ಬಂಟ್ವಾಳ :ಕೆನರಾ ಬ್ಯಾಂಕ್ ಗ್ರಾಮೋದಯ ಯೋಜನೆ ವತಿಯಿಂದ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮವನ್ನು ದತ್ತು ಪಡೆದುಕೊಂಡಿದ್ದು ವಿವಿಧ ಯೋಜನಾ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು.
ಬ್ಯಾಂಕ್ ಮಹಾಪ್ರಬಂಧಕ ಎಸ್.ಎಸ್ ಭಟ್ ಅವರು ಗ್ರಾಮದ ವಿವಿಧೆಡೆ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
2805pkt1(revised)
ಬಳಿಕ ಸೊರ್ನಾಡು ಕೆನರಾ ಬ್ಯಾಂಕ್ ವಠಾರದಲ್ಲಿ ನಡೆದ ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಜನಾನುಕೂಲ ಯೋಜನೆಗಳಿಂದ ಮತ್ತು ಸ್ಪರ್ಧೆಗಳನ್ನು ನಿಭಾಯಿಸುವ ಮೂಲಕ ಗ್ರಾಹಕರ ಇಷ್ಟಾರ್ಥಗಳನ್ನು ಪೂರೈಸುವುದು ಕೆನರಾ ಬ್ಯಾಂಕ್ ಸ್ಥಾಪಕರ ಆಶಯವಾಗಿದ್ದು ಗ್ರಾಹಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಗ್ರಾಮೋದಯ ಯೋಜನೆ ಮೂಲಕ ದಶ ಸೂತ್ರಗಳಿಂದ ಗ್ರಾಮದ ಸಮೀಕ್ಷೆ ನಡೆಸಿ ಗ್ರಾಮದ ಸವರ್ಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಂಗಳೂರು ವೃತ್ತ ಕಛೇರಿ ಉಪ ಮಹಾಪ್ರಬಂಧಕ ಜಿ.ವಿ.ಪ್ರಭು,ಸಹಾಯಕ ಉಪ ಮಹಾಪ್ರಬಂಧಕ ಸತೀಶ್ಚಂದ್ರ ಶೆಟ್ಟಿ, ಡಿವಿಜನಲ್ ಮೇನೇಜರ್ ವಸಂತ ಶೆಟ್ಟಿ , ಕುರಿಯಾಳ ಶಾಖಾ ಪ್ರಬಂಧಕ ರಮೇಶ್ ನಾಯಕ್ ಅವರು ವೇದಿಕೆಯಲ್ಲಿದ್ದರು. ಮಂಗಳೂರು ವೃತ್ತ ಕಛೇರಿ ಅಧಿಕಾರಿಗಳು ಮತ್ತು ಸಿಬಂದಿಗಳು,ವಿವಿಧ ಶಾಖಾ ಪ್ರಬಂಧಕರು ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಗ್ರಾಹಕ ಸೇವಾ ಬಳಕೆದಾರರನ್ನು ಸಮ್ಮಾನಿಸಲಾಯಿತು.ಎಸ್.ಎಸ್.ಭಟ್, ಜಿ.ವಿ.ಪ್ರಭು,ಸತೀಶ್ಚಂದ್ರ ಶೆಟ್ಟಿ, ವಸಂತ ಶೆಟ್ಟಿ ಅವರನ್ನು ಸಾರ್ವಜನಿಕರ ಮತ್ತು ಶಾಖಾ ವತಿಯಿಂದ ಸಮ್ಮಾನಿಸಲಾಯಿತು. ಕುರಿಯಾಳ ಗ್ರಾಮ ವ್ಯಾಪ್ತಿಯ ರಸ್ತೆಯ ವಿವಿಧೆಡೆ ಸೋಲಾರ್ ದೀಪ ,ಬಸ್ ತಂಗುದಾಣ,ಆರೋಗ್ಯ ಕೇಂದ್ರ,ಶಾಲೆಗೆ ಕಂಪ್ಯೂಟರ್,ನವೀಕೃತ ಶಾಲಾ ಕಟ್ಟಡಗಳನ್ನು ಉದ್ಘಾಟಿಸಲಾಯಿತು.ಪ್ರಗತಿಪರ ಕೃಷಿಕರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ರಘುನಾಥ್ ಪಯ್ಯಡೆ,ಡಾ.ಭಾಸ್ಕರ್ ರಾವ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಬಲ ವಾದಕ ಲಕ್ಷ್ಮಣ್ ಭಟ್ ಮತ್ತು ಕೊಳಲು ವಾದಕ ಲೋಕೇಶ್ ಸಂಪಿಗೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಬ್ಯಾಂಕ್ ಅಧಿಕಾರಿ ಸಚ್ಚಿದಾನಂದ ಅವರು ಸ್ವಾಗತಿಸಿದರು.ರಮೇಶ್ ನಾಯಕ್ ವಂದಿಸಿದರು.ಪತ್ರಕರ್ತ ಅರುಣ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *