ವಾಮಂಜೂರು: ಬಡವರ ಮತ್ತು ದುರ್ಬಲರ ಸೇವೆ ಮಾಡುವುದು ಅದು ದೇವರ ಸಮಾನವಾದ ಕೆಲಸ.ಯುವ ಜನರು ತಮ್ಮ ಬದುಕನ್ನು ದೀನದಲಿತರ ,ಆಶಕ್ತ ಜನರ ಸೇವೆಗೆ ಮುಡುಪಾಗಿಡಬೇಕು ಎಂದು ಎಂದು ಸೈಂಟ್ ರೇಮಂಡ್ ಪದವಿ ಕಾಲೇಜಿನ ಸಂಚಾಲಕಿ ಮಾರಿಯೋಲಾ ಹೇಳಿದರು.ವಾಮಂಜೂರಿನ ಸೈಂಟ್ ರೇಮಂಡ್ ಪದವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಫಾ.ರೇಮಂಡರ ಸಂಸ್ಥಾಪನ ದಿನಾಚರಣೆಯಲ್ಲಿ ಫಾ.ರೇಮಂಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

4-1
ರೇಮಂಡರ ಕೊಡುಗೆ ಅಪಾರ-100 ವರ್ಷಗಳ ಹಿಂದೆ ಶಿಕ್ಷಣ ಎನ್ನವಂತದ್ದು ಕೇವಲ ಶ್ರೀಮಂತವರ್ಗದ ಪಟ್ಟಣ ನಿವಾಸಿಗಳಿಗೆ ಸೀಮಿತವಾಗಿತ್ತು. ಆ ಕಾಲದಲ್ಲಿ ಗ್ರಾಮೀಣ ಜನರು ಹಾಗೂ ಬಡವರು ಶಿಕ್ಷಣದಿಂದ ವಂಚಿತರಾಗಿದ್ದರು. ಅದೇ ಕಾರಣಕ್ಕೆ ಬಡವರ ಸೇವೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಫಾ. ರೇಮಂಡರಿಗೆ ಸಲ್ಲುತ್ತದೆ.ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಬೆಥನಿ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಇವರದು ಎಂದರು.ಬೆಥನಿ ಸಂಸ್ಥೆಯ ಕಾರ್ಪೋರೇಟ್ ಮೇನೆಜರ್ ರೆ.ಸಿಸ್ಟರ್ ಸಿಸಿಲೀಯಾ ಮೆಂಡೋನ್ಸಾ ಮಾತನಾಡಿ ದೇವರನ್ನು ಪ್ರತಿಸುವ ಮೂಲಕ ಮಾನವೀಯ ಮೌಲ್ಯವಿರುವ ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ನೂತನಸೈಂಟ್ ರೇಮಂಡ್ ಪದವಿ ಕಾಲೇಜಿನ ಸಂಚಾಲಕಿ ಮಾರಿಯೋಲಾ ವರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಸಗಯಾ ಸೆಲ್ವಿ, ಬಿಎಸ್, ಕಾಲೇಜು ಕಚೇರಿ ಅಧೀಕ್ಷಕಿ ಸಿಸ್ಟರ್ ಡೌರಿಸ್ ಉಪಸ್ಥಿತರಿದ್ದರು. ಅಂಗ್ಲ ವಿಭಾಗದ ಉಪನ್ಯಾಸಕರಾದ ಜಾಯಲೀನ್ ವಾಸ್ ಹಾಗೂ ಶಿಪಾ ಕಾರ್ಯಕ್ರಮ ನಿರೂಪಿಸಿದರು.sಸಿಸ್ಟರ್ ರಿಚರ್ಡ್ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ನಮಿತಾ ವಂದಿಸಿದರು.

By Suddi9

Leave a Reply

Your email address will not be published. Required fields are marked *