ಕೈಕಂಬ:ಹಿಂದೂ ವಾರಿಯರ್ಸ್ ಗ್ರೂಪ್‍ನ ವತಿಯಿಂದ ಮಾಸಿಕ ಸೇವಾ ಯೋಜನೆಯಂತೆ ತಿಂಗಳ ಸೇವಾಯೋಜನೆಗೆ ಕೋಡಿಕಲ್ ಮಂಗಳೂರುನಲ್ಲಿ ವಾಸವಾಗಿರುವ ಪ್ರಶಾಂತ್ ಅವರ ರೋಗಪೀಡಿತ ಒಂದು ಕಾಲನ್ನು ಶಸ್ತ್ರಚಿಕತ್ಸೆ ಮಾಡಿ ಅರ್ಧ ಕತ್ತರಿಸಲಾಗಿದ್ದು ಅವರ ಔಷದಿಯ ಮತ್ತು ಎರಡು ಹೆಣ್ಣು ಮಕ್ಕಳ ಭವಿಸ್ಯದ ಹಿತದೃಷ್ಠಿಯಿಂದ ಹಿಂದೂ ವಾರಿಯರ್ಸ್‍ನ 20ನೇ ಮಾಸಿಕ ಸೇವಾಯೋಜನೆಯ ಸೇವಾಧನ 20,000 ರೂ.ಯನ್ನು ಪ್ರಶಾಂತ್ ಅವರ ಮನೆಗೆ ತೆರಳಿ ಹಿರಿಯ ಸದಸ್ಯರಾದ ಪ್ರಶಾಂತ್ ಉಬರಂಬಳ ಇವರು ಜತೆಗಿದ್ದ ಗುಂಪಿನ ಸದಸ್ಯರುಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು. 21ನೇ ಸೇವಾಯೋಜನೆಯಾಗಿ ಕಾರ್ಮಿಕ ನಗರ ಪಚ್ಚನಾಡಿ ಬೋಂದೇಲ್ ಮಂಗಳೂರು ಈ ವಿಳಾಸದಲ್ಲಿರುವ ಎರಡನೇ ಪದವಿ ಪೂರ್ವ ವಿಧ್ಯಾರ್ಥಿನಿ ಪೃಥ್ವಿ ಅವರಿಗೆ ವಿಧ್ಯಾರ್ಜನೆ ಕಾಲೇಜು ಶುಲ್ಕ 10,000ರೂ.ಯನ್ನು ಹಿರಿಯ ಸದಸ್ಯರಾದ ಡಾ. ಸತೀಶ್ ರಾವ್ ಅವರು ಉಪಸ್ಥಿತರಿದ್ದ ಗುಂಪಿನ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿದರು. ಈ ಸಂದರ್ಭ ಗ್ರೂಪ್‍ನ ಸದಸ್ಯರು ಉಪಸ್ಥಿತರಿದ್ದರು.

1 2

 

By suddi9

Leave a Reply

Your email address will not be published. Required fields are marked *