ಉತ್ತಮ ಚಿತ್ರಗಳಿಗೆ ಜನ ಪ್ರೋತ್ಸಾಹವಿದೆ:ಮನ್ಮೋಹನ್ ಶೆಟ್ಟಿ
ಮುಂಬಯಿ, : ವಿಜಯ ಕುಮಾರ್ ಶೆಟ್ಟಿ ಎಂದೋ ಚಿತ್ರ ಜಗತ್ತನ್ನು ಪ್ರವೇಶಿಸಬೇಕಿತ್ತು. ನಾನು ಹಲವು ವರ್ಷಗಳ ಹಿಂದೆಯೇ ಸಲಹೆಯನ್ನಿತ್ತಿದ್ದೆ. ಈ ಸಾಗರದಲ್ಲಿ ಈಜಾಡಿ ಗೆಲ್ಲುವ ಎಲ್ಲಾ ಶಕ್ತಿಯೂ ಅವರಲ್ಲಿದೆ ಎಂದು ನಾನು ಬಲ್ಲೆ. ಆದರೂ ಸಂಪೂರ್ಣ ಸಿದ್ಧತೆ, ಅನುಭವಗಳನ್ನೂ ಮೈಗೂಡಿಸಿಕೊಂಡು ಸಿನೇಮಾ ರಂಗದಲ್ಲಿ ಮುನ್ನಡೆದರೆ ನನ್ನ ಸಂಪೂರ್ಣ ಸಹಕಾರ ಇದೆ. ಇದೀಗ ತುಳು ಚಲನಚಿತ್ರಗಳ ಸುಗ್ಗಿಯ ಕಾಲ ಉತ್ತಮ ಚಿತ್ರಗಳನ್ನೂ ಜನ ಖಂಡಿತಾ ಪ್ರೋತ್ಸಾಹಿಸುತ್ತಾರೆ ಎಂದು ಆ್ಯಡ್ಲ್ಯಾಬ್ಸ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಮನ್ಮೋಹನ್ ಆರ್. ಶೆಟ್ಟಿ ತಿಳಿಸಿದರು.

ವಿಶ್ವಮಾನ್ಯ ಪಡೆದ ಕಲಾಜಗತ್ತು ಸಂಸ್ಥೆಯು ಮತ್ತೊಂದು ಪ್ರಯೋಗದತ್ತ ಹೆಜ್ಜೆಯನ್ನಿರಿಸಿದ್ದು, ತುಳುಕನ್ನಡ ಸಿನೇಮಾಗಳ ಯೋಜನೆ ಆಗಿಸಿ ಕಲಾಜಗತ್ತು ತನ್ನ ಮತ್ತೊಂದು ಅಂಗಸಂಸ್ಥೆ ಆಗಿಸಿ ರೂಪಿಸಿದ `ಕಲಾಜಗತ್ತು ಕ್ರಿಯೇಶನ್ಸ್’ ಸಂಸ್ಥೆಯನ್ನು ಉದ್ಘಾಟಿಸಿ ಮನ್ಮೋಹನ್ ಶೆಟ್ಟಿ ಮಾತನಾಡಿದರು.
ಇಂದಿಲ್ಲಿ ಸೋಮವಾರ ಸಂಜೆ ಮಲಾಡ್ ಪಶ್ಚಿಮದಲ್ಲಿನ ಸಾಯಿ ಪ್ಯಾಲೇಸ್ ಗ್ರ್ಯಾಂಡ್ ಹೊಟೇಲು ಸಭಾಗೃಹದಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಚರಿಷ್ಮಾ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಉಪಸ್ಥಿತಿಯಲ್ಲಿ ಮನ್ಮೋಹನ್ ಶೆಟ್ಟಿ ದೀಪ ಪ್ರಜ್ವಲಿಸಿ `ಕಲಾಜಗತ್ತು ಕ್ರಿಯೇಶನ್ಸ್’ ಸಂಸ್ಥೆಗೆ ಶುಭಾರೈಸಿದರು.
