ಕೈಕಂಬ: ನಿತ್ಯ ಬದುಕಿನಲ್ಲಿ ಮಿತವಾದ ಆಹಾರ, ವ್ಯಾಯಾಮ ಹಾಗೂ ವಿಶ್ರಾಂತಿಯ ತತ್ವವನ್ನು ಅಳವಡಿಸುವ ಮೂಲಕ ನಾವು ಮಧುಮೇಹ ಮುಕ್ತರಾಗಲು ಸಾಧ್ಯವಿದೆ. ಆಧುನಿಕ ಬದುಕಿನ ಜಂಜಾಟಗಳನ್ನು ಕಡಿಮೆ ಮಾಡುತ್ತಾ ಸರಳ ಹಾಗೂ ಪ್ರಕೃತಿಗೆ ಪೂರಕವಾದ ಜೀವನ ನಮ್ಮದಾದರೆ ವಿಶ್ವವ್ಯಾಪ್ತಿಯಲ್ಲಿ ಮದುಮೇಹ ಎಂಬ ರೋಗವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ಆರೋಗ್ಯದಿಂದಿದ್ದರೆ ಮನುಷ್ಯರು ಯಾವುದನ್ನು ಬೇಕಾದರು ಸಂಪಾದಿಸಬಹುದು. ಆದರೆ ಆರೋಗ್ಯಕೆಟ್ಟರೆ ಯಾವುದು ಸಾಧ್ಯವಿಲ್ಲ ಎಂದು ಶ್ರೀ ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು. ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಮತ್ತು ಕಲಾವರ್ಧಕ ಯುವಕ ಮಂಡಲ ನಾರಳ ಸಂಕೇಶ ಆಶ್ರಯದಲ್ಲಿ ವಿದ್ಯಾಭಾರತಿ ಸಭಾಭವನಮೊಗರು ಕುಕ್ಕಟ್ಟೆಯಲ್ಲಿ ನಡೆದ ಉಚಿತ ಮಧು ಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ ಶಿಬಿರದಲ್ಲಿ ಆಶ್ರೀರ್ವಚನ ನೀಡಿದರು.

1

2

4 vp madumeha

4

5

6

7

8

9

10

11

3

12

13

ಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ವಹಿಸಿದ್ದರು. ಮಾನವ ಕೃಷಿಗೆ ಬದುಕಿಗೆ ಇನ್ನಷ್ಟು ಒತ್ತು ನೀಡಬೇಕಾಗಿದೆ. ಶ್ರಮದಾಯಕ ದುಡಿಮೆಗೆ ಆಧ್ಯತೆ ನೀಡಬೇಕಾಗಿದೆ. ಪೃಕೃತಿ ಸಹಜವಾಗಿ ಉತ್ಪನ್ನವಾಗುವ ಆಹಾರ ವಸ್ತುಗಳನ್ನೇ ಹೆಚ್ಚೆಚ್ಚು ಬಳಸುವ ಮೂಲಕ ರೋಗಮುಕ್ತ ಜೀವನ ನಡೆಸಲು ಪ್ರಯತ್ನಿಸಬೇಕಾಗಿದೆ ಎಂದು ಅವರು ಹೇಳಿದರು. ವಾರ್ತೆ . ಕಾಮ್ ಪ್ರಧಾನ ಸಂಪಾದಕ ಹರೀಶ್ ಕೆ.ಆದೂರ್ ಉದ್ಘಾಟಿಸಿದರು.
ಗಂಜಿಮಠ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ನಿವೃತ ಮುಖ್ಯ ಶಿಕ್ಷಕ ಮೊಗರ್ ಅಣ್ಣಯ್ಯ ಎಂ, ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಶ್ರೀಕುಮಾರ್, ಪುಷ್ಪರಾಜ ಶೆಟ್ಟಿ ಹಾಗೂ ಕಲಾವರ್ಧಕ ಸಂಘದ ಅಧ್ಯಕ್ಷ ಲಿಖಿತ್ ರಾಜ್ ಉಪಸ್ಥಿತರಿದ್ದರು. ಸೌಜನ್ಯ ಸತೀಶ್ ಪ್ರಾರ್ಥಿಸಿದರು. ಡಾ. ಸತೀಶ್ ಶಂಕರ್ ಸ್ವಾಗತಿಸಿದರು. ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *