ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ 2016-17ನೇ ಸಾಲಿನ ಪರಿಶಿಷ್ಟ ಜಾತಿಯವರಿಗೆ ಉಚಿತ ಎಲ್ ಪಿಜಿ ಗ್ಯಾಸ್ ವಿತರಣೆಯನ್ನು ಶುಕ್ರವಾರ ನಡೆಸಲಾಯಿತು. ಪರಿಶಿಷ್ಟಪಂಗಡದ ಆಯ್ದ ಪಲಾನುಭವಿಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಲತಾ ಹಾಗೂ ಜಿಲ್ಲಾ ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ ವಿತರಿಸಿದರು. 
ಈ ಸಂದರ್ಭದಲ್ಲಿ ಪಿಡಿಒ ನವೀನ್ ಭಂಡಾರಿ, ಪಂ ಉಪಾಧ್ಯಕ್ಷರಾದ ವಾಮನ ಆಚಾರ್ಯ ಹಾಗೂ ಪಂಚಾಯತಿ ಸದಸ್ಯರಾದ ಚಂದ್ರಶೇಖರ ಭಂಡಾರಿ, ಹರೀಶ್ ಪೂಜಾರಿ ಉಪಸ್ಥಿತರಿದ್ದರು.


