ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜು. ಗುರುವಾರ ಬಿ.ಸಿ ರೋಡಿನ ಟ್ರೇಡ್ ಸೆಂಟರ್‍ನಲ್ಲಿರುವ ಬಿಜೆಪಿ ಕಛೇರಿಯಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಜಿ.ಆನಂದ ಅವರು ವಹಿಸಿದ್ದರು. ವೇದಿಕೆಯಲ್ಲಿ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ , ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ್ ಕೋಟ್ಯಾನ್,ಕ್ಯಾ.ಬ್ರಿಜೇಶ್ ಚೌಟ, ಸುದರ್ಶನ್ ಮೂಡಬಿದಿರೆ, ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ,ಕೆ ಪದ್ಮನಾಭ ಕೊಟ್ಟಾರಿ, ಕೆ.ಪ್ರಭಾಕರ ಬಂಗೇರಾ, ನಾಯಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು , ಸುಲೋಚನಾ ಜಿ.ಕೆ.ಭಟ್ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಭಾ ಮಾಲಿನಿ,ಸುಗುಣಾ ಕಿಣಿ, ಜಿಪಂ ಸದಸ್ಯರಾದ ಎಂ ತುಂಗಪ್ಪ ಬಂಗೇರಾ,ರವಿಂದ್ರ ಕಂಬಳಿ, ಕಮಾಲಾಕ್ಷಿ ಪೂಜಾರಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ಧರು.
IMG-20160714-WA0002 (1)
ವಂದೇ ಮಾತರಂ ಗೀತೆಯನ್ನು ಆಶಾ ಪ್ರಸಾದ್ ಕುಮಾರ್‍ರವರು ಹಾಡಿದರು. ಸ್ವಾಗತ ಮತ್ತು ಪ್ರಸ್ತಾವನೆಯನ್ನು ದೇವಪ್ಪ ಪೂಜಾರಿಯವರು ಮಾಡಿದರು ನೂತನ ಅಧ್ಯಕ್ಷರಾಗಿ ಬಿ.ದೇವದಾಸ ಶೆಟ್ಟಿಯವರನ್ನು ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರುರವರು ಅಧಿಕೃತ ಘೋಷಣೆಯನ್ನು ಮಾಡಿದರು.ಆನಂತರ ಕ್ಷೆತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿಯವರು ಕ್ಷೇತ್ರದ ಪಧಾಧಿಕಾರಿಗಳ ಪಟ್ಟಿಯನ್ನು ಘೋóಷಣೆ ಮಾಡಿದರು.
ಸಂಸದರಾದ ನಳಿನ್ ಕುಮಾರ್ ಕಟೀಲ್‍ರವರು ಮಾತನಾಡುತ್ತಾ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿಯವರು ತಾವರೆಯನ್ನು ಅರಳಿಸಬೇಕು ಕರೆಕೊಟ್ಟರು.

ಎ.ರುಕ್ಮಯ ಪೂಜಾರಿ ಮಾತನಾಡುತ್ತಾ ಪಕ್ಷದ ಹಿರಿಯರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ಪಕ್ಷದ ಸಂಘಟನೆಗೆ ಭದ್ರವಾದ ಅಡಿಪಾಯ ಹಾಕಬೇಕೆಂದು ಹೇಳಿದರು,ಕೆ.ಪದ್ಮನಾಭ ಕೊಟ್ಟಾರಿಯವರು ಮಾತನಾಡುತ್ತಾ ಹಳೇಯ ದಿನಗಳಂತೆ ಈಗ ಪಕ್ಷ ಸಂಘಟನೆಗೆ ಕಷ್ಟವಿಲ್ಲ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ ಎಂದರು.ಸುಲೋಚನಾ ಜಿ.ಕೆ.ಭಟ್ ಮಾತನಾಡುತ್ತಾ ಸಂಘಟನೆಯ ಅನುಭವ ಇರುವ ದೇವದಾಸ ಶೆಟ್ಟಿಯವರು ಅಧ್ಯಕ್ಷರಾಗುವುದರಿಂದ ಪಕ್ಷಕ್ಕೆ ಇನ್ನಷ್ಟು ಬಲ ಇರಲಿದೆ ಎಂದರುರಾಜೇಶ್ ನಾೈಕ್ ಮಾತನಾಡುತ್ತಾ ಕಾರ್ಯಕರ್ತರಲ್ಲಿ ಯಾವುದೇ ಅಸಮಧಾನಗಳಿದ್ದರೂ ಅದನ್ನು ಹೊರಗೆಲ್ಲಿಯೂ ಮಾತನಾಡದೆ ಪಕ್ಷದ ಚೌಕಟ್ಟಿನೊಳಗೆ ಮಾತನಾಡಿ ಅದನ್ನು ಪರಿಹರಿಸುವ ಕೆಲಸ ಮಾಡಬೇಕೆಂದರು.
ಅಧಿಕಾರ ಸ್ವೀಕರಿಸಿದ ದೇವದಾಸ ಶೆಟ್ಟಿಯವರು ಮಾತನಾಡುತ್ತಾ ಮುಂದಿನ 2ವರ್ಷಗಳಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಮೂಲಕ ಬಿಜೆಪಿಯನ್ನು ಬಲಪಡಿಸುತ್ತೇವೆ .ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.ನಿರ್ಗಮನ ಅಧ್ಯಕ್ಷರಾದ ಜಿ.ಆನಂದರವರು ಮಾತನಾಡಿ ಕಳೆದ 3 ವರ್ಷಗಳಲ್ಲಿ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸಿದ್ದೇವೆ.ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಬಲವಾಗಬೇಕು ಎಂದರು.ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಇಚ್ಚಿಲ ಬೇಬಿ ಶೆಟ್ಟಿ. ನೀಲಪ್ಪ ಪೂಜಾರಿ ಕೊಳ್ನಾಡು ಮತ್ತು ಡಿವೈಎಸ್‍ಪಿ ಎಂ.ಕೆ ಗಣಪತಿ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.ಮೋನಪ್ಪ ದೇವಸ್ಯ ಧನ್ಯವಾದ ಸಮರ್ಪಣೆ ಮಾಡಿದರು.

By Suddi9

Leave a Reply

Your email address will not be published. Required fields are marked *