Published On: Wed, Jun 11th, 2014

ಗೋಡೆ ಕಟ್ಟಿ ಗೂಡು ಕಟ್ಟುವ ಮೇಸ್ತ್ರಿ ಈ ಕಣಜದ ಹುಳು

ಸುದ್ದಿ9 ವಿಶೇಷ: ಪಕೃತಿಯ ಮಡಿಲಲ್ಲಿ ಅಚ್ಚರಿಯ ಕೀಟವಾಗಿರುವ ಕಣಜದ ಹುಳು ಗೋಡೆ ಕಟ್ಟುವ ಕಾಯಕ ಎಂಥವನನ್ನೂ ದಂಗುಬಡಿಸುತ್ತದೆ. ಮೇಸ್ತ್ರಿಗಿಂತಲೂ ಚೆನ್ನಾಗಿ ಗೋಡೆ ಕಟ್ಟಿ ಗೂಡು ಕಟ್ಟುವ ಈ ಕಣಜದ ಹುಳುವಿನ ಕಠಿಣ ದುಡಿಮೆ ಎಂಥವರಿಗೂ ಬೆರಗು ಹುಟ್ಟಿಸದೇ ಇರದು.
ಗಂಡು-ಮತ್ತು ಹೆಣ್ಣು ಪರಸ್ಪರ ಸಂಧಿಸಿದ ನಂತರ ಗಭರ್ಾವತಿಯಾಗುವ ಹೆಣ್ಣುಕಣಜದ ಹುಳು ಹುಳದಂಥಾ ಒಂದು ಮರಿಯನ್ನು ಮರದ ಎಲೆಯ ಮೇಲೆ ಜೋಪಾನವಾಗಿ ಬಚ್ಚಿಟ್ಟುಟ್ಟುಕೊಂಡಿರುತ್ತದೆ. ಬೇರೆ ಪ್ರಾಣಿಗಳು ಮೊದಲು ಗೂಡು ಕಟ್ಟಿ ನಂತರ ಮರಿ ಮಾಡುವ ಕಾರ್ಯದಲ್ಲಿ ತೊಡಗಿದರೆ ಕಣಜದ ಹುಳುವಲ್ಲಿ ಮಾತ್ರ ಇದು ವಿಚಿತ್ರ. ಅದೇನೆಂದರೆ ಮರಿ ಇಟ್ಟ ನಂತರವಷ್ಟೇ ಗೂಡು ಕಟ್ಟುವ ಕೆಲಸ ಆರಂಭಿಸುವುದು.

kanajada hulu1. kanajada hulu (2) kanajada hulu (4.) kanajada hulu (5.) kanajada hulu (7.)ಸೂಕ್ತ ಸ್ಥಳದ ಅನ್ವೇಷಣೆ:

ಮರಿಯೇನೋ ಇಟ್ಟಿದೆ. ಆದರೆ ಅದನ್ನು ಸಾಕುವ ಜವಾಬ್ದಾರಿ ಅದಕ್ಕಿಲ್ಲ. ಒಂದು ಮಣ್ಣಿನ ಗೋಡೆ ಕಟ್ಟಿ ಅದರಲ್ಲಿ ಮರಿಯನ್ನು ಇಟ್ಟು ಗೋಡೆಯನ್ನು ಮುಚ್ಚಿದರೆ ಆಮೇಲೆ ಮರಿಯೇ ತನ್ನಷ್ಟಕ್ಕೆ ಹೊರಬರುತ್ತದೆ. 

