ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮನವಿ ಮಾಡಿದರು. ಅವರು ಬುಧವಾರ ಪಾಣೆಮಂಗಳೂರಿನ ವಾರ್ಡ್  ಸದಸ್ಯೆ ಚಂಚಲಾಕ್ಷಿಯವರ ನೇತೃತ್ವದಲ್ಲಿ ಬಂಗ್ಲೆಗುಡ್ಡೆ ಅಂಗನವಾಡಿ ಕೇಮದ್ರದಲ್ಲಿ ನಡೆದ ಬಕೆಟ್ ವಿತರಣೆ ಹಾಗೂ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.BTW_JUNE22_1

ಕಸ ಸಂಗ್ರಹಣೆಯ ಬಗೆಗೆ ಇರುವ ಎಲ್ಲಾ ಸಮಸ್ಯೆಗಳನ್ನು ಪುರಸಭೆ ಹಂತಹಂತವಾಗಿ ಬಗೆಹರಿಸಿಕೊಂಡು ಬರುತ್ತಿದೆ. ಒಂದು ವರ್ಷದ ಹಿಂದೆಯೇ ಬಕೆಟ್ಗಳು ವಿತರಣೆಗಾಗಿ ಬಂದಿದ್ದರೂ ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ವಿತರಿಸಲು ಸಾದ್ಯವಾಗಿರಲಿಲ್ಲ. ಇದೀಗ ಪುರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಪುರಸಭಾ ವ್ಯಾಫ್ತಿಯ ನಾಗರಿಕರಿಗೆ ಬಕೆಟ್ ವಿತರಿಸುತ್ತಿದೆ.ಎಲ್ಲರೂ ಸದುಪಯೋಗ ಪಡಿಸಿಕೊಂಡು ಪುರಸಭೆಯೊಂದಿಗೆ ಕೈಜೋಡಿಸುಂತೆ ಮನವಿ ಮಾಡಿದರು. ಪುರಸಭಾ ವ್ಯಾಪ್ತಿಲ್ಲಿ ಮಲೇರಿಯಾ, ಡೆಂಘೆ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನಲೆಯಲ್ಲಿ ಒಂದೆರಡು ದಿನಗಳಲ್ಲಿ ಫಾಗಿಂಗ್ ಕಾರ್ಯಚರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಮುಖ್ಯಧಿಕಾರಿ ಸುಧಾಕರ ಭಟ್ ಮಾತನಾಡಿ ತ್ಯಾಜ್ಯ ಸಮಸ್ಯೆ ಪ್ರತೀ ಮನೆಯಿಂದಲೇ ಪ್ರಾರಂಭವಾಗುತ್ತದೆ. ಎಲ್ಲರೂ ಮನೆಯಿಂದಲೇ ಕಸವನ್ನು ಪ್ರತ್ಯೇಕಿಸಿ ಕೊಟ್ಟಲ್ಲಿ ವಿಲೇವಾರಿಗೂ ಸುಲಭವಾಗುತ್ತದೆ. ಇಡೀ ಪುರಸಭಾ ವ್ಯಾಪ್ತಿಯ ಕಸವನ್ನು ವಿಲೇವಾರಿ ಮಾಡುವುದು ಪುರಸಭೆಗೆ ಸವಾಲಾಗಿದ್ದು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ಅರಿವು ಮೂಡಿಸಿಕೊಳ್ಳಬೇಕಾಗಿದೆ ಎಂದರು.
ವಾಡರ್್ ಸದಸ್ಯೆ ಚಂಚಲಾಕ್ಷಿ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಉಮಾವತಿ ಹಾಗೂ ಅಂಗನವಾಡಿ ಕಾರ್ಯಕರ್ತೆ  ಹಾಜರಿದ್ದರು. ಪಾಣೆಮಂಗಳೂರು ವ್ಯಾಪ್ತಿಯ ನಾಗರೀಕರು ಬಕೆಟ್ಗಳನ್ನು ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *