ಮುಂಬಯಿ, ಜು. 24: ಪ್ರತಿಯೊಬ್ಬನು ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳದೆ ಇತರರ ಉನ್ನತ ಭಾವನೆಗಳನ್ನು ಮೈಗೂಡಿಸುವ ಅಗತ್ಯವಿದೆ. ಪರಿಶುದ್ಧತೆ ಮತ್ತು ಅನುಕಂಪಗಳು ಯಾವುದೇ ಮತ ಧರ್ಮಕ್ಕೆ ಮೀಸಲಾಗಿಲ್ಲ ಅಂದಮೇಲೆ ಜಾಗತೀಕರಣದದ ಯುಗದಲ್ಲಿ ಸಮಾಜಗಳನ್ನು ಒಗ್ಗೂಡಿಸಿ ಬದುಕುವ ಅವಶ್ಯವಿದೆ. ಪ್ರತಿಯೊಂದು ಧರ್ಮವೂ ಸಂತರನ್ನು, ಸತ್ಪುರುಷರನ್ನು ರೂಪಿಸಿವೆ. ಆದುದರಿಂದ ಮನುಜರಲ್ಲಿ ವೈರತ್ವಕ್ಕಿಂತ ಶಾಂತಿಸಮನ್ವಯತ್ವ ಮೂಡಬೇಕು ಆ ಮೂಲಕ ಮನುಜರು ವಿಶ್ವಮಾನವರಾಗಿ ಬದುಕಬೇಕು ಎಂದು ಶ್ರೀ ಕ್ಷೇತ್ರದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕವು ಇಂದಿಲ್ಲಿ ಆದಿತ್ಯವಾರ ಪೂರ್ವಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಆಚರಿಸಿದ17ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆಯನ್ನಿತ್ತು ಗುರುವಂದನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯನ್ನುದ್ದೇಶಿಸಿ ಒಡಿಯೂರುಶ್ರೀ ನುಡಿದರು.
ಮಾಧ್ಯಮಕ್ಕೆ ಸಮಾಜದ ಋಣತೀರಿಸುವ ದೊಡ್ಡದಾದ ಹೊಣೆಗಾರಿಕೆಯಿದೆ. ತಪ್ಪುಗಳನ್ನು ಖಂಡಿಸಿ, ಸತ್ಯವನ್ನು ಪ್ರೋತ್ಸಾಹಿಸಿ ಸಮಾಜವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು. ಸಾಧುಸಂತರು ಬರೇ ನೆಪವಾಗಿದ್ದು, ನಾವುಗಳು ಕೊಡುಕೊಳ್ಳುವರ ಸೇತುವಷ್ಟೇ. ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ ನಾವು ಪಾರದರ್ಶಕತ್ವವಾಗಿ ಸಮಾಜಕ್ಕಾಗಿ ಶ್ರಮಿಸಿ ಸಂಸ್ಕಾರಯುತ ಬದುಕನ್ನು ರೂಪಿಸುವವರು. ಸಮಾಜ ನೀಡುವುದನ್ನೇ ಸಮಾಜಕ್ಕೆ ನೀಡುತ್ತಾ ತತ್ವಾನುಸಾರ ಧರ್ಮಕ್ಕನುಗುಣವಾಗಿ ಸಿದ್ಧಪಡಿಸುವ ಧರ್ಮ ನಮ್ಮದು. ಅಂತೆಯೇ ಶ್ರೀ ಕ್ಷೇತ್ರ ಒಡಿಯೂರುನಲ್ಲಿ ಗ್ರಾಮೀಣಾಭಿವೃದ್ಧಿಯ ಹಲವಾರು ಯೋಜನೆಗಳ ಕನಸು ಕಂಡಿದ್ದೇವೆ. ತಮ್ಮೆಲ್ಲರ ಹೃದಯ ಕಾಣಿಕೆಯಿಂದ ಪುಣ್ಯಾಧಿ ಶ್ರದ್ಧಾಕೇಂದ್ರವನ್ನಾಗಿಸುವ ಇಪ್ಛಾಶಕ್ತಿ ಹೊಂದಿದ್ದೇವೆ ಎಂದೂ ಶ್ರೀಗಳು ತಿಳಿಸಿದರು.