ಗೌರವ ಅತಿಥಿüಗಳಾಗಿ ಮನಿಫೆÇೀಲ್ಡ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ನ ಕಾರ್ಯಾಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ, ವಿಶ್ವಾತ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ ವೇದಿಕೆಯಲ್ಲಿ ಅಸೀನರಾಗಿದ್ದರು.
ಸುಧೀರ್ ಶೆಟ್ಟಿ ಶುಭಾರೈಸಿ ಮಾತನಾಡಿ ನಾನು ಮಾತ್ರವಲ್ಲ ನನ್ನ ಪರಿವಾರವು ವಿಜಯಕುಮಾರ್ ಶೆಟ್ಟಿ ಅವರ ಕಟ್ಟ ಅಭಿಮಾನಿಗಳು. ಇಂತಹ ಅದ್ಭುತ ಪ್ರತಿಭೆಯ ವ್ಯಕ್ತಿ ಚಿತ್ರ ನಿರ್ಮಾಣಕ್ಕೆ ಮನ ಮಾಡಿರುವಾಗ ನಾವೆಲ್ಲರೂ ಸರ್ವ ವಿಧಾನದಿಂದಲೂ ಅವರಿಗೆ ಪೆÇ್ರೀತ್ಸಾಹ ನೀಡಬೇಕು. ಮನಮೋಹನ್ ಅವರು ಚಲನ ಚಿತ್ರೋದ್ಯಮದ ಮಹಾನ್ ಶಕ್ತಿಯು, ವ್ಯಕ್ತಿಯೂ ಆಗಿದ್ದಾರೆ. ವಿಜಯ ಕುಮಾರ್ ಅವರ ಪ್ರತಿಭೆಯನ್ನು ಮೆಚ್ಚಿ ಇಂದು ಅವರ ಬೆಂಗಲಿಗೆ ಮುಂದೆ ಬಂದಿರುವಾಗ ಈ ಸಂಸ್ಥೆ ಹೊಸ ಕ್ರಾಂತಿ ಮಾಡುವುದು ಖಂಡಿತಾ. ಆ ಮೂಲಕ ಸಂಸ್ಥೆ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ ಎಂದರು.
ಸುರೇಶ್ ಭಂಡಾರಿ ಮಾತನಾಡಿ ವಿಜಯಣ್ಣ ಸಿನೇಮಾ ಮಾಡತ್ತಾರಂತೆ ಎನ್ನುವುದು ಕುತೂಹಲ. ಮುಂಬಯಿ ಕಲಾ ರಂಗದಲ್ಲಿ ಒಂದು ಹೊಸಯುಗ ಪ್ರಾರಂಭವಾಗಲಿದೆ. 1979ರಿಂದ ಸಾಧನೆಯ ಮೆಟ್ಟಲೇರುತ್ತಾ ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸುತ್ತಾ ಮುಂದೆ ಬರುತ್ತಿರುವ ಮುಂಬಯಿಯರಿಗೆ ಚಲನಚಿತ್ರ ರಂಗ ಹೊಸತೇನಲ್ಲ. ಹಲವಾರು ಚಲನ ಚಿತ್ರಗಳಲ್ಲಿ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟನಾಗಿ, ಲೇಖಕರಾಗಿ ಈಗಾಗಲೇ ಅಪಾರ ಅನುಭವ ಹೊಂದಿರುವ ವಿಜಯಣ್ಣ ನಮ್ಮ ಕಲಾಜಗತ್ತು ಕ್ರಿಯೇಷನ್ಸ್ ಹೆಸರು ಜಗದ ಉದ್ಧಗಲಕ್ಕೆ ಕೊಂಡೊಯ್ಯುವುದು ಖಂಡಿತ. ಏಕೆಂದರೆ ಅವರ ಪ್ರತಿಭೆÉಯನ್ನು ಅರಿತ ನಮಗೆಲ್ಲಾ ಖಂಡಿತ ಪವಾಡ ಅಲ್ಲ ನಿಜವಾದ ಸತ್ಯ ಎಂದರು.