ಈ ಕಾಯಕಕ್ಕೆ ಸೂಕ್ತ ಜಾಗದ ಅನ್ವೇಷಣೆಯಲ್ಲಿ ಕಣಜದ ಹುಳು ತೊಡಗುತ್ತದೆ. ಸೂಕ್ತ ಜಾಗ ಸಿಕ್ಕರಷ್ಟೇ ಸಾಲುವುದಿಲ್ಲ. ಅಲ್ಲಿ ಗೂಡು ಕಟ್ಟಲು ಮಣ್ಣಿನ ವ್ಯವಸ್ಥೆಯೂ ಇರಬೇಕು. ಮಣ್ಣಿನಲ್ಲೂ ಇದು ಗೂಡು ಕಟ್ಟಬೇಕಾದರೆ ಅದಕ್ಕೆ ಕೆಂಪುಬಣ್ಣವೇ ಆಗಬೇಕು. ಅದಕ್ಕಾಗಿಯೇ ಗೂಡು ಕಟ್ಟಲು ಕಣಜದ ಹುಳು ತುಂಬಾ ಸ್ಥಳದ ಅನ್ವೇಷಣೆಯಲ್ಲಿ ತೊಡಗುತ್ತದೆ. ಈ ಅನ್ವೇಷಣೆಗೆ ತುಂಬಾ ಸಮಯ ಹಿಡಿಯುತ್ತದೆ. ಕೊನೆಗೆ ಹೇಗೂ ಒಂದು ಜಾಗವನ್ನು ಆಯ್ಕೆ ಮಾಡಿ ಅದರಲ್ಲೇ ಗೂಡು ಕಟ್ಟಲಾರಂಭಿಸುತ್ತದೆ. ಕಣಜದ ಹುಳು ಗೂಡುಕಟ್ಟುವುದು ಮಣ್ಣಲ್ಲಿ. ಎತ್ತರವಾದ ಗೋಡೆಯೋ, ಮನೆಯ éಛಾವಣಿಯ ಅಡಿಯ ಭಾಗವನ್ನೋ ಇದು ಆಯ್ಕೆ ಮಾಡುತ್ತದೆ. ಗೂಡು ಕಟ್ಟಿದ ನಂತರ ಜೇಡರ ಬಲೆಯ ಹುಡುಕಾಟ ನಡೆಸಬೇಕು. ಈ ಜೇಡರ ಬಲೆಯನ್ನೂ ಸಂಗ್ರಹಿಸಿ ಒಂದು ಕಡೆ ಬಚ್ಚಿಟ್ಟುಕೊಳ್ಳುತ್ತದೆ. ಗೂಡು ಕಟ್ಟಿದ ನಂತರ ತನ್ನ ಹುಳದಂಥಾ ಮರಿಯ ಸುತ್ತ ನೇಯ್ದುಕೊಂಡು ಇದನ್ನೇ ಎತ್ತಿಕೊಂಡು ಗೂಡಿನೊಳಗೆ ಜೋಪಾನವಾಗಿಟ್ಟುಕೊಂಡು ಅದನ್ನು ಮಣ್ಣಿನಿಂದಲೇ ಮುಚ್ಚಿಬಿಡುತ್ತದೆ.
ಗೋಡೆ ಕಟ್ಟುವ ಕಾಯಕ ಶುರು:
ಸ್ಥಳದ ಆಯ್ಕೆಯಾದ ನಂತರ ಆ ಜಾಗದಲ್ಲಿ ಮಣ್ಣಲ್ಲಿ ಗೋಡೆ ಕಟ್ಟಲು ಶುರುಮಾಡುತ್ತದೆ. ತನ್ನ ಬಾಯಿಯಿಂದಲೇ ಸ್ವಲ್ಪ ಸ್ವಲ್ಪವೇ ಮಣ್ಣನ್ನು ತಂದು ಬಾಯಿಯಲ್ಲಿ ಇರುವ ಅಂಟಿನಂಥಾ ನೀರನ್ನೇ ಉಪಯೋಗಿಸಿಕೊಂಡು ಆ ಜಾಗದಲ್ಲಿ ಗೋಡೆ ಕಟ್ಟಲಾರಂಭಿಸಿಸುತ್ತದೆ. ಈ ಗೋಡೆ ಎಷ್ಟು ಗಟ್ಟಿಮುಟ್ಟಾಗಿರುತ್ತದೆಂದರೆ ಅದನ್ನು ಮುರಿಯಲು ಮನುಷ್ಯರಲ್ಲದೆ ಬೇರೆ ಪ್ರಾಣಿಗಳಿಗೆ ಸಾಧ್ಯವಿಲ್ಲ.
ಒಂದರ ಪಕ್ಕದಲ್ಲಿ ಎಷ್ಟು ಗೂಡುಗಳನ್ನು ಬೇಕಾದರೂ ಕಟ್ಟಬಲ್ಲದು, ಆದರೆ ಒಮ್ಮೆ ಉಪಯೋಗಿಸಿದ ಗೂಡನ್ನು ಮತ್ತೆ ಉಪಯೋಗಿಸುವುದಿಲ್ಲ.
ಗೂಡು ಒಂದು ಗಾತ್ರ್ರಕ್ಕೆ ಬಂದು ನಿಂತಾಗ ತಾನು ಮೊದಲು ಮರದಲ್ಲಿ ಸಿಕ್ಕಿಸಿದ್ದ ಅದರ ಮರಿಯನ್ನು ಹೊತ್ತುಕೊಂಡು ಬರುತ್ತದೆ. ಅದರ ಮರಿಯನ್ನು ನಾವು ಮೊದಲು ನೋಡಿದಾಗ ಹುಳ ಎಂದೇ ಭಾವಿಸಬೇಕು. ಆದರೆ ಅದು ನಿಜವಾಗಿಯೂ ಹುಳವಲ್ಲ. ಅದರ ಮರಿ. ಈ ಮರಿಯನ್ನು ಹೊತ್ತುಕೊಂಡು ಬರುವ ಕಣಜದ ಹುಳು ತಾನು ಹೆಣೆದ ಗೂಡಿನೊಳಗೆ ಇಡುತ್ತದೆ. ಗೂಡಿನೊಳಗೆ ಇಟ್ಟ ನಂತರ ಅದರ ಬಾಯನ್ನು ಮುಚ್ಚಿ ಮರಿ ಶಾಶ್ವತವಾಗಿ ಅದರೊಳಗೆ ಇರುವಂತೆ ಮಾಡುತ್ತದೆ. ಅಲ್ಲಿಗೆ ಅದರ ಕಾಯಕ ಮುಗಿದಂತೆಯೇ. ಇದಾದ ನಂತರ ಅದರ ಪಕ್ಕದಲ್ಲಿ ಇನ್ನೊಂದು ಕಟ್ಟಡವನ್ನು ಕಟ್ಟಲು ಶುರುಮಾಡುತ್ತದೆ. ಹೀಗೆ ಒಂದರ ಪಕ್ಕದಲ್ಲಿ ಇನ್ನೊಂದು ಕಟ್ಟಡವನ್ನು ಕಟ್ಟುವ ಈ ಕಣಜದ ಹುಳು ಯಾವ ಮೇಸ್ತ್ರಿಗೂ ಕಮ್ಮಿ ಇಲ್ಲ.
ಸುಮಾರು ಒಂದುವಾರದವರೆಗೂ ಒಳಗಡೆಯಲ್ಲೇ ಕಣಜದ ಹುಳು ಬಂಧಿಯಾಗಿರುತ್ತದೆ. ಗೂಡಿನಲ್ಲಿಯೇ ಪಕ್ವವಾಗುವ ಕಣಜದ ಹುಳು, ಬಲಿತ ನಂತರ ಗೂಡಿನ ಬಾಗಿಲನ್ನು ಒಡೆದು ಹಾಕಿ ತನ್ನಷ್ಟಕ್ಕೆ ಸ್ವತಂತ್ರ ಬದುಕನ್ನು ಕಟ್ಟುತ್ತದೆ. ಹೀಗೆ ಅಚ್ಚರಿಯ ಜೀವಿ ಕಣಜದ ಹುಳು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter