ಕೈಕಂಬ:ಶತಮಾನದ ನಾಟಕಕಾರ ಮಾಧವ ತಿಂಗಳಾಯರ 103ನೇ ವರ್ಷದ ಸಂಸ್ಕರಣಾ ಕಾರ್ಯಕ್ರಮ ಹೊಗೆ ಬಜಾರ್ನಲ್ಲಿರುವ ತಿಂಗಳಾಯ ನಿವಾಸದಲ್ಲಿ ಜರುಗಿತು. ಸಾಂಕೇತ ಸಂಸ್ಥೆ ಮಂಗಳೂರು ಹಮ್ಮಿಕೊಂಡ ಸಂಸ್ಕರಣಾ ಕಾರ್ಯಕ್ರಮದಲ್ಲಿ ಮಾಧವ ತಿಂಗಳಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

200
IMG-20160704-WA0014
ಸಂಸ್ಥೆಯ ಗೌರವಾಧ್ಯಕ್ಷ ರಾಮಚಂದರ್ ಬೈಕಂಪಾಡಿ ದೀಪ ಬೆಳಗಿಸಿ “ಅಲ್ಪಾಯುಷಿಯು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಸಾಧನೆ ಮಾಡಿರುವುದನ್ನು ಶ್ಲಾಘಿಸಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕಾದ ಮಹಾಚೇತನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಉಪಪ್ರಾಂಸುಪಾಲರಾದ ಪ್ರೋ.ಕೃಷ್ಣ ಮೂರ್ತಿಯವರು ಮಾಧವ ತಿಂಗಳಾಯರ ಬದುಕಿನ ಚಿತ್ರಣವನ್ನು ತೆರೆದಿಟ್ಟರು. ಸಂಕೇತ ಸಂಸ್ಥೆಯ ಸಂಚಾಲಕ ಜಗನ್ಪವಾರ್ ಮತ್ತು ತುಳು ಅಕಾಡೆಮಿಯ ಸದಸ್ಯ ರಘು ಇಡ್ಕಿದು ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧವ ತಿಂಗಳಾಯರ ಸಾಹಿತ್ಯ ಕೃಷಿ ದಾಖಲೆ ಮತ್ತು ಸಂಗ್ರಹ ಜೋಪಾಸಣೆ ಮಾಡಿದ ಅವರ ಸಹೋದರ ಪ್ರಫುಲ್ಲ ಚಂದ್ರ ತಿಂಗಳಾಯರನ್ನು ಸನ್ಮಾನಿಸಲಾಯಿತು. ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಮಾರ್ ಕಾಸರಗೋಡು, ಸಂಕೇತದ ಹರೀಶ್ ಶಕ್ತಿನಗರ, ಸಂಪತ್ ನೀರ್ಮಾರ್ಗ, ನೀಲಾಧರ ಯೋಗೀಶ್ ಶೆಟ್ಟಿ, ರಾಜಶೇಖರ್, ರೋಹಿಣಿ, ವೈಶಾಕ್ರವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *