ಬಂಟ್ವಾಳ: ನೀರಿಲ್ಲದೆ ಬರಿದಾದ ನೇತ್ರಾವತಿ ನದಿಯ ಒಡಲಿಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟ ಘಟನೆ ಮಂಗಳವಾರ ನಡೆದಿದೆ.
ಪಾಣೆಮಂಗಳೂರಿನ ಕಂಚಿಕಾರ ಪೇಟೆ ಬಳಿ ನೇತ್ರಾವತಿ ನೀರು ಬರಿದಾಗಿದ್ದು, ಅಲ್ಲಿ ಕಾಣಿಸಿಕೊಳ್ಳುತ್ತಿರುವ ಮರಳಿನಲ್ಲಿ ಹುಲ್ಲು ಬೆಳೆದಿದ್ದು ಅದಕ್ಕೆ ಯಾರೋ ದುಷ್ಕರ್ಮಿಗಳು ಬೆಂಕಿ ಕೊಟ್ಟಿದ್ದಾರೆ.
ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿ ಮರಳು ಗಾರಿಕೆ ನಡೆಸುವ ನಿಟ್ಟಿನಲ್ಲಿ ಬೆಂಕಿ ಕೊ ಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


