ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶ ಕೈತ್ರೋಡಿ ಸಂಪರ್ಕ ರಸ್ತೆ ಬದಿ ಜೆಸಿಬಿ ಮೂಲಕ ಚರಂಡಿ ಹೂಳೆತ್ತುವ ಕಾಮಗಾರಿ ನಡೆಯುತ್ತಿರುವುದು ಇಲ್ಲಿನ ನಾಗರಿಕರಿಗೆ ಸಂತಸ ಉಂಟು ಮಾಡಿದ್ದರೂ, ರಸ್ತೆಯುದ್ದಕ್ಕೂ ಕೆಸರುಮಯಗೊಂಡು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಮಾತ್ರ ಆಕ್ರೋಶಗೊಂಡಿದ್ದಾರೆ.
ಮಳೆಗಾಲ ಆರಂಭಕ್ಕೆ ಮುನ್ನ ಮೌನವಾಗಿದ್ದ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದೀಗ ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆಯುವಷ್ಟರಲ್ಲಿ ಎಚ್ಚರಗೊಂಡಿರುವ ಬಗ್ಗೆ ನಾಗರಿಕರಿಗೆ ಸಂತಸ ಜೊತೆಗೆ ಅಚ್ಚರಿ ಉಂಟು ಮಾಡಿದೆ.

ಕಳೆದ ಹಲವು ವರ್ಷಗಳಿಂದ ಇಲ್ಲಿನ ಚರಂಡಿ ಹೂಳೆತ್ತುವ ಕಾಮಗಾರಿ ನಡೆಯದೆ ರಸ್ತೆಯಲ್ಲೇ ಮಳೆ ನೀರು ಹರಿದು ಬಹುತೇಕ ರಸ್ತೆ ಹೊಂಡಮಯವಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರೂ 3ಲಕ್ಷ ವೆಚ್ಚದಲ್ಲಿ ತೇಪೆ ಡಾಂಬರೀಕರಣ ಕಾಮಗಾರಿ ನಡೆಸಿದ್ದು, ಅದು ಕಳಪೆ ಕಾಮಗಾರಿ ಎಂಬ ಆರೋಪವೂ ಕೇಳಿ ಬಂದಿತ್ತು.
ಇನ್ನೊಂದೆಡೆ ರಾಯಿ ಪೇಟೆಯಿಂದ ಹಾದು ಹೋಗುವ ಈ ರಸ್ತೆಯನ್ನು ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿಗೆ ಸಂಪರ್ಕಗೊಳಿಸಲು ರಾಜ್ಯ ಸಕರ್ಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಅಥವಾ ಕೇಂದ್ರ ಸಕರ್ಾರದ ‘ಪ್ರಧಾನ ಮಂತ್ರಿ ಗ್ರಾಮ ಸಡಕ್’ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಇವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಚೆಗಷ್ಟೇ ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ಇಲ್ಲಿನ ಕೈತ್ರೋಡಿ ಬೈಲು ಸಂಪರ್ಕ ಅಡ್ಡ ರಸ್ತೆಗೆ ಮಾತ್ರ ರೂ 3ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ನಡೆದಿದ್ದು, ರಾಯಿ-ಪುಂಚೋಡಿ ರಸ್ತೆಗೆ ತೇಪೆ ಕಾಮಗಾರಿಯೂ ನಡೆಸಿಲ್ಲ ಎಂದು ಈಚೆಗೆ ನಡೆದ ವಾಡರ್್ ಸಭೆಯಲ್ಲಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಜಿಲ್ಲೆಯಾದ್ಯಂತ ಬಹುತೇಕ ಗ್ರಾಮೀಣ ರಸ್ತೆಗೆ ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದರೂ ಇಲ್ಲಿನ ರಸ್ತೆಗೆ ಮಾತ್ರ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಾಗರಿಕರಿಂದ ಕೇಳಿ ಬಂದಿದೆ. ಈ ಬಗ್ಗೆ ಇದೇ 20ರಂದು ಪಂಚಾಯಿತಿನಲ್ಲಿ ನಡೆಯಲಿರುವ ಉದ್ಯೋಗ ಖಾತರಿ ಯೋಜನೆ ಬಗ್ಗೆ ‘ವಿಶೇಷ ಮಾಹಿತಿ ಕಾಯರ್ಾಗಾರ’ ಕಾರ್ಯಕ್ರಮದಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.
ಈ ಗ್ರಾಮ ಪಂಚಾಯಿತಿಗೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗ್ರಾಮೀಣ ರಸ್ತೆಗೆ ಚರಂಡಿ ರಚನೆ ಮತ್ತು ಹೂಳೆತ್ತುವ ಕಾಮಗಾರಿ ನಡೆಸಲು ತೊಡಕಾಗಿದ್ದು, ಇಲ್ಲಿನ ನಾಗರಿಕರ ಒತ್ತಾಯದ ಮೇರೆಗೆ ರೂ 30ಸಾವಿರ ವೆಚ್ಚದಲ್ಲಿ ತತರ್ು ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಸ್ಪಷ್ಟಪಡಿಸಿದ್ದಾರೆ.
