ಮಂಗಳೂರು. ಜೂ, 03: ಯುಎಇಯಲ್ಲಿ ನಡೆದ ಹೋಲಿ ಕುರಾನ್ ವಾರಡ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಎಸ್ಸೆಸ್ಸೆಫ್ ಕರ್ನಾಟಕರಾಜ್ಯಾಧ್ಯಕ್ಷ ಶಾಫಿ ಸಆದಿಯವರನ್ನು ಶನಿವಾರರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುನ್ನಿ ಸಂಘಟನೆಗಳ ಒಕ್ಕೂಟ ಶಾಫಿ ಸಆದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.


ಎಸ್ಸೆಸ್ಸೆಫ್ದ.ಕಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಮಾತನಾಡಿ, ಯುಎಇಯಲ್ಲಿ ಸರಕಾರಕೊಡಮಾಡುವ ಹೋಲಿ ಕುರ್ಅನ್ಅವಾರ್ಡ್ ಕಾರ್ಯಕ್ರಮಕ್ಕೆಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದಾರೆ ಶಾಫಿ ಸಅದಿ.ಯುಎಇ ಸರಕಾರದ ಅಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಫಿ ಸಅದಿ ಪವಿತ್ರ ಕುರಾನ್ ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಗಿದೆ ಎಂದು ಹೇಳಿದರು.
ವಕ್ಪ್ ಮಂಡಳಿ ಸದಸ್ಯರಾದ ಅಬೂಬಕ್ಕರ್ ಸಜೀಪ, ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸಲೀಲ್ಕುತ್ತಾರ್, ಹನೀಫ್ ಬಜ್ಪೆ, ಮೊದ್ದೀನ್ ಮುಕ್ಕ, ಎಸ್ವೈಎಸ್ ನಾಯಕ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯಉಪಾಧ್ಯಕ್ಷ ಅಬ್ದುರ್ರಹ್ಮಾನ್ರಝ್ವಿ ಕಲ್ಕಟ್ಟ, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಕುಬೈಬ್ ತಂಙಳ್ ಉಳ್ಳಾಲ, ಉಮರ ಇಲ್ಯಾಸ್ಉಡುಪಿ, ಹಬೀಬ್ ಬೆಂಗಳೂರು, ಅಬ್ದುಲ್ರಝಾ ಕಾವೂರು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