ವಿಜಯ್ ಕುಮಾರ್ ಓರ್ವ ಸೂಕ್ಷ್ಮ ಸಂವೇದಿ ನಾಟಕಕಾರ ಮತ್ತು ಅಪ್ರತೀಮ ಕಲಾಕಾರ. ಕಲಾಜಗತ್ತು ಮೂಲಕ ನಾಡಿನ ಸಂಸ್ಕೃತಿ, ಪರಂಪರೆಗಳನ್ನು ತನ್ನ ಪ್ರತಿಭೆ, ನಾಟಕ, ಸಿನೇಮಾ ನಟನೆ, ನಿರ್ದೇಶನಗಳ ಮೂಲಕ ಜಗಕ್ಕೆ ತೋರಿದ ತುಳುಕನ್ನಡಿಗರ ಮೇರುನಟ. ವಿಜಯಣ್ಣ ಖಂಡಿತವಾಗಿಯೂ ಅದ್ಭೂತ ಪ್ರತಿಮೆ ಅಂತೆಯೇ ನಮ್ಮೆಗೆಲ್ಲರಿಗೂ ಅತ್ಯಂತ ಆತ್ಮೀಯರು ಕೂಡಾ. ನಾವೆಲ್ಲರೂ ಹಲವು ವರ್ಷಗಳಿಂದ ಕಲಾಜಗತ್ತು ಮತ್ತು ಅವರ ಅಭಿಮಾನಿಗಳಗಿ ಅವರೊಂದಿಗೆ ಇದ್ದೇವೆ. ಅವರು ಹೊಸ ಯೋಜನೆಗೆ ಶಕ್ತಿಯನ್ನು ತುಂಬೋಣ. ನೂತನ ಚಲನಚಿತ್ರ ಪತ್ತನಾಜೆ ಖಂಡಿತಾ ಗೆಲ್ಲುತ್ತದೆ ಎಂಬ ಭರವಸೆ ಇದೆ. ಮುಂಬಯಿಯಲ್ಲಿ ದ್ದು ತುಳುನಾಡಿನ ಪ್ರಾತ್ಯಕ್ಷಿಕೆ ರೂಪಿಸಿ ವಿಶ್ವಕ್ಕೆ ಗುರುತಿಸಿ ಕೊಂಡ ಸಾಧಕ ಇವರಗಿದ್ದಾರೆÉ. ಇವರ ಸಂಕಲ್ಪದ ಯೋಜನೆಗಳೆಲ್ಲವೂ ಫಲಪ್ರದವಾಗಲಿ ಎಂದÀು ವಿವೇಕ್ ಶೆಟ್ಟಿ ಶುಭ ಕೋರಿದರು.
ತುಳು ಕನ್ನಡ ಕಲಾ ರಂಗದಲ್ಲಿ ತೋನ್ಸೆ ವಿಜಯಕುಮಾರ ಶೆಟ್ಟಿ ಅವರಿಗೆ ಸರಿಸಾಟಿ ಮತ್ತೋಬ್ಬರು ಇಲ್ಲ. ಈ ಕ್ಷೇತ್ರದಲ್ಲಿ ಕಬ್ಬಿಣವನ್ನು ಕೂಡ ಚಿನ್ನ ಮಾಡುವ ಶಕ್ತಿ ಪ್ರತಿಭೆ ಅವರಲ್ಲಿದೆ. ನಿತ್ಯ ನಿರಂತರ ಅನ್ವೇಷಣೆ ಎಲ್ಲೆಡೆಯೂ ಜಯದ ಸಾಧನೆ. ಈಗ ಚಿತ್ರ ನಿರ್ಮಾಣಕ್ಕೆ ಪ್ರಾರಂಭ. ಕಟೀಲೇಶ್ವರಿಯ ಸಾನಿಧ್ಯದಿಂದ ಪ್ರಾರಂಭವಾಗುವ ಪತ್ತನಾಜೆ ತುಳು ಚಲನಚಿತ್ರ ನಮ್ಮ ವಿಜಯಣ್ಣರ ನಿರ್ದೇಶನದಲ್ಲಿ ಸೆಟ್ಟೆಲೇಲಿದೆ ಇದು ಯಶಸ್ವಿಯಾಗಲಿ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಐಕಳ ಹರೀಶ್ ತಿಳಿಸಿದರು.
ಕಲಾಜಗತ್ತು ಕ್ರಿಯೇಶನ್ಸ್’ ನೂತನ ಅಲೋಚನೆಯ ವೇದಿಕೆಯಾಗಿದ್ದು, ಈ ಬ್ಯಾನರ್ನಡಿ ಸದ್ಯ ಒಂದೆರಡು ತುಳುಕನ್ನಡ ಚಲನಚಿತ್ರಗಳನ್ನು ರೂಪಿಸಲಿದೆ. ಇನ್ನೆರಡು ದಿನಗಳಲ್ಲೇ `ಪತ್ತನಾಜೆ’ ತುಳು ಚಲನಚಿತ್ರ ಸೆಟ್ಟೇರಲಿದೆ. ಮೊದಲ ಹೆಜ್ಜೆಯಲ್ಲಿ ಅನೇಕನೇಕ ಅನುಭವಗಳನ್ನು ಪಡೆದು ಮುಂದಿನ ದಿನಗಳಲ್ಲಿ ಅನುಭವೀ ತುಳುಕನ್ನಡ ಚಲನಚಿತ್ರಗಳನ್ನು ಕಲಾಭಿಮಾನಿಗಳಿಗೆ ನೀಡಿ ಹೊಸ ಅಧ್ಯಯನಕ್ಕೆ ನಾಂದಿಯಾಡಲಿದ್ದೇವೆ ಎಂದು ಅಂತಾರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗತಜ್ಞ, ಕ್ರಿಯೇಶನ್ಸ್’ ನ ರೂವಾರಿ ತೋನ್ಸೆ ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.
ಚಿತ್ರನಟ ಹರೀಶ್ ವಾಸು ಶೆಟ್ಟಿ, ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಸ್ಸಿಯಾ, ಉದ್ಯಮಿಗಳಾದ ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ರಾಜಗೋಪಾಲ ಶೆಟ್ಟಿ, ಜಯಕರ ಶೆಟ್ಟಿ (ಜಾಜಿ), ಹರೀಶ್ ಎನ್.ಶೆಟ್ಟಿ ಮಲಾಡ್, ಬಾಲಕೃಷ್ಣ ಎಸ್.ಶೆಟ್ಟಿ, ಅನಿಲ್ ಶೆಟ್ಟಿ ಎಳಿಂಜೆ, ತೋನ್ಸೆ ಸಂಜೀವ ಶೆಟ್ಟಿ, ಭಾಸ್ಕರ್ ಶೆಟ್ಟಿ ಸಫೇದ್ಪೂಲ್, ಪೆÇಲ್ಯ ಶೇಖರ್ ಶೆಟ್ಟಿ, ರಮೇಶ್ ಡಿ.ರೈ ಸೇರಿದಂತೆ ಅನೇಕ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಎರ್ಮಾಳ್ ಹರೀಶ್ ಶೆಟ್ಟಿ ಮುಂದಾಳುತ್ವದಲ್ಲಿ ಸಂಘಟಿಸಲಾದ ಸಮಾರಂಭದಲ್ಲಿ ರಘುನಾಥ ಎನ್.ಶೆಟ್ಟಿ ಚಾರ್ಕೋಪ್ ಕಾರ್ಯಕ್ರಮ ನಿರೂಪಿಸಿದರು. ಕಲಾಜಗತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಪ್ರಸ್ತಾವಿಕ ನೂಡಿಗಳನ್ನಾಡಿದರು. ದಯಾಸಾಗರ್ ಚೌಟ ಧನ್ಯವಾದ ಸಮರ್ಪಿಸಿದರು.






