ಮುಂಬಯಿ, ಜೂ.05: ಕೊಂಕಣಿ ಕಥೊಲಿಕ್ ಎಸೋಸಿಯೇಶನ್ ನಲ್ಲಸೋಫರಾ (ಕೆಸಿಎ) ಸಂಸ್ಥೆಯು ಆರ್ಥಿಕ ಹಿಂದುಳಿದ ಶಾಲಾ ಮಕ್ಕಳಿಗೆ ವಾರ್ಷಿಕ ವಾಗಿ ಪ್ರದಾನಿಸುವ 2016ನೇ ಸಾಲಿನ ಪಠ್ಯಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಸಂಜೆ ನಲ್ಲಾಸೋಫರಾ ಪೂರ್ವದಲ್ಲಿನ ಕೆಸಿಎ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು.

K.C.A.Nalopra Book Dstrbtn-2

K.C.A.Nalopra Book Dstrbtn-6

ಕೆಸಿಎಎನ್ ಅಧ್ಯಕ್ಷ ಹ್ಯಾರಿ ಬಿ.ಕುಟಿನ್ಹೋ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಸಿಎ ಸಂಸ್ಥೆ ಧಮರ್ಾರ್ಥವಾಗಿ ಕೊಡಮಾಡುವ ಶೈಕ್ಷಣಿಕ ಪರಿಕರಣೆಗಳನ್ನು ಪದಾಧಿಕಾರಿಗಳು ವಿತರಿಸಿ ಶುಭಕೋರಿದರು.

ಹ್ಯಾರಿ ಬಿ.ಕುಟಿನ್ಹೋ ಅಧ್ಯಕ್ಷೀಯ ನುಡಿಗಳನ್ನಾಡಿ ಶಿಕ್ಷಣ ಸಾಧನೆಯ ಸಾಧನ ಆಗದೆ ಅದು ಅರಿವಿನ ಧ್ಯೋತಕವಾಗಬೇಕು. ಸಂಸ್ಕಾರಯುತ ಬದುಕು ರೂಪಿಸಲೂ ಪೂರಕವಾಗಬೇಕು. ಇಂತಹ ಇಚ್ಛಾ ಶಕ್ತಿಯ ಶಿಕ್ಷಣದಿಂದ ಮಾತ್ರ  ವಿದ್ಯಾರ್ಥಿಗಳ ಸರ್ವಸ್ವ ಸಾಧ್ಯ. ಪೋಷಕರ ಆಶಯವನ್ನು ಪೂರೈಸಲು ಭಿನ್ನತೆಯ ಶಿಕ್ಷಣಕ್ಕೆ ಮಣಿದು ಖಿನ್ನತೆಗೊಳಗಾಗದೆ ತಮ್ಮ ಇಚ್ಛೆಯ ಆದರೆ ಬದುಕು ನಿಮರ್ಾಣಕ್ಕೆ ಪೂರಕವಾಗುವ ಶಿಕ್ಷಣಕ್ಕೆ ಮಕ್ಕಳು ಮಹತ್ವ ನೀಡಬೇಕು. ಈ ಸಂಸ್ಥೆಯು ನಿರಂತರವಾಗಿ ಕಳೆದ ಹತ್ತೊಂಭತ್ತು ವರ್ಷಗಳಿಂದ ಮಕ್ಕಳನ್ನು ಪ್ರೋತ್ಸ್ಸಾಹಿಸಿ ಬಂದಿದೆ. ಮಕ್ಕಳು ಇದರ ಫಲಾನುಭವ ಪಡೆದು ಸಂತೃಪ್ತರಾಗುತ್ತಿರುವುದು ನಮಗೆ ಮತ್ತಷ್ಟು ಸೆವಾ ಪ್ರೇರಣೆ ನೀಡುತ್ತಿದೆ. ಮಕ್ಕಳು ವಿದ್ಯಾಥರ್ಿ ಜೀವನದಲ್ಲೇ ಸಾಮಾಜಿಕ ಮತ್ತು ನಾಯಕತ್ವ ಸದ್ಗುಣಗಳನ್ನು ರೂಪಿಸಿಕೊಳ್ಳಬೇಕು. ಆವಾಗಲೇ ಅವರಿಂದ ಭವಿಷ್ಯತ್ತಿನ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಿಸುವ ಮನೋಭಾವ ತನ್ನೀಂತಾನೇ ಬೆಳೆಯಲು ಸಾಧ್ಯ ಎಂದರು.

K.C.A.Nalopra Book Dstrbtn-9

K.C.A.Nalopra Book Dstrbtn-A1

K.C.A.Nalopra Book Dstrbtn-A2

K.C.A.Nalopra Book Dstrbtn-B1

K.C.A.Nalopra Book Dstrbtn-B3

ಈ ಬಾರಿಯೂ ನೂರಾರು ಸ್ಥಳೀಯ ಬಡ ಮಕ್ಕಳಿಗೆ ಬರವಣಿಕಾ ಪುಸ್ತಕಗಳು, ಸಮವಸ್ತ್ರ ಮತ್ತು ಪಠ್ಯಚಟುವಟಿಕೆಗಳ ಇತರೇ ಸಾಮಾಗ್ರಿಗಳನ್ನು ವಿತರಿಸಿದ್ದು, ಕೆಸಿಎ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್, ಹಿಲ್ಡಾ ಡಿ’ಸೋಜಾ, ಲವಿನಾ ಡಾಯಸ್, ಡೈನಾ ಮೊರಾಯಸ್, ರೋಮಿಯೋ ಕಾಸ್ತೆಲಿನೋ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು.

ಉಪಾಧ್ಯಕ್ಷೆ ಗ್ರೇಸಿ ಪಿಂಟೋ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಿಚಾಡರ್್ ಪಿಂಟೋ ಮತ್ತು ರೊನಾಲ್ಡ್ ಪಾಸ್ ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು ಕೋಶಾಧಿಕಾರಿ ಆಲ್ವಿನ್ ಎಫ್.ಡಿ’ಸೋಜಾ ಮುದರಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದಶರ್ಿ ಕ್ಲಾಡ್ ಡಿ’ಸಿಲ್ವಾ ಅಭಾರಮನ್ನಿಸಿದರು.

By suddi9

Leave a Reply

Your email address will not be published. Required fields are marked *