ವಿಟ್ಲ: ಕರ್ನಾಟಕ ಗಡಿಯೊಳಗೆ ಬಂದ ಕೇರಳ ಪೊಲೀಸರು ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದು, ಮಾಧ್ಯಮಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಪಲಾಯನಗೈದ ಘಟನೆ ಶುಕ್ರವಾರ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ನಡೆದಿದೆ.ಕೇರಳದಲ್ಲಿ ಚುನಾವಣೆ ಕಾವು ಏರುತ್ತಿರುವ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಸರಗೋಡು ಬೇಟಿ ನೀಡುವ ಹಿನ್ನಲೆಯಲ್ಲಿ ಗಡಿಗಳಲ್ಲಿ ಸೂಕ್ತ ಭದ್ರತೆಗೆ ಕೇರಳ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಆದರೆ ಪೊಲೀಸರು ಮಾತ್ರ ಹಿರಿಯ ಅಧಿಕಾರಿಗಳ ಸೂಚನೆಯನೆಗಿಂತ ಒಂದು ಹೆಜ್ಜೆ ಮುಂದೆ ಇಟ್ಟು ಗಡಿ ದಾಟಿ ಕರ್ನಾಟಕದಲ್ಲಿ ಬಂದು ನಿಂತು ವಾಹನಗಳ ತಪಾಸಣೆ ನಡೆಸಿ ದಂಡ ವಿದಿಸಿ ಪೊಲೀಸ್ ಖಧರ್ ತೋರಿಸುತ್ತಿದ್ದರು. ಸುಮಾರು ಒಂದು ತಾಸಿದ ಕಾಲ ಇಲ್ಲೇ ನಿಂತು ದಂಡ ಪ್ರಯೋಗ ಮಾಡಿದ್ದಾರೆ.

20160506_133046

20160506_132954

ವಿಟ್ಲ ಕಾಸರಗೋಡು ರಸ್ತೆಯ ಅಡ್ಯನಡ್ಕ ಸಮೀಪದ ಸಾರಡ್ಕ ಚೆಕ್ ಪೋಸ್ಟ್ಗಿಂತ 500 ಮೀಟರ್ ದೂರದಲ್ಲಿ ಕೇರಳ ಗಡಿಕಲ್ಲು ಇದೆ. ಈ ಗಡಿಕಲ್ಲು ದಾಟಿ ಸುಮಾರು 100 ಮೀಟರ್ ಮುಂದೆ ಬಂದು ರಸ್ತೆಯಲ್ಲೇ ಜೀಪ್ ನಿಲ್ಲಿಸಿ ಕೇವಲ ಕರ್ನಾ ಟಕದಿಂದ ಹೋಗುವ ವಾಹನಗಳನ್ನು ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಕೇರಳ ಕಡೆಯಿಂದ ಶಿರಕವಚ ವಿಲ್ಲದೆ ಬೈಕ್ ಸವಾರರು ಬಂದರೂ ನಿಲ್ಲಿಸಿ ದಂಡ ಪ್ರಯೋಗ ನಡೆಸದೆ ಬಿಡುತ್ತಿದ್ದರು. ಇದು ಕರ್ನಾಟಕ ವಾಹನದವ ಆಕ್ರೋಶಕ್ಕೆ ಕಾರಣವಾಯಿತು.

ಮಾಧ್ಯಮ ಪ್ರಶ್ನೆಗೆ ನಿರುತ್ತರ!
ವಾಹನ ಮಾಲಕರ ದೂರಿನ ಆಧಾರದಲ್ಲಿ ಸ್ಥಳಕ್ಕೆ ಮಾಧ್ಯಮಗಳು ತೆರಳಿದಾಗ ದಂಡ ವಿಧಿಸುವುದರಲ್ಲಿ ಮಘ್ನರಾಗಿದ್ದ ಕೇರಳ ಪೊಲೀಸರು ಲಾರಿಯೊಂದನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಬೇರೆ ವಾಹನ ಸಂಚಾರಕ್ಕೂ ತೊಂದರೆ ನೀಡುತ್ತಿದ್ದರು. ಗಡಿ ಎಲ್ಲಿ, ನೀವೆಲ್ಲಿದ್ದೀರಿ ಎಂದು ಪ್ರಶ್ನಿಸಿದರೂ ಮೌನವಾಗಿದ್ದ ಪೊಲೀಸರು ಸ್ವಲ್ಪ ಸಮಯದಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ದ ಕ ಪೊಲೀಸರಿಂದ ಪರಿಶೀಲನೆಯ ಭರವಸೆ:
ಗಡಿ ಬಿಟ್ಟು ಮುನ್ನುಗಿದ ಕೇರಳ ಪೊಲೀಸ್ ಕ್ರಮದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ನೀಡಿದಾಗ ಸ್ಥಳ ಪರಿಶೀಲನೆ ನಡೆಸಿ ಕರ್ನಾಟಕ ವ್ಯಾಪ್ತಿಯಲ್ಲಿದ್ದರೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರಿಕ್ಷಾ ಚಾಲಕರ ಮೇಲೆ ದಂಡ:
ಕರ್ನಾಟಕ ಪರವಾನಿಗೆ ಅಟೋ ರಿಕ್ಷಾಗಳಿಗೆ ಕೇರಳದಲ್ಲಿ ಸಂಚರಿದ ನೆಪದಲ್ಲಿ ಪೆರ್ಲ ಆರ್ ಟಿ ಓ ಚೆಕ್ ಪೋಸ್ಟ್ ದಂಡ ವಿಧಿಸಿದ್ದರು. ಈ ಹಿನ್ನಲೆಯಲ್ಲಿ ಕೇರಳದ ರಿಕ್ಷಾಗಳೂ ಕನರ್ಾಟಕದಲ್ಲಿ ಸಂಚರಿಸುವುದು ಬೇಡವೆಂದು ಅವುಗಳನ್ನು ತಡೆ ಹಿಡಿದು ಪ್ರತಿಭಟಿಸಿದ ಘಟನೆ ಸೆ.16ಕ್ಕೆ ಸಾರಡ್ಕ ಚೆಕ್ ಪೋಸ್ಟ್ನಲ್ಲಿ ನಡೆದಿತ್ತು. ಆ ಬಳಿಕ ಇರಡೂ ಕಡೆಯ ರಿಕ್ಷಾಗಳೂ ಸಂಚರಿಸುವ ಬಗ್ಗೆ ಒಪ್ಪಂದಕ್ಕೆ ಬರಲಾಗಿತ್ತು.

By suddi9

Leave a Reply

Your email address will not be published. Required fields are marked *