ಬಂಟ್ವಾಳ: ಗೋಳ್ತಮಜಲು ಗ್ರಾಮದ ನೆಟ್ಲ ಪರಿಸರದಲ್ಲಿ ವ್ಯಾಪಕವಾಗಿ ಡೆಂಗ್ಯೂ ಜ್ವರ ಹರಡಿದ್ದು, 20 ಕ್ಕೂ ಅಧಿಕ ಜನರು ಆಸ್ಪತ್ರೆ ದಾಖಲಾಗಿದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಜ್ವರ ಬಾಧಿತರು ಶೀಘ್ರ ಗುಣಮುಖರಾಗುವಂತೆ ಮತ್ತು ಮಹಾಮಾರಿ ರೋಗ ಹರಡದಂತೆ ನೆಟ್ಲದ ನಿಟಿಲಾಪುರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಿಟಿಲಾಪುರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಎ. ಎಸ್. ಭಟ್ ,ಪ್ರಮುಖರಾದ ಐತಪ್ಪ ನಾಯ್ಕ್, ಗುರುವಪ್ಪ ಗೌಡ, ಗಿರೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು 

