ಬಂಟ್ವಾಳ: ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಇವರಿಗೆ ಕಳೆದ ಸಾಲಿನಲ್ಲಿ ಪಾಲಿಸಿ ಮಾರಾಟ ವಿಭಾಗಲ್ಲಿ ದೊರೆತ ಪ್ರಥಮ ಸ್ಥಾನ ಬಹುಮಾನವನ್ನು ಎಲ್ಲೈಸಿ ವಿಭಾಗೀಯ ಮೆನೇಜರ್ ಮಹಮ್ಮದ್ ಅಜರುದ್ದೀನ್ ಅವರು ಶನಿವಾರ ಮಂಗಳೂರಿನಲ್ಲಿ ವಿತರಿಸಿ ಅಭಿನಂದಿಸಿದರು. ವಿಭಾಗೀಯ ಅಧಿಕಾರಿ ಪಿ.ವಿಶ್ವೇಶ್ವರ ರಾವ್, ಮಾರುಕಟ್ಟೆ ಮೆನೇಜರ್ ರಾಜೇಶ್ ಮುದೋಳ್, ಮಾರಾಟ ವಿಭಾಗ ಮೆನೇಜರ್ ಶಶಿಧರ್ ಮತ್ತಿತರರು ಇದ್ದರು.

