ವಿಟ್ಲ: ಮಕ್ಕಳ ಸೂಕ್ತ ಪ್ರತಿಭೆಗಳಿಗೆ ಅವಕಾಶ ನೀಡಲು ಹಾಗೂ ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಲು ಸಹಪಠ್ಯ ಸಂಘಗಳು ಸಹಕಾರಿ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಲಯನ್ ಸುಮಿತ್ರಾ ಬಿ ಇವರು ಅಭಿಪ್ರಾಯಪಟ್ಟರು. ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ಮುಖ್ಯೋಪಾಧ್ಯಾಯರಾದ ಮೋಹನ್ ರಾಜ್, ಸಹಶಿಕ್ಷಕಿಯಾದ ದೇವಕಿ ಅಮ್ಮ , ಹಾಗೂ ಶಾಲಾನಾಯಕ ಅಕ್ಷಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕರಾದ ವಿಶ್ವನಾಥ ಬಿ, ಹಾಗೂ ದಯಾನಂದ ವಿವಿಧ ಸಂಘಗಳ ಪರಿಚಯ ಮಾಡಿದರು. ಮುಖ್ಯೋಪಾಧ್ಯಾಯರಾದ ಮೋಹನ್ ರಾಜ್ ಸ್ವಾಗತಿಸಿದರು. ಶಾಲಾನಾಯಕ ಅಕ್ಷಯ್ ವಂದನಾರ್ಪಣೆ ಮಾಡಿದರು.ಸ್ಕೌಟ್ಸ್ & ಗೈಡ್ಸ್ ಸಂಘದ ಅಧ್ಯಕ್ಷೆ ಕುಮಾರಿ ತಸ್ರೀಫ ಕಾರ್ಯಕ್ರಮವನ್ನು ನಡೆಸಿಕೊಟ್ಟರು
