- ಬಂಟ್ವಾಳ : ದ.ಕ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪ್ರೀಮಿಯರ್ ಲೀಗ್ ಮಾದರಿಯ ಪುಟ್ಬಾಲ್ ಪಂದ್ಯಾಟಕ್ಕೆ ಶನಿವಾರ ಬೆಳಿಗ್ಗೆ ಫರಂಗಿಪೇಟೆಯಲ್ಲಿ ಚಾಲನೆ ಸಿಕ್ಕಿದೆ. ಇಲ್ಲಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಮೈದಾನದಲ್ಲಿ ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಪುಟ್ಬಾಲ್ ಲೀಗ್ ಪಂದ್ಯಾವಳಿಯು ನಡೆಯಿತು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.


ಈ ಸಂದರ್ಭ ಮಾತನಾಡಿದ ಅವರು ಪುಟ್ಬಾಲ್ ವಿಶ್ವದಲ್ಲಿ ಹೆಚ್ಚು ಜನರನ್ನು ಸೆಳೆದ ಆಟ. ಆದರೆ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಇರುವುದರಿಂದ ಪುಟ್ಬಾಲ್ ಆಟ ಮಹತ್ವ ಪಡೆದುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಯುವಕರು ಪುಟ್ಬಾಲ್ ಆಟದತ್ತವೂ ಹೆಚ್ಚು ಒಲವು ತೋರುತ್ತಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಿರುವ ಯುನೈಟೆಡ್ ಸ್ಫೋಟ್ಸ್ ಕ್ಲಬ್ನ ಕಾರ್ಯ ಶ್ಲಾಘನೀಯ ಎಂದು ಅಭಿನಂದಿಸಿದರು.- ಕ್ರೀಡೆ ದೈಹಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಪ್ರಯೋಜನಕಾರಿಯಾದುದು, ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳವುದುರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಜೊತೆಗೆ ಕ್ರೀಡಾ ಮನೋಭಾವನೆಯಿಂದಾಗಿ ಸಾಮಾಜಿಕ ಸಾಮಾರಸ್ಯವನ್ನು ಹೆಚ್ಚಿಸಿಕೊಂಡು ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಜಿ.ಪಂ.ಮಾಜಿ ಸದಸ್ಯ, ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ನ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪುಟ್ಬಾಲ್ ಪ್ರತಿಭೆಗಳಿನ್ನು ಗುರುತಿಸುವ ಸಲುವಾಗಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಂತ ಕ್ರೀಡೆಯಾಗಿರುವ ಪುಟ್ಬಾಲ್ ಈಗ ದೇಶದಲ್ಲಿಯೂ ಹೆಚ್ಚು ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಸ್ಥಳೀಯ ಪುಟ್ಬಾಲ್ ಪ್ರತಿಭೆಗಳನ್ನು ಕ್ಲಬ್ನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ ಲೀಗ್ ಮಾದರಿಯಲ್ಲಿ ಈ ಪಂದ್ಯಾಟ ನಡೆಯಲಿದೆ ಎಂದರು. ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ವಿವಿಧ ಪಂದ್ಯಾಟಗಳನ್ನು ನಡೆಸಿಕೊಂಡು ಬರಲಾಗಿದ್ದು, ಇದೇ ಮೊದಲ ಬಾರಿಗೆ ಪುಟ್ಬಾಲ್ ಪಂದ್ಯಾಟ ನಡೆಯುತ್ತಿದೆ, ಪಂದ್ಯದ ಯಶಸ್ಸಿಗ್ಗೆ ಎಲ್ಲಾ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯ ಎಂದರು.
ಯುನೈಟೆಡ್ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್ ಕ್ಲಬ್ನ ಪ್ರಮುಖರಾದ ಗಪೂರ್ ದುಬೈ, ಆಸೀಫ್ ಮೇಲ್ಮನೆ, ಇಕ್ಬಾಲ್ ಮಾರಿಪಳ್ಳ, ಸೆಲೀಂ ತೆಲ್ಲಿ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಲೈಮಾನ್, ರಫೀಕ್ ಪೇರಿಮಾರ್ ವೇದಿಕೆಯಲ್ಲಿದ್ದರು. ಹಾಗೂ ಎಂಟು ತಂಡಗಳ ಮಾಲಕರು ಹಾಜರಿದ್ದರು.
ಟುಡೇ ಸೋಕರ್ಸ್, ತರವಾಡ್ ಸ್ಟ್ರೈಕರ್ಸ್, ಮಾರಿಪಳ್ಳ ಸೋಕರ್ಸ್, ಯುನೈಟೆಡ್ ಸೋಕರ್ಸ್, ಈಗಲೈಟ್, ಪ್ಲೈಯಿಂಗ್ ಏಂಜಲ್ಸ್, ಇಲೆವನ್ ಜಾಗರ್ಸ್, ಶಯಾನ್ ವಾರಿಯರ್ಸ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಉದ್ಘಾಟನ ಕಾರ್ಯಕ್ರಮದ ಮುಂಚಿತವಾಗಿ ಫರಂಗಿಪೇಟೆ ಜಂಕ್ಷನ್ ಬಳಿಯಿಂದ ಪಂದ್ಯಾಟ ನಡೆಯುವ ಮೈದಾನದವರೆಗೆ ಮೆರವಣಿಗೆ ನಡೆಯಿತು.
