ಕೈಕಂಬ:ಶ್ರೀ ರಾಜರಾಜೃಶ್ವರೀ ದೇವಸ್ಥಾನ ಪೊಳಲಿಯ ಜೀರ್ಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮಗಳು ಜೂನು.13 ಸೋಮವಾರದಿಂದ ಜುಲೈ4 ಸೋಮವಾರದವರೆಗೆ ನಡೆಯಲಿದೆ.
ಕಾರ್ಯಕ್ರಮಗಳು
ಜೂ.13 ಸೋಮವಾರ ಬೆಳಗ್ಗೆ 8.30ಕ್ಕೆ ಪ್ರಾರ್ಥನೆ, ದ್ವಾದಶ ನಾರಿಕೇಲ ಗಣಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ.
ಜೂ.14 ಮಂಗಳವಾರ ಬೆಳಗ್ಗೆ ದುರ್ಗಾಹೋಮ, ಮಹಿಷಮರ್ದಿನಿ ಹೋಮ ಮಂತ್ರದಿಂದ ದುರ್ಗಾಹೋಮ, ದುರ್ಗಾದೇವಸ್ಥಾನದಲ್ಲಿ ಬೆಳ್ಳಿ ತಂಬಿಗೆಯಲ್ಲಿ ನಾಣ್ಯ ತುಂಬಿಸಿ ಪುಷ್ಪಾಕ್ಷತೆ ಮೇಲೆ ಸುವರ್ಣ ನಾಣ್ಯ ಇಟ್ಟು “ಸಾವಿರ ಸೀಮೆ” ಯವರೆಲ್ಲ ಸೇರಿ ಪ್ರಾರ್ಥಿಸುವುದು. ಮಧ್ಯಾಹ್ನ12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ ಗಂಟೆ 8.30ಕ್ಕೆ ರಂಗಪೂಜೆ, ಪ್ರಾರ್ಥನೆ.
ಜೂ.17 ಶುಕ್ರವಾರ ಸಾಯಂಕಾಲ 5.30ರಿಂದ ಸುದರ್ಶನ ಹೋಮ.
ಜೂ.18 ಶನಿವಾರ ಬೆಳಗ್ಗೆ 9ರಿಂದ ತ್ರಿಷ್ವುಪ್ ಹೋಮ,ಸಂಜೆ 5.30ರಿಂದ ಮಹಾಸುದರ್ಶನ ಹೋಮ
ಜೂ.19 ರವಿವಾರ ಸಂಜೆ ಗಂಟೆ 5.30ರಿಂದ ಅಘೋರ ಹೋಮ
ಜೂ.20 ಸೋಮವಾರ ಬೆಳಗ್ಗೆ 5.30ರಿಂದ ತ್ರಿಕಾಲ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ 8.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ.
ಜೂ.22 ಬುಧವಾರ ಮಂತ್ರವಾದ
ಜೂ.23ಗುರುವಾರ ಮಂತ್ರವಾದ, ವಾಸ್ತು ರಕ್ಷೋಘ್ನ ಹೋಮ ಇತ್ಯಾದಿ.
ಜೂ.24 ಶುಕ್ರವಾರ ಬೆಳಗ್ಗೆ 6ರಿಂದ ಗಣಪತಿಹೋಮ, ಕಲಶ, ಪರಿವಾರ ದೇವತೆಗಳಿಗೆ ಕಲಾಶಾಭಿಷೇಕ, 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ,
ಜೂ.27 ಸೋಮವಾರದಿಂದ ಭಾಗವತ ಸಪ್ತಾಹ ಆರಂಭ.
ಜು.3 ರವಿವಾರ ಭಾಗವತ ಸಪ್ತಾಹ ಮಂಗಳ- ಪ್ರವಚನ ಮಧ್ಯಾಹ್ನ ಗಂಟೆ 3ರಿಂದ 6ರ ತನಕ
ಜು.4 ಸೋಮವಾರ ಬೆಳಗ್ಗೆ 9ರಿಂದ ಚಕ್ರಾಭ್ಯ ಪೂಜೆ, ದ್ವಾದಶಿ ಮೂರ್ತಿ ಆರಾಧನೆ, ಸಾಯುಜ್ಯ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ. ನಡೆಯಲಿದೆ. ಎಂದು ದೇವಳದ ಕಾರ್ಯನಿರ್ವಾಣಾಧಿಕಾರಿ ತಿಳಿಸಿದ್ದಾರೆ.