ಸಮಾರಂಭದಲ್ಲಿ ಸಾಧ್ವಿ ಶ್ರೀಮಾತಾನಂದಮಾಯೀ, ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಂಟರ ಸಂಘ ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಪುಣೆ ಘಟಕದ ಅಧ್ಯಕ್ಷ ಸದಾನಂದ ಎ.ಶೆಟ್ಟಿ ಅತಿಥಿಗಳಾಗಿ, ಹಾಗೂ ಸೇವಾ ಬಳಗ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು.
ಇತ್ತೀಚೆಗೆ ಸ್ವರ್ಣ ದಾಂಪತ್ಯ ಜೀವನ ಪೂರೈಸಿದ ಅನ್ನದಾತ ಪ್ರಸಿದ್ಧ ರಾಘು ಪಿ.ಶೆಟ್ಟಿ ಮತ್ತು ವಾರಿಜಾ ಆರ್.ಶೆಟ್ಟಿ ದಂಪತಿಯನ್ನು ಶ್ರೀಗಳು ಫಲಪುಷ್ಪ, ಸ್ಮರಣಿಕೆ, ಸನ್ಮಾನಪತ್ರ, ಮಂತ್ರಾಕ್ಷತೆಯನ್ನಿತ್ತು ಸನ್ಮಾನಿಸಿದರು. ಹಾಗೂ 2016ನೇ ಸಾಲಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಎಸ್ಸಿ ಮತ್ತು ಎಸ್ಎಸ್ಸಿ ಪರೀಕ್ಷೆಗಳಲ್ಲಿ ಸಾಧಕರಾಗಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶ್ರೀಗಳು ಆಶೀರ್ವದಿಸಿದರು.
ಒಡಿಯೂರು ಶ್ರೀಗಳು ಕೆಲವೊಂದು ವರ್ಷಗಳ ಹಿಂದೆ ಸಾಂತಕ್ರೂಜ್ನಲ್ಲಿನ ಬಿಲ್ಲವರ ಭವನಕ್ಕೆ ಭೇಟಿಯನ್ನೀಡಿ ಹರಸಿದ್ದರು. ಅವರಲ್ಲಿನ ಅಧ್ಯಾತ್ಮ ಜ್ಞಾನಸಂಪತ್ತು ಸರ್ವ ಸಮಾಜಕ್ಕೂ ಒಳಿತನ್ನೇ ಪ್ರಾಪ್ತಿಸಿದೆ. ಬದುಕಿನ ಜೀವನ ವಿಧಾನಕ್ಕೆ ಶ್ರೀಗಳ ಅನುಗ್ರಹ ಶ್ರೀರಕ್ಷೆಯಾಗಿದೆ ಎಂದು ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
ಪ್ರಭಾಕರ ಶೆಟ್ಟಿ ಮಾತನಾಡಿ ಗುರುದೇವಶ್ರೀಗಳಲ್ಲಿ ನಮ್ಮದು ಅವಿನಾಭಾವ ಸಂಬಂಧ. ಸೇವಾ ಬಳಗದ ಯಾವುದೇ ಸೇವೆಗೆ ಬಂಟರ ಭವನದ ಕೊಡುಗೆ ಅನನ್ಯವಾಗಿದೆ. ಮುಂದೆಯೂ ನಿರಂತರ ಸಹಕಾರ ನೀಡಲಿದ್ದೇವೆ ಎಂದರು.
ಋಷಿ ಪರಂಪರೆಯ ಭವ್ಯ ಸಂಸ್ಕೃತಿಯ ಭಾರತದಲ್ಲಿ ಧರ್ಮಶ್ರದ್ಧೆ ವಿಶೇಷವಾಗಿದೆ. ಇಲ್ಲಿ ಮಠ-ಮಾನ್ಯಗಳ ಕೊಡುಗೆಯೂ ಅಸಮಾನ್ಯ. ಧಾಮರ್ಿಕ ಸೇವೆಗಳೆಲ್ಲವೂ ಒಳ್ಳೆಯದ್ದೇ. ಅದರ ಜೊತೆಗೆ ಜನರ ಜೀವನ ಮಟ್ಟ, ಬದುಕುಶೈಲಿ ಬದಲಾಗಬೇಕು. ಸಮಾಜೋದ್ಧ ಆದಾಗ ಧಾಮರ್ಿಕತೆ ಸಾರ್ಥಕ ಪಡೆಯಬಲ್ಲದು. ಆಮೂಲಕ ಸಾಮರಸ್ಯದ ಬದುಕು ನಿಮರ್ಾಣವಾಗಬೇಕು ಎಂದು ಪಾಲೆತ್ತಾಡಿ ಅಭಿಪ್ರಾಯ ಪಟ್ಟರು.
