ಬಂಟ್ವಾಳ:ವಿವಾಹ ನಿಗದಿಯಾಗಿದ್ದ ಯುವಕನೋರ್ವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಬಸ್ತಿಕೋಡಿಯಲ್ಲಿ ಸೋಮವಾರ ಸಂಭವಿಸಿದೆ.
ಇಲ್ಲಿನ ದಿ.ಸಂಕಪ್ಪ ಮೂಲ್ಯ ಅವರ ಪುತ್ರ ಬಾಲಕೃಷ್ಣ(32)ಆತ್ಮಹತ್ಯೆಗೈದವರು.
ಮೇಸ್ತ್ರಿ ಕೆಲಸಗಾರರಾಗಿದ್ದ ಅವರಿಗೆ ಮುಂದಿನ ತಿಂಗಳು ವಿವಾಹ ನಿಗದಿಯಾಗಿತ್ತು.ಸೋಮವಾರ ಕೆಲಸಕ್ಕೆ ರಜೆ ಮಾಡಿ ಮನೆಯಲ್ಲಿದ್ದು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದರು.ಮನೆ ಮಂದಿ ಕಾರ್ಯ ನಿಮಿತ್ತ ಹೊರಗಡೆ ತೆರಳಿದ್ದು ಸಂಬಂ„ ಬಾಲಕ ಶಾಲೆಯಿಂದ ಮನೆಗೆ ಬಂದಾಗ ಆತ್ಮಹತ್ಯೆ ಬೆಳಕಿಗೆ ಬಂದಿತ್ತು.ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೆಂದು ಪೆÇಲೀಸರು ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಾಯಿ ಮತ್ತು ಇಬ್ಬರು ಸಹೋದರರರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *