ಮೂಡುಬಿದಿರೆ: ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸೋಮವಾರ ಪದ್ಮಾವತಿ ಕಲಾ ಮಂದಿರ ಮೂಡುಬಿದಿರೆಯಲ್ಲಿ ಜರುಗಿತು.
ಡಿ.ಜೆ.ವಿ.ಸಂಘದ ಸಂಚಾಲಕ ಬಿ. ಪ್ರತಾಪ್ ಕುಮಾರ್ ಸಂಘಗಳನ್ನು ಉದ್ಘಾಟಿಸಿದರು.

ಆಳ್ವಾಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಧಿರೇಂದ್ರ ಜೈನ್ ಮುಖ್ಯ ಅತಿಥಿಯಾಗಿ, ಮಕ್ಕಳಿಗೆ ವಿವಿಧ ಸಂಘಗಳ ಮಹತ್ವವನ್ನು ತಿಳಿಸಿದರು. ಡಿ.ಜೆ.ವಿ.ಸಂಘದ ಕಾರ್ಯದರ್ಶಿ ಅಭಿಜಿತ್ ಅಧ್ಯಕ್ಷತೆವಹಿಸಿದ್ದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಕೆ.ಹೇಮರಾಜ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಅಭಿಲಾಷ ಶೆಟ್ಟಿ, ಆಹ್ವಾನಿತ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಶಾಲೆಯ ಸಹಶಿಕ್ಷಕಿ ನಾಗರತ್ನ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸರಿತಾ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕಿ ಸಂಧ್ಯಾರಾಣಿ ವಂದಿಸಿದರು. ಸಹಶಿಕ್ಷಕಿ ಶ್ರೀಲಸ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
