜರಗಲಿದೆ. ಈ ಸಂದರ್ಭದಲ್ಲಿ ನಾಟಕೋತ್ಸವ ಸಮಿತಿಯ ಗೌರವಾಧ್ಯಕ್ಷ ಸುದರ್ಶನ್ ಜೈನ್, ಗೌರವ ಸಲಹೆಗಾರರಾದ ಪಿ.ಜಯರಾಮ ರೈ, ಸಮಿತಿ ಅಧ್ಯಕ್ಷ ಸುಭಾ ಶ್ಚಂದ್ರ ಜೈನ್, ಸ್ಥಾಪಕ ಸಂಚಾಲಕರು ಮೋಹನ್ ದಾಸ್ ಕೊಟ್ಟಾರಿ ಮುನ್ನೂರು, ಕಾರ್ಯದರ್ಶಿ ಶಿವಪ್ರಕಾಶ್ ಕೊಟ್ಟಾರಿ, ಸ್ವಾಗತ ಸಮಿತಿ ಸಂಚಾಲಕ ಸುರೇಶ್ ಕುಮಾರ್ ನಾವೂರ, ಸ್ವಯಂ ಸೇವಕ ಸಮಿತಿ ಸಂಚಾಲಕ ಪರಮೇಶ್ವರ ಎಂ., ಅಲಂಕಾರ ಸಮಿತಿಯ ದಿನೇಶ್ ಅಜೆಕಲ ಉಪಸ್ಥಿತರಿದ್ದರು.
