ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 2016-17 ನೇ ಸಾಲಿನ ಶಾಲಾ ಸಂಸತ್ತನ್ನು ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಶಿಕ್ಷಣವೆಂದರೆ ಕೇವಲ ಕಲಿಕೆಯಲ್ಲ, ಸರ್ವಾಂಗೀಣ ಬೆಳವಣಿಗೆಗೆ ಇರುವ ಮಾರ್ಗ. ಶಾಲಾ ಸಂಸತ್ತು ಯಶಸ್ಸು ಗಳಿಸಲಿ ಎಂದವರು ಹೇಳಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಳ್ವಾಸ್ ಪಿ.ಯು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ್ ಭಂಡಾರಿ, ಸಂಸತ್ತು ಮತ್ತು ಶಾಲಾ ಸಂಸತ್ತು ಕಾರ್ಯನಿರ್ವಹಿಸುವ ರೀತಿಯನ್ನು ವಿಶ್ಲೇಷಿಸಿದರು. ಯುವ ವಿದ್ಯಾರ್ಥಿ ನಾಯಕರಿಗೆ ಶಾಲಾ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಹೇಗೆ ಶಾಲಾಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯ ಶಿಕ್ಷಕಿ ಪದ್ಮಜಾ ವಿದ್ಯಾರ್ಥಿಗಳಿಗೆ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಉಪನಾಯಕ ಪ್ರಣೀತ್ ಶೆಟ್ಟಿ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿ ಯೋಗೀಶ್ ಸ್ವಾಗತಿಸಿದರು. ವಿದ್ಯಾರ್ಥಿ ಸ್ವಸ್ತಿಕ್ ನಿರೂಪಿಸಿದರು. ಶಾಲಾ ನಾಯಕ ಸುಶಾಂತ್ ವಂದಿಸಿದರು.
