ವಿಟ್ಲ: ಮಾದರಿ ಶಾಲಾ ಸಭಾ ಭವನದಲ್ಲಿ ಜೂ. 15 ರಿಂದ ಜೂ.21 ರವರೆಗೆ ತನಕ, ವಿಶ್ವ ಯೋಗ ದಿನದ ಪ್ರಯುಕ್ತ ಸೇವಾ ಭಾರತಿ ವಿಟ್ಲ ಇದರ ಆಶ್ರಯದಲ್ಲಿ ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಯೋಗ ಗುರು ಆನಂದ ಶೆಟ್ಟಿ ಇವರಿಂದ ನಡೆಸಲ್ಪಡುವ, ಉಚಿತ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರವನ್ನು ವಿಟ್ಲ ಉಧ್ಯಮಿ ಸಂಜೀವ ಪೂಜಾರಿಯವರು ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಶಿವಕುಮಾರ್ ವಹಿಸಿದ್ದರು. ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಟ್ಲ ನಗರ ಕಾರ್ಯವಾಹ ಜತ್ತಪ್ಪ ಗೌಡ ಭಾಗವಹಿಸಿದ್ದರು. ಯೋಗ ಗುರು ಆನಂದ ಶೆಟ್ಟಿ ಉಪಸ್ಥಿತರಿದ್ದರು. ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಹರೀಶ್ ಕೆ ವಂದಿಸಿದರು. ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ಪ ಸಹಕರಿಸಿದರು
