ಬಂಟ್ವಾಳ: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಅಮ್ಟೂರು ಗ್ರಾಮದ ಗಣೇಶ್ ಎಂಬವರಿಗೆ ಬಿಡುಗಡೆಯಾದ ರೂ. 1,00000(ಒಂದು ಲಕ್ಷ) ಮೊತ್ತದ ಪರಿಹಾರ ನಿಧಿಯನ್ನು ಅರಣ್ಯ ಪರಿಸರ ,ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈ ಸಚಿವರ ಬಿ.ಸಿ.ರೋಡ್ ಕಛೇರಿಯಲ್ಲಿ ವಿತರಿಸಿದರು. ತಹಶೀಲ್ದಾರ್ ಪುರಂಧರ ಹೆಗ್ಡೆ , ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಸಾಹುಲ್ ಅಮೀದ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಮಾಜಿ ತಾ.ಪಂ.ಅಧ್ಯಕ್ಷ ಪದ್ಮನಾಭ ರೈ, ಭೂ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಬಿ.ಶೆಟ್ಟಿ, ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು , ಪಂ.ಸದಸ್ಯರಾದ ದೇವಪ್ಪ ಕರ್ಕೆರಾ, ಜಿ.ಎಂ.ಇಬ್ರಾಹಿಂ, ಅಬ್ದುಲ್ ಅಜೀಜ್ , ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.

KAR_7855

By Suddi9

Leave a Reply

Your email address will not be published. Required fields are marked *