ಬಂಟ್ವಾಳ: ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ಬೋಳಂತೂರು ಗ್ರಾಮ ಪಂಚಾಯತ್ ಹೊಸದಾಗಿ ರಚಿತವಾಗಿದ್ದು, ಪಂಚಾಯತ್ ಆಸ್ತಿತ್ವಕ್ಕೆ ಬಂದ ಮೇಲೆ ಮೊದಲ ಅಭಿವೃದ್ಧಿ ಸಭೆ ಇದಾಗಿದ್ದು, ಸಿದ್ಧರಾಮಯ್ಯನವರ ಹೊಸ ಸರಕಾರ ಬಂದ ಸಂದರ್ಭದಲ್ಲಿ ಅವರ ಕನಸು ನನಸಾಗಿದ್ದು ನನ್ನ ವಿಧಾನಸಭಾ ಕ್ಷೇತ್ರದಲ್ಲಿ 9 ಹೊಸ ಗ್ರಾಮ ಪಂಚಾಯತ್ಗಳಾಗಿದ್ದು ಅದರಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ಒಂದಾಗಿದೆ.
1

ಹೊಸ ಗ್ರಾಮ ಪಂಚಾಯತ್ಗೆ ಹಲವಾರು ಮೂಲಭೂತ ಸೌಕರ್ಯಗಳು ಅಗತ್ಯವಿದ್ದು ಅದರಲ್ಲಿ ಪಂಚಾಯತ್ ಕಟ್ಟಡ ಪ್ರಮುಖ್ಯವಾದದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಡಿ ಮಾಣಿ ಜಿಲ್ಲಾ ಪಂಚಾಯತ್ನ ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಹೆಚ್ಚುವರಿಯಾಗಿ 18 ಕೋಟಿ ರೂಪಾಯಿ ಯೋಜನೆ ಮಂಜೂರಾಗಿದೆ. ಇದರಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ಸೇರಿಕೊಂಡಿದ. ಇದಲ್ಲದೆ ಮದಕ-ತಾಳಿತ್ತನೂಜಿ-ದಂಡೆಮಾರು ರಸ್ತೆಯು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಮಂಜೂರಾಗಿರುತ್ತದೆ, ಎಂದು, ದಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ. ರಮಾನಾಥ ರೈಯವರು ಹೇಳಿದರು.

ಅವರು ಬೋಳಂತೂರು ಗ್ರಾಮ ಪಂಚಾಯತ್ ನ ಪಂಚಾಯತ್ ಹೊಸ ಕಟ್ಟಡದ ಶಿಲಾನ್ಯಾಸ, ಕಲ್ಪನೆ ಬಸ್ಸು ತಂಗುದಾಣ ಹಾಗೂ ಅಂಗಡಿಕಟ್ಟಡ, ಕಲ್ಪನೆ ಎಂಬಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ ನೇರವೆರಿಸಿ ಗ್ರಾಮ ಪಂಚಾಯತ್ ಕಛೇರಿ ಬಳಿ ಏರ್ಪಡಿಸಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ, ತಾ.ಪಂ. ಸದಸ್ಯರಾದ ಶೋಭ ಪಿ. ರೈ ತಾ.ಪಂ. ಅಧ್ಯಕ್ಷರಾದ  ಚಂದ್ರಹಾಸ್  ಕರ್ಕೇರ, ಉಪಾಧ್ಯಕ್ಷರಾದ ಬಿ.ಎಮ್. ಅಬ್ಬಾಸ್ ಆಲಿ, ಎಮ್.ಎಸ್. ಮಹಮ್ಮದ್ ಶ್ರೀ ಚಂದ್ರಪ್ರಕಾಶ್ ಶೆಟ್ಟಿ  ಮಾಧವ ಮಾವೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಆಸ್ಯಮ್ಮ ಉಪಾಧ್ಯಕ್ಷರಾದ  ಚಂದ್ರಶೇಖರ್ ರೈ ಹಾಗೂ ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ನರೇಂದ್ರ ಬಾಬು, ಕಿರಿಯ ಇಂಜಿನಿಯರಾದ ಶ್ರೀ ಜಗದೀಶ್ ಉಪಸ್ಥಿತರಿದ್ದರು.

ಬೋಳಂತೂರು ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ  ಚಂದ್ರಶೇಖರ್ ರೈ ಸ್ವಾಗತಿಸಿ, ಪ್ರಸ್ತಾವನೆಗೈದು, ಬೋಳಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿ. ರಮಾನಾಥ ರೈ ನೇತೃತ್ವದಲ್ಲಿ ತುಂಬಾ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಟ್ರೆಸ್ಸಿ ರೊಡ್ರಿಗಸ್ ವಂದಿಸಿದರು.  ಹಮೀದ್ ಕಲ್ಲಡ್ಕ ಇವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *