ಕೈಕಂಬ :  ಬಂಟ್ವಾಳ ಕಾರ್ಯಕರ್ತರು ಹೇಳಿಕೊಂಡು ಬರುವ ಸಮಸ್ಯೆಯನ್ನು ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳೆನಿಸಿಕೊಂಡವರು ತಾಳ್ಮೆಯಿಂದ ಆಲಿಸಿ ಅದನ್ನು ಪರಿಹರಿಸಲು ಮುಂದಾಗಬೇಕೆಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಸಲಹೆ ನೀಡಿದ್ದಾರೆ. ಅವರು ಬಿಜೆಪಿ ಮುಖಂಡ ಉಳೀಪಾಡಿಗುತ್ತು ರಾಜೇಶ್ ನಾಯ್ಕ್ ರವರ ಒಡ್ಡೂರು ಫಾರ್ಮ್ ನಲ್ಲಿ   ಶನಿವಾರ ನಡೆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶ ಮತ್ತು ಅಭಿನಂದನಾ ಸಭೆಯಲ್ಲಿ  ಪಕ್ಷದ ಮಖಂಡರಿಗೆ ಕಿವಿ ಮಾತು ಹೇಳಿದರು . ಪಕ್ಷದ ಕಾರ್ಯಕರ್ತರು ಸಂಕಷ್ಟಕ್ಕೊಳಗಾದಾಗ ಅವರಿಗೆ ಪಕ್ಷದ ನಾಯಕರು ಸಹಕಾರ ನೀಡಬೇಕೆ ಹೊರತು ಅವರನ್ನು ದೂಷಿಸಬಾರದು ಎಂದು  ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ  ಗೆಲುವು ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ ಎಂದರು. ಇದು ಮುಂಬರುವ ಸ್ಥಳೀಯಾಡಳಿತ ಮತ್ತು ವಿಧಾನ ಸಭಾ ಚುನಾವಣೆಯಲ್ಲಿಯು ಗೆಲುವು ಸಾದಿಸಲು ಕಾರ್ಯ ಕರ್ತರ ಶ್ರಮವಿರಬೇಕು  ಎಂದರು .ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್, ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿ.ಪಂ.ಸದಸ್ಯರಾದ ನಳಿನಿ ಶೆಟ್ಟಿ ,ಗಿರಿಜ ,ಚೆನ್ನಪ್ಪ ಕೋಟ್ಯಾನ್,ತಾ.ಪಂ. ಉಪಾಧ್ಯಕ್ಷ ಆನಂದ ಶಂಬೂರು,ಮೊದಲಾದವರು ಉಪಸ್ಥಿತರಿದ್ದರು.

3 (10)

1 (9)

 

 

1 (10)

 

2 (8)
ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುಲೋಚನಾ ಜಿ.ಕೆ.ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸೀಮಾ ಮಾಧವ ವಂದಿಸಿದರು.ಪ್ರಧಾನ ಕಾರ್ಯದಶರ್ಿ ರಾಮ್ ದಾಸ್ ಬಂಟ್ವಾಳ ನಿರೂಪಿಸಿದರು.
ಸಂಸದರ ಭೇಟಿ; ಸಮಾವೇಶದ ಕೊನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿ ತನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಬಳಿಕ ಪಕ್ಷದ ಪ್ರಮುಖರ ಸಭೆಯಲ್ಲೂ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *