ಒಂದು ಕಾಲದಲ್ಲಿ ನಿಂತ ನೀರಾಗಿದ್ದ ತುಳು ಚಿತ್ರರಂಗಕ್ಕೆ ಈಗ ಸುಗ್ಗಿ ಕಾಲ, ತುಳು ಚಿತ್ರವನ್ನು ತುಳುವರು ಸ್ವೀಕರಿಸುತ್ತಾರೆ ಎಂದು ಗೊತ್ತಾದದ್ದೇ ತಡ ತುಳುವಿನಲ್ಲಿ 50 ಕ್ಕಿಂತಲೂ ಹೆಚ್ಚು ಟೈಟಲ್ ನೊಂದಣಿ ಗೊಂಡು ವಾರಕ್ಕೊಂದರಂತೆ ತುಳು ಚಿತ್ರಗಳು ಬಿಡುಗಡೆಗೊಂಡವು. ಕನ್ನಡ ಸಿನಿಮಾದವರು ಒಂದು ಬಾರಿ ಕೊಸ್ಟಲ್ ವುಡ್ನತ್ತ ನೋಡುವಂತೆ ಮಾಡಿತು, ಮುಂಬೈಯಿಂದ ರಾಮು ಶೆಟ್ರು, ಬೆಂಗಳೂರುನಿಂದ ರಾಜಶೇಖರ್ ಕೋಟ್ಯಾನ್ ತುಳು ಚಿತ್ರವನ್ನು ನಿರ್ಮಿಸಿ ತಮ್ಮ ಅದೃಷ್ಟ ಪರೀಕ್ಷಿದ್ದರು, ಆದರೆ ತುಳುವರು ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಬಹಳ ಕಡಿಮೆ, ಅದರಲ್ಲೂ ದರ್ಶನ್ ನಂತಹ ಅಗ್ರ ಪಂಕ್ತಿಯ ನಾಯಕರನ್ನು ಹಾಕಿಕೊಂಡು ಸಿನಿಮಾ ಮಾಡುದೆಂದರೆ ಅದು ಸಾಹಸವೇ ಸರಿ, ಅಂತಹ ಸಾಹಸ ನಮ್ಮ ಕರಾವಳಿಯ ರಾಘವೇಂದ್ರ ಹೆಗಡೆ ಮಾಡಿದ್ದಾರೆ. ರಾಘವೇಂದ್ರ ಹೆಗಡೆ ಹಿಂದಿ ಮತ್ತು ಕಿರು ತೆರೆಯಲ್ಲಿ ಸಾಕಷ್ಟು ಪ್ರಸಿದ್ದಿಯ ಹೆಸರು ಪಡೆದಿದ್ದಾರೆ. ಕನ್ನಡ ಮೇಲಿನ ಅಭಿಮಾನದಿಂದ ನೇರವಾಗಿ ಬೆಂಗಳೂರಿಗೆ ಬಂದು ದರ್ಶನ್ ಅಬಿನಯದಲ್ಲಿ ಜಗ್ಗುದಾದ ಕನ್ನಡ ಚಿತ್ರ ನಿರ್ಮಿಸಿದ್ದಾರೆ.


ಜಗ್ಗುದಾದ ಕನ್ನಡ ಚಿತ್ರರಂಗದ ಪಾಲಿಗೆ ಬಹುನಿರೀಕ್ಷಿತ ಚಿತ್ರ, ರಾಘವೇಂದ್ರ ಹಗಡೆ ಅವರ ಕನಸಿನ ಕೂಸು, ಕನ್ನಡ ಸಿನಿಮಾ ನಿರ್ಮಿಸಬೇಕು ಎಂದು ಎಂದು ಕನಸು ಕಾಣುತ್ತಿದ್ದ ಹೆಗಡೆ, ಅದಕ್ಕಾಗಿ ಕಥೆಯೊಂದನ್ನು ಸಿದ್ದ ಪಡಿಸಿದರು, ದರ್ಶನ್ ಅದಕ್ಕೆ ಸರಿಯಾದ ಹೀರೋ ಎಂದು ಬೆಂಗಳೂರಿಗೆ ಬಂದು ದರ್ಶನ್ ಬೇಟಿಯಾಗಿ ಕಥೆಯ ಬಗ್ಗೆ ವಿವರಿಸುವಾಗ ಒಂದೇ ಕ್ಷಣದಲ್ಲಿ ಒಕೆ ಅಂದರಂತೆ, ಅಷ್ಟು ಮೆಚ್ಚಿಕೊಂಡ ಕಥೆ ಈಗ ಜಗ್ಗುದಾದನಾಗಿ ಹೊರ ಬಂದು ಜೂನ್ 10 ರಂದು ಬಿಡುಗಡೆಯಾಗುತ್ತಿದೆ, ಸುಮಾರು 18 ಕೊಟಿ ವೆಚ್ಚದ ಈ ಚಿತ್ರದಲ್ಲಿ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿಯಾಗಿ ಅಬಿನಯಿಸುತ್ತಿದ್ದು, ಉಳಿದಂತೆ ಮಜಾ ಟಾಕಿಸ್ ಖ್ಯಾತಿಯ ಸಜನ್ ಲೋಕೇಶ್, ಬುಲೆಟ್ ಪ್ರಕಾಶ್ ಮತ್ತಿತರು ನಟಿಸುತ್ತಿದ್ದಾರೆ, ಚಿತಕ್ಕೆ ವಿ ಹರಿಕೃಷ ಸಂಗೀತ, ನಾಗೇಂದ್ರ ಪ್ರಸಾದ್, ಕವಿರಾಜ್ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದು, ಹಾಡೊಂದಕ್ಕೆ ತುಳು ತುಣುಕು ಸೇರಿಸಿದ್ದು ಸಾಕಷ್ಟು ಹವಾ ಎಬ್ಬಿಸಿದೆ. ಎಚ್. ಸಿ. ವೇಣು ಅದ್ಬುತ ಛಾಯಾಗ್ರಹಣ ಚಿತ್ರಕ್ಕಿದೆ.
