ಬಂಟ್ವಾಳ:  ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದ್ದ ಡಿವೈಡರ್ ತೆರವು ಪ್ರಹಸನಕ್ಕೆ ಮುಕ್ತಿ ಸಿಕ್ಕಿದೆ. ಚತುಷ್ಪಥ ಮೇಲ್ಸೆತುವೆಗೆ ಸಂಪರ್ಕ ಕಲ್ಪಿಸಲು ಡಿವೈಡರ್ ತೆರವುಗಳಿಸಿದ್ದ ಭಾಗದಲ್ಲಿ ಬಂಟ್ವಾಳ ನಗರ ಪೊಲೀಸರು ಭಾನುವಾರ ಬ್ಯಾರೀಕೇಡ್ ಹಾಗೂ ರಿಬ್ಬನ್ ಕಟ್ಟಿ ಮತ್ತೆ ಮೇಲ್ಸೆತುವೆಯ ಮೇಲಿಂದ ಕೇವಲ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಿ.ಸಿ.ರೋಡಿನಲ್ಲಿ ಕಳೆದ ಹಲವು ದಿನಗಳಿಂದ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಇಲ್ಲಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಫ್ಲೈ ಓವರ್ನಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ರಾ.ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೇಶಕ ಶ್ರೀರಾಂಮಿಶ್ರ ಅವರಿಗೆ ಸೂಚಿಸಿದ್ದರು. ಅದರಂತೆ ರಾ.ಹೆದ್ದಾರಿ ಪ್ರಾಧಿಕಾರದ ಕಾಮರ್ಿಕರು ಎರಡೇ ದಿನದಲ್ಲಿ ಸ್ವಲ್ಪ ಭಾಗ ಡಿವೈಡರನ್ನು ತೆರವುಗೊಳಿಸಿ ವಾಹನಗಳು ಮೇಲ್ಸೆತುವೆಯ ಮೂಲಕವೂ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಇದರಿಂದ ಟ್ರಾಫಿಕ್ ಜಾಮ್ ನಿವಾರಣೆಯಾಗುವ ಬದಲು ಇನ್ನೂ ಬಿಗಡಾಯಿಸಿತು. ರಾ.ಹೆದ್ದಾರಿಯಲ್ಲಿ ಮಾತ್ರ ಕಾಣಿಸುತ್ತಿದ್ದ ವಾಹನ ದಟ್ಟಣೆ ಮೇಲ್ಸೆತುವೆಯ ಮೇಲೂ ಕಂಡು ಬಂತು. ಡಿವೈಡರ್ ತೆರವುಗೊಳಿಸಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು ಈ ಇದೀಗ ಡಿವೈಡರ್ ತರವುಗೊಳಿಸಿದ ಜಾಗದಲ್ಲಿ ಪೊಲೀಸರೇ ಬ್ಯಾರೀಕೇಡ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ಅವೈಜ್ಞಾನಿಕ ಮಾದರಿಯಲ್ಲಿ ನಿಮರ್ಾಣಗೊಂಡಿರುವ ಮೇಲ್ಸೆತುವೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾದ ಬಳಿಕವೇ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಏಕಾಏಕಿ ಡಿವೈಡರ್ ತೆರವುಗೊಳಿಸಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈ ನಡುವೆ ರಾ. ಹೆದ್ದಾರಿಯಲ್ಲಿ ಹಂಪ್ಸ್ ನಿಮರ್ಿಸಿರುವುದು ಚಾಲಕರ ಟೀಕೆಗೆ ಗುರಿಯಾಗಿದೆ.

By suddi9

Leave a Reply

Your email address will not be published. Required fields are marked *