ಬಂಟ್ವಾಳ : ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾಮಕ ಕಾರ್ಯಕ್ರಮದ ಅಂಗವಾಗಿ ಪುಣ್ಯಾಂಹ ಪಂಚಗವ್ಯ , ಗಣಹೋಮ, ಧೃಡಕಲಶಾಭಿಷೇಕ, ಫಲಪಂಚಾಮೃತಾಭಿಷೇಕ , ಪ್ರಸನ್ನ ಪೂಜೆ ಮಹಾಮಂಗಳಾರತಿ ಮಹಾಪೂಜೆ ಅನ್ನದಾನದೊಂದಿಗೆ ಸಂಪನ್ನಗೊಂಡಿತು. ಭಜನಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರಗಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ದೇವಿಪ್ರಸಾದ್ ಪೂಂಜ, ಎಂ.ಸುಬ್ರಹ್ಮಣ್ಯ ಭಟ್, ಜಯಶಂಕರ್ ಬ್ರಾಸಿತ್ತಾಯ, ಯೋಗೀಶ್ ಬೆಳ್ಚಾಡ, ಲಿಂಗಪ್ಪ ಮಾರಪ್ಪ ಕೊಟ್ಟಾರಿ, ಜಯಪ್ರಕಾಶ್, ವಾಸು ಗಟ್ಟಿ, ಶಂಕರ ನಾರಾಯಣ ಭಟ್, ಪರಮೇಶ್ವರ ಹೇರಳೆ, ಸದಾನಂದ ಶೆಟ್ಟಿ ಕೆ., ಮತ್ತಿತರರು ಉಪಸ್ಥಿತರಿದ್ದರು.