ರಾಘವೇಂದ್ರ ಹೆಗ್ಡೆ ಮಂಗಳೂರು ತಾಲೂಕಿನ ಮೂಡಬಿದ್ರೆಯ ನಾರವಿಯವರು ಬಾಲ್ಯದಿಂದಲೇ ಕಷ್ಟದ ದಿನಗಳು, ಹೊಟ್ಟೆಪಾಡಿಗಾಗಿ ಹಾಸನಕ್ಕೆ ತೆರಳಿ 1988ರಲ್ಲಿ ಅಲ್ಲಿಂದ ನೇರವಾಗಿ ಮುಂಬೈ ನಗರಕ್ಕೆ ಕಾಲಿರಿಸಿದರು ಅಲ್ಲಿ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ನಂತರ ಆಟೊ ಚಾಲಕರಜಗ್ಗುದಾದಾಗಿಯೂ ದುಡಿಯುತ್ತಿದ್ದರು, ಆಕಸ್ಮಾತ್ ಸಿನಿಮಾ ರಂಗಕ್ಕೆ ಕಾಲಿರಿಸಿ ಅಲ್ಲಿ ತಾಂತ್ರಿಕ ವಿಬಾಗದಲ್ಲಿ ಸಾಕಷ್ಟು ಮಾಹಿತಿ ಪಡೆದರು, ಆಗಲೇ ಶೇಖರ್ ಕಪೂರ್ ಅವರ ‘ಬ್ಯಾಂಡಿಟ್ ಕ್ವೀನ್’ ಸಿನೆಮಾದ ಸಂಕಲನ ಕಾರ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ರಾಘವೇಂದ್ರ. ಹೆಗ್ಡೆ ಅವರ ಸಂತೋಷದ ದಿನಗಳಾಗಿದ್ದವು
ಈ ಕೆಲಸಕ್ಕೆ ಹೆಗ್ಡೆ ಅವರಿಗೆ ಯಾವುದೇ ಸಂಭಾವನೆ ಸಿಗಲಿಲ್ಲ ಆದರೆ ಅನುಭವವನ್ನು ದೊರಕಿತು ನಂತರದ ದಿನಗಳಲ್ಲಿ ಮರಾಠಿ ನಿರ್ದೇಶಕ ದಾದಾ ಕೊಂಡ್ಕೆ ಅವರೊಂದಿಗೆ ಸಹ ನಿರ್ದೇಶಕರಾಗಿ ಸೇರಿಕೊಂಡ ಹೆಗ್ಡೆ ಕಿರು ತೆರೆಯಲ್ಲಿ ಸಂಕಲನಕಾರನಾಗಿ ತೊಡಗಿಸಿಕೊಂಡು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಕೆಲಸ ಪಡೆದುಕೊಂಡರು.
ಕೆಲವೇ ಸಮಯದಲ್ಲಿ ತಮ್ಮ ಆರ್ ಎಚ್ ಎಂಟಟರ್ೈನ್ ಮೆಂಟ್ ಎಂಬ ಸ್ವಂತ ಸಂಸ್ಥೆ ಪ್ರಾರಂಬಿಸಿ ಸ್ಟಾರ್ ಪ್ಲಸ್, ಜೀ ಟಿವಿ, ಸೋನಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ಸುಮಾರು 30 ರಿಂದ 32 ಧಾರಾವಾಹಿಗಳಿಗೆ ಒಂದೇ ಸೂರಿನಡಿ ಸಂಗೀತ, ಡಬ್ಬಿಂಗ್, ಕಲರಿಂಗ್ ಮತ್ತು ಮಾಸ್ಟರಿಂಗ್ ಕೆಲಸಗಳನ್ನು ಮಾಡಿ ಕೆಲಸ ಮಾಡಿಕೊಡುತ್ತಿದ್ದರು. ನಂತರ ಮಂಗಳೂರಿನ ಮೋಹನ್ ಶೆಟ್ಟಿ ನಿರ್ಮಿಸಿದ ‘ಪ್ರತಿಗ್ಯ’ ಧಾರಾವಾಹಿಯನ್ನು ತಾವೇ ಪ್ರಾರಂಭಿಸಿದ ಮೇಲೆ ಸುಮಾರು 25 ಇತರ ಧಾರಾವಾಹಿಗಳಿಗೆ ಅವಕಾಶ ಬಂದಿತ್ತು.
18 ಕೋಟಿ ಬಜೆಟ್ನಲ್ಲಿ ಜಗ್ಗುದಾದ ನಿರ್ಮಿಸಿ ನಿರ್ದೇಶಿಸಿದ ಹೆಗಡೆಗೆ, ಮುಂಬೈನಲ್ಲಿರುವ ಅವರ ಹಲವು ಗೆಳೆಯರು ಹೂಡಿಕೆ ಮಾಡಿದ್ದು, ‘ಜಗ್ಗುದಾದಾ’ ಬಗ್ಗೆ ಅಪಾರ ಭರವಸೆ ಇಟ್ಟಿದ್ದಾರೆ, ತುಳು ಯುವಕನ ಸಿನಿಮಾ ಯಶಸ್ಸಾಗಲಿ ಎಂಬುದೇ ನಮ್ಮ ಹಾರೈಕೆ.
ನಿಶಾಂತ್ ಕಿಲೆಂಜೂರು


