ಕಿನ್ನಿಗೋಳಿ; ಅತ್ತೂರು ಮಾಗಣೆ ಶ್ರೀ ಕೊರ್ದಬ್ಬು ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂವಪ್ಪರವರು ಇತ್ತೀಚೆಗೆ ಆಕಸ್ಮಾತ್ ನಿಧನರಾಗಿದ್ದು, ಅವರ ಪತ್ನಿಗೆ ದೈವಸ್ಥಾನದ ವತಿಯಿಂದ 10 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಅತ್ತೂರುಗುತ್ತು ಗಣೇಶ್ ವಿ ಶೆಟ್ಟಿ ಐಕಳ, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಜಗನಾಥ ಶೆಟ್ಟಿ ಪಡು ಮನೆ, ಜಯಶೆಟ್ಟಿ ಕೊಜಪಾಡಿಬಾಳಿಕೆ, ಮಹಾಬಲಶೆಟ್ಟಿ ಪಡು ಮನೆ, ಬಾಬು ಶೆಟ್ಟಿ ಭಂಡರ ಮನೆ, ಪೂವಪ್ಪ ಶೆಟ್ಟಿ ಭಂಡರ ಮನೆ, ರಮಾನಾಥ. ವಿ ಶೆಟ್ಟಿ ಕೊಜಪಾಡಿ ಬಾಳಿಕೆ, ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಶೆಟ್ಟಿ, ಕುಟ್ಟಿ ಮುಖಾರಿ ಪುನೋಡಿ ಮತ್ತಿತರರು ಇದ್ದರು.
