ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಳ್ಳಾಲ ಹಾಗೂ ತೊಕ್ಕೋಟು ಸೆಕ್ಟರುಗಳ ಜಂಟಿ ಆಶ್ರಯದಲ್ಲಿ ರಮಳಾನ್ ಸಿದ್ಧತಾ ಸಮಾವೇಶ ಹಾಗೂ 2018 ರ ಉಳ್ಳಾಲ ನಗರ ಸಭಾ ಚುನಾವಣಾ ಪೂರ್ವಭಾವಿ ಸಭೆ ತೊಕ್ಕೋಟು ಯುನಿಟಿ ಹಾಲ್ ನಲ್ಲಿ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

IMG_20160605_151926

IMG-20160605-WA0015

ಕೇರಳ ಎಸ್ ವೈ ಎಸ್ ಉಪಾಧ್ಯಕ್ಷರಾದ ಬಹು ರಫೀಕ್ ಸಅದಿ ಬಾಕಿಮಾರ್ ರಂಝಾನ್ ಉಪವಾಸದ ಕುರಿತು ತರಗತಿ ನಡೆಸಿದರು.ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಮಾಜಿ ಹಂಗಾಮಿ ಅಧ್ಯಕ್ಷ ಅಬ್ದುಲ್ ಬುಖಾರಿ ಕಲ್ಲಾಪು,ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಞ್ಞಿಮೋನು,ಕಲ್ಲಾಪು ಕೌನ್ಸಿಲರ್ ಉಸ್ಮಾನ್ ಕಲ್ಲಾಪು,ಮಾಸ್ತಿಕಟ್ಟೆ ಕೌನ್ಸಿಲರ್ ಶೌಕತ್,ಇಸ್ಮಾಯಿಲ್ ಮಾಸ್ಟರ್,ಅಶ್ರಫ್ ಕಿನಾರ, ಅಲ್ತಾಫ್ ಕುಂಪಲ,ಮುನೀರ್ ಸಖಾಫಿ,ಖುಬೈಬ್ ತಂಗಳ್,ಅಬ್ಬಾಸ್ ಮದನಿ,ಫಾರೂಖ್ ಸಖಾಫಿ,ಹಮೀದ್ ಮದನಿ ಕೈಕೋ,ಇಲ್ಯಾಸ್ ಸಖಾಫಿ,ಬಶೀರ್ ಸಖಾಫಿ,ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ,ಯೂಸುಫ್ ಮುಸ್ಲಿಯಾರ್,ಹಾಪಿಝ್ ಮುಈನುದ್ದೀನ್ ಪ್ರಸ್ತುತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *