ಬಂಟ್ವಾಳ: ತೋಟದಲ್ಲಿ ಬೆಳೆಸಿದ ಹಣ್ಣು ತರಕಾರಿಗಳಿಂದ ಮನುಷ್ಯರ ಆರೋಗ್ಯ ಮತ್ತು ಆದಾಯ ಎರಡನ್ನು ಹೆಚ್ಚಿಸಬಹುದು ಎಂದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಹೇಳಿದರು. ಅವರು ತುಂಬೆ ಶಾರದಾ ಪ್ರತಿಷ್ಠಾನ ಮಂಟಪದಲ್ಲಿ ಸ್ತ್ರೀ ಶಕ್ತಿ ಗೊಂಚಲು ಒಕ್ಕೂಟದ ಸದಸ್ಯರಿಗೆ ಬಲವರ್ಧನ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಾವಯವ ಕೃಷಿಯ ಮೂಲಕ ಮನೆಗೆ ಬೇಕಾದ ಹಣ್ಣು ತರಕಾರಿಗಳನ್ನು ಎಲ್ಲರು ಬೆಳೆಸುವ ಮೂಲಕ ಆರೋಗ್ಯದ ಜೊತೆಗೆ ಕೃಷಿಯನ್ನು ಉಳಿಸುವ ಮಹತ್ಕಾರ್ಯವನ್ನು ಮಾಡಿ ಎಂದರು.
![]()
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ವಹಿಸಿದ್ದರು. ವೇದಿಕೆಯಲಲಿ ತುಂಬೆ ಗ್ರಾ.ಪಂ.ಉಪಾಧ್ಯಕ್ಷ ಪ್ರವೀಣ್ ಕುಮಾರ್, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ತುಂಬೆ ವಿಜಯ ಬ್ಯಾಂಕ್ ಪ್ರ¨ಂಧಕ ಆರ್.ವೈ.ಧಾಮ್ಲೆ, ಗ್ರಾ.ಪಂ.ಸದಸ್ಯರಾದ ಗಣೇಶ್ ಕುಮಾರ್ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸರೋಜ ಭಟ್ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ವಂದಿಸಿದರು. ಮೇಲ್ವಿಚಾರಕಿ ಇಂದಿರಾ ಕಾರ್ಯಕ್ರಮ ನಿರೂಪಿಸಿದರು.