ಲತಾ ಜೆ.ಶೆಟ್ಟಿ ಮಾತನಾಡಿ ನಮ್ಮಲ್ಲಿನ ಮಹಿಳಾ ಮಂಡಳಿ ಸದಾ ಸಮಾಜಪರ ಸೇವೆಗೆ ಬದ್ಧವಾಗಿದೆ. ನಾವು ಒಡಿಯೂರುಗೆ ತೆರಳಿ ಅಲ್ಲಿನ ಸೇವೆಗಳನ್ನು ತಿಳಿದಿದ್ದೇವೆ. ಆದುದರಿಂದ ಮುಂದೆಯೂ ನಮ್ಮ ಪ್ರೋತ್ಸಹ ತಮಗಿದೆ ಎಂದರು.
ಅಭಿನಂದನಾ ಗೌರವಕ್ಕೆ ಉತ್ತರಿಸಿದ ರಾಘು ಶೆಟ್ಟಿ, ಇದು ಭಾಗ್ಯವಯ್ಯ… ಇದು ಭಾಗ್ಯವಯ್ಯ… ಎಂಬಂತೆ ನಮ್ಮಂತಹ ದಂಪತಿಯನ್ನು ಶ್ರೀಗಳು ಅಭಿನಂದಿಸುವುದು ನಮ್ಮ ಭಾಗ್ಯ. ಬಪ್ಪನಾಡು ಶ್ರೀ ದುಗರ್ಾಪರಮೇಶ್ವರಿ ಮಾತೆಯ ಕೃಪಾನುಸಾರ ಇದೆಲ್ಲವೂ ಸಾಧ್ಯವಾಗಿದೆ. ಆ ಮಾತೆ ನಮ್ಮನ್ನು ಇಷ್ಟೇತ್ತರಕ್ಕೆ ಬೆಳೆಸಿದೆ. ಇಂತಹ ಸೌಭಾಗ್ಯ ತಮ್ಮೆಲ್ಲರ ಪಾಲಿಗೂ ಒದಗಲಿ ಎಂದರು.
ಬಳಗದ ಜೊತೆ ಕಾರ್ಯದಶರ್ಿಗಳಾದ ದಿವಾಕರ್ ಬಿ.ಶೆಟ್ಟಿ ಮತ್ತು ದಾಮೋದರ ಶೆಟ್ಟಿ, ಸದಸ್ಯರುಗಳಾದ ವಾಮಯ್ಯ ಶೆಟ್ಟಿ, ಗುಣಪಾಲ ಶೆಟ್ಟಿ, ಸಚಿನ್ ಶೆಟ್ಟಿ, ಮೋಹನ್ ಹೆಗ್ಡೆ, ಪ್ರಕಾಶ್ ಶೆಟ್ಟಿ ನೆರೂಲ್, ಎಂ.ತ್ಯಾಂಪಣ್ಣ ಶೆಟ್ಟಿ ಹಾಗೂ ವಜ್ರಮಾತ ಮಹಿಳಾ ಘಟಕದ ಕಾರ್ಯದಶರ್ಿ ಚಿತ್ರಾ ಆರ್.ಶೆಟ್ಟಿ, ಜೊತೆ ಕಾರ್ಯದಶರ್ಿ ಕುಶಲಾರ್.ಶೆಟ್ಟಿ ಮುಲುಂಡ್, ಮಾಜಿ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ ಮತ್ತಿತರರು ಶ್ರೀಗಳಿಗೆ ಆರತಿಗೈದು ಸುಖಾಗಮನ ಬಯಸಿದರು. ಆನಂದ್ ಐಲ್ ಮತ್ತು ಲಿಲಾವತಿ ಎ.ಐಲ್ ದಂಪತಿ ಶ್ರೀಗುರು ಪಾದ ಸೇವೆಗೈದರು. ಸುಖೇಶ್ ಭಂಡಾರಿ ಮತ್ತು ಸಂತೋಷ್ ಭಂಡಾರಿ ಪೂಜಾಧಿಗಳನ್ನು ನೆರವೇರಿಸಿದರು.
ಬಳಗದ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕನಡಿಗಳನ್ನಾಡಿ ಕುಗ್ರಾಮವಿದ್ದ ಶ್ರೀ ಕ್ಷೇತ್ರದ ಒಡಿಯೂರುನಲ್ಲಿ ಸಮಜೋಭಿವೃದ್ಧಿಯ ಒಳ್ಳೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜಾತಿಮತ ಬೇಧವಿಲ್ಲದೆ ಇಲ್ಲಿ ಸೇವೆಗಳು ನಡೆಯುತ್ತಿದ್ದು ಕ್ಷೇತ್ರಕ್ಕೆ ಖುದ್ಧಾಗಿ ಭೇಟಿ ನೀಡಿದಾಗಲೇ ಎಲ್ಲವುಗಳ ಅರಿವಾಗುವುದು. ತೆಂಕಣದ ಗಾಣಗಾಪುರ ಎಂದೇ ಜನನಿತ ಬೆಳಗುವ ದೇವತಾ ಸಾನ್ನಿಧ್ಯವಷ್ಟೇ ಅಲ್ಲ ಧರ್ಮ ಸಂಸ್ಕೃತಿಯ ಪುನರುಸ್ಥಾನದ ಪುಣ್ಯ ನೆಲೆಯಾಗಿಯೂ ಮಾರ್ಪಟ್ಟಿದೆ. ಸಹೃದಯಿ ಮುಂಬಯಿಗರ ಕೊಡುಗೆಗಳಿಂದ ಕೆಲಸಗಳು ಸುಲಲಿತವಾಗಿ ಸಾಗುತ್ತಿದ್ದು ಭವಿಷ್ಯದಲ್ಲೂ ತಮ್ಮೆಲ್ಲರ ಸಹಯೋಗ ಅವಶ್ಯವಿದೆ. ಸರ್ವಧರ್ಮ ಸಮಭಾವ ಕೇಂದ್ರವಾಗಿ ಬೆಳೆಯುವ ಕ್ಷೇತ್ರದ ಯೋಜನೆಗಳಿಂದ ನಾಡಿನ ಉದ್ಧಾರ ಸಾಧ್ಯವಾಗಿದೆ ಎಂದರು.
ಪುಣೆಯ ನಗ್ರಿಗುತ್ತು ರೋಹಿತ್ ಡಿ.ಶೆಟ್ಟಿ, ಹರೀಶ್ ಮೂಡಬಿದ್ರೆ, ಉಷಾಕುಮಾರ್ ಶೆಟ್ಟಿ, ನಾರಾಯಣ ಕೆ.ಶೆಟ್ಟಿ, ರಂಜನ್ ಶೆಟ್ಟಿ, ಪ್ರೇಮಾ ಎಸ್.ಶೆಟ್ಟಿ, ನಾಶಿಕ್ನ ರತ್ನಾಕರ್ ಶೆಟ್ಟಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಮಾತಾನಂದಮಯಿ ಪ್ರಾರ್ಥನೆಯನ್ನಾಡಿದರು. ಗೌರವ ಕಾರ್ಯದಶರ್ಿ ಪೇಟೆಮನೆ ಪ್ರಕಾಶ್ ಶೆಟ್ಟಿ ಸನ್ಮಾನಿತರು ಹಾಗೂ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ಇನ್ನಬಾಳಿಕೆ ಪುರಸ್ಕೃತ ವಿದ್ಯಾಥರ್ಿಗಳ ಪಟ್ಟಿ ವಾಚಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೋಹನ್ದಾಸ್ ರೈ ಮತ್ತು ಬಳಗವು `ಶ್ರೀಭಕ್ತಿ ರಸ ಸಿಂಚನ’ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ಚಿತ್ರ / ವರದಿ : ರೋನ್ಸ್ ಬಂಟ್ವಾಳ್









